ರಾಜ್ಯ ಸರ್ಕಾರ ಜನವರಿ 22ಕ್ಕೆ ರಜೆ ಘೋಷಣೆ ಮಾಡಲಿ: ವಿಜಯೇಂದ್ರ

Public TV
1 Min Read

ಬೆಂಗಳೂರು: ರಾಜ್ಯ ಸರ್ಕಾರ ಮತ್ತೊಮ್ಮೆ ಮನವಿ ಮಾಡುತ್ತೇವೆ. ಸರ್ಕಾರಿ ರಜೆ ಘೋಷಣೆ ಮಾಡಿ ರಾಮಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಹೇಳಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಈಗಾಗಲೇ ಹಲವು ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ (Central Govt) ಕೂಡ ಅರ್ಧ ದಿನ ರಜೆ ಘೋಷಣೆ ಮಾಡಿದೆ. ಹಾಗಾಗಿ ರಾಜ್ಯದಲ್ಲೂ ರಜೆ ಘೋಷಣೆ ಮಾಡಬೇಕು ಅಂತಾ ಮನವಿ ಮಾಡಿದ್ರು.

ಇದೇ ವೇಳೆ ಸೆಲ್ಫಿ ವಿತ್ ರಾಮ ಕಾರ್ಯಕ್ರಮಕ್ಕೆ ವಿಜಯೇಂದ್ರ ಚಾಲನೆ ನೀಡಿದ್ರು. ಸೆಲ್ಫಿ ಕಟೌಟ್‌ಗಳನ್ನ ರಾಜ್ಯದ ಎಲ್ಲ ಪ್ರಮುಖ ಸ್ಥಳಗಳಲ್ಲಿ ರಾಜ್ಯ ಬಿಜೆಪಿ ಘಟಕದಿಂದ ಹಾಕಲಾಗುತ್ತೆ. ಅಲ್ಲದೆ ಕರ್ನಾಟಕದಿಂದ ಅಯೋಧ್ಯೆಗೆ (Ayodhya Ram Mandir) ಜನವರಿ 22ರ ಬಳಿಕ 60 ದಿನಗಳ ಕಾಲ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದು, 35 ಸಾವಿರಕ್ಕೂ ಹೆಚ್ಚು ರಾಮಭಕ್ತರು ಪ್ರಯಾಣ ಮಾಡುತ್ತಾರೆ. ಜನವರಿ 31ರಿಂದ ಮಾರ್ಚ್ 25ರ ವರೆಗೆ ರಾಮಭಕ್ತರು ಪ್ರಯಾಣ ಮಾಡುತ್ತಾರೆ. ರಾಮಭಕ್ತರೇ ಪ್ರಯಾದ ಖರ್ಚು ವೆಚ್ಚ ಭರಿಸಲಿದ್ದಾರೆ ಅಂತಾ ವಿಜಯೇಂದ್ರ ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ಅಯೋಧ್ಯೆಯ ರಾಮಲಲ್ಲಾ ವಿಗ್ರಹ, ಸಾಕ್ಷಾತ್ ರಾಮನಂತೆ ಇದೆ: ವಿದ್ಯಾವಲ್ಲಭ ತೀರ್ಥ ಶ್ರೀ

ಪ್ರತಿ ರೈಲಿನಲ್ಲೂ 1500 ಜನ ಪ್ರಯಾಣ, ಒಟ್ಟು 25 ರೈಲುಗಳ ಮೂಲಕ ಪ್ರಯಾಣ ಮಾಡ್ತಾರೆ ಅಂತೇಳಿದ್ರು. ಈ ನಡುವೆ ಪಿವಿಆರ್ ಗಳಲ್ಲಿ ರಾಮಲಲ್ಲಾ ಪ್ರತಿಷ್ಠಾಪನಾ ನೇರ ಪ್ರಸಾರ ಆಗಲಿದೆ. 160 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಮಾಡಲು ಮುಂದೆ ಬಂದಿದ್ದಾರೆ ಅಂತಾ ವಿಜಯೇಂದ್ರ ಮಾಹಿತಿ ನೀಡಿದ್ರು.

Share This Article