ನನ್ನ ಕುಟುಂಬದ ಆಸ್ತಿ ತನಿಖೆ ಮಾಡಿಸಲಿ: ಚೆಲುವರಾಯಸ್ವಾಮಿಗೆ ಕುಮಾರಸ್ವಾಮಿ ಸವಾಲ್

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಇದೆ. ನನ್ನ ಆಸ್ತಿಯನ್ನು (Property) ತನಿಖೆ (Investigation) ಮಾಡಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಹೆಸರು ಹೇಳದೆ ಪರೋಕ್ಷವಾಗಿ ಸಚಿವ ಚೆಲುವರಾಯಸ್ವಾಮಿಗೆ (N. Chaluvaraya Swamy) ಸವಾಲ್ ಹಾಕಿದ್ದಾರೆ.

ಕುಮಾರಸ್ವಾಮಿ ಆಸ್ತಿ ತನಿಖೆ ಮಾಡಿಸಿ ಎಂಬ ಚೆಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ನನ್ನ ಸ್ನೇಹಿತರೊಬ್ಬರು, ನನ್ನ ಆಸ್ತಿ ತನಿಖೆ ಮಾಡುವ ಭಯಕ್ಕೆ ಬಿಜೆಪಿ ಜೊತೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಈಗ ತನಿಖೆ ಮಾಡಿ ಎಂದು ಹೇಳುತ್ತಿದ್ದಾರೆ. ನಾನು ಈಗಲೂ ಸಿದ್ಧ. ನನ್ನ ಆಸ್ತಿ ತನಿಖೆ ಮಾಡಿಸಿ. ನಿಮ್ಮದೆ ಸರ್ಕಾರ ಇದೆ. ಸಿಎಂಗೆ ಹೇಳಿ ಯಾವ ತನಿಖೆ ಬೇಕೋ ಮಾಡಿಸಿ ಎಂದರು. ಇದನ್ನೂ ಓದಿ: ಐದು ಹೆಸರು ಎಂದರೆ ವರ್ಗ ಏನಯ್ಯ – ಮಗನ ವೈರಲ್ ವೀಡಿಯೋಗೆ ಸಿಎಂ ಪ್ರತಿಕ್ರಿಯೆ

ನನ್ನ ಆಸ್ತಿ ತನಿಖೆ ಆಗಲಿ. ಅದರ ಜೊತೆ ಮಾಕಳಿ ಗ್ರಾಮದ ಮೂರೂವರೆ ಎಕರೆ ಕೆರೆ ಜಾಗ ಸರ್ವೆ ನಂಬರ್ 13 ಕೆರೆನೇ ಮಾಯ ಆಗಿದೆ. ಆ ಕೆರೆ ಜಾಗ ನಾನು ನುಂಗಿ ಹಾಕಿದ್ದೀನಾ? ಆ ಕೆರೆ ನುಂಗಿ ಹಾಕಿದ್ದು ಯಾರು? ಇದು ತನಿಖೆ ಆಗಲಿ ಅಂತ ಚೆಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿ ಬಾಂಬ್ ಸಿಡಿಸಿದರು. ಇದನ್ನೂ ಓದಿ: ಮಾಜಿ ಎಂಎಲ್‌ಎ ರಾಜಕೀಯವಾಗಿ ಭಾಗಿಯಾಗೋದು ಅಪರಾಧವಲ್ಲ: ಯತೀಂದ್ರ ಪರ ಚಲುವರಾಯಸ್ವಾಮಿ ಬ್ಯಾಟಿಂಗ್

1962ರಲ್ಲಿ ದೇವೇಗೌಡರು ರಾಜಕೀಯಕ್ಕೆ ಬಂದರು. ಒಬ್ಬರು ಕಾರ್ಪೋರೇಟರ್, ಜಿಲ್ಲಾ ಪಂಚಾಯತಿ ಸದಸ್ಯ ಮಾಡಿರೋ ಹಣ ನಾನು ಮಾಡಿಲ್ಲ. ನಾನು ಸಿನಿಮಾದಲ್ಲಿ ದುಡಿದು 45 ಎಕರೆ ಜಾಗ ತೆಗೆದುಕೊಂಡಿದ್ದೇನೆ. ನನ್ನ ಜೊತೆ 24 ಗಂಟೆ ಇದ್ದವರೇ ಇವರು. ಬಲಗೈನಲ್ಲಿ ತೆಗೆದುಕೊಂಡು ಎಡಗೈನಲ್ಲಿ ದಾನ ಮಾಡಿದ್ದೇನೆ. ರಾಜಕೀಯಕ್ಕೆ ನಾನು ಹಣ ಮಾಡಿಲ್ಲ. ಪಕ್ಷ ಉಳಿಸೋಕೆ ನಾನು ಮಾಡಿದ್ದೇನೆ. ನಾನು ಇವರ ರೀತಿ ದುಡ್ಡು ಮಾಡಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಡಿಕೆಶಿಯನ್ನು ಸಿಎಂ ಮಾಡ್ತೀವಿ ಅಂತ ಕುಮಾರಸ್ವಾಮಿ ಹೇಳಿದ್ದರೆ ನಾವು ಖಂಡಿತಾ ಬರುತ್ತಿದ್ದೆವು: ಎಸ್‌ಟಿಎಸ್

ನಾನು 100% ಶುದ್ಧ ಇಲ್ಲ. ಇವತ್ತಿನ ರಾಜಕೀಯ ಅಧಿಕಾರ ದುಡ್ಡು ಇಲ್ಲದೆ ನಡೆಯಲ್ಲ. ಇದನ್ನು ಓಪನ್ ಆಗಿ ಹೇಳಿದ್ದೇನೆ. ಆದರೆ ಇವರ ರೀತಿ ಸರ್ಕಾರದ ಆದೇಶ ಮಾರಾಟಕ್ಕೆ ಇಟ್ಟಿಲ್ಲ. ಚುನಾವಣೆ ಬಂದಾಗ ನಾನು ಭಿಕ್ಷೆ ಬೇಡಿದ್ದೇನೆ. ಆದರೆ ನಾನು ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಲಂಚಕ್ಕೆ ಶಾಸಕರ ಪ್ರೋತ್ಸಾಹ? – ಶರಣು ಸಲಗರ್ ಆಡಿಯೋ ವೈರಲ್

Share This Article