ರಾಯಚೂರಿನ ಮಲಿಯಾಬಾದ್ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ- ಕ್ಯಾಮೆರಾದಲ್ಲಿ ಚಲನವಲನ ಸೆರೆ

Public TV
1 Min Read

ರಾಯಚೂರು: ಜಿಲ್ಲೆಯ ಮಲಿಯಾಬಾದ್ ಬೆಟ್ಟದಲ್ಲಿ (Maliabad Hills) ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕ್ಯಾಮೆರಾದಲ್ಲಿ ಚಿರತೆ ಚಲನವಲನ ಸೆರೆಯಾಗಿದೆ.

ಕಳೆದ ಒಂದು ತಿಂಗಳಿಂದ ಚಿರತೆ (Leopard) ಬೆಟ್ಟದ ಗುಹೆಯಲ್ಲೇ ವಾಸಿಸುತ್ತಿದ್ದು, ಆಹಾರಕ್ಕಾಗಿ ಗ್ರಾಮದ ನಾಯಿಗಳನ್ನ ಬೇಟೆಯಾಡುತ್ತಿದೆ. ಇಷ್ಟು ದಿನ ಚಿರತೆ ಹೆಜ್ಜೆ ಗುರುತುಗಳು ಮಾತ್ರ ಪತ್ತೆಯಾಗಿದ್ದವು. ಸ್ಥಳೀಯರ ದೂರಿನ ಮೇರೆಗೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಕ್ಯಾಮೆರಾದಲ್ಲಿ ಚಿರತೆ ಚಲನವಲನ ಸೆರೆಯಾಗಿದೆ. ಇದನ್ನೂ ಓದಿ: ಶಾಂತಿ ಮಾತುಕತೆ ಯಶಸ್ವಿ – 5 ವರ್ಷದ ಬಳಿಕ ನಡೆಯಲಿದೆ ಮೋದಿ-ಜಿನ್‌ಪಿಂಗ್‌ ದ್ವಿಪಕ್ಷೀಯ ಸಭೆ

ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಅಳವಡಿಸಿದ್ದಾರೆ. ಚಿರತೆ ಪ್ರತ್ಯಕ್ಷವಾಗಿರುವ ಹಿನ್ನೆಲೆ ಮಲಿಯಾಬಾದ್ ಹಾಗೂ ಸುತ್ತಮುತ್ತಲ ಗ್ರಾಮದ ಜನರಲ್ಲಿ ಆತಂಕ ಹೆಚ್ಚಾಗಿದೆ. ಈ ಮೊದಲು ಮಾನ್ವಿ ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು. ಈಗ ರಾಯಚೂರು ತಾಲೂಕಿನ ಮಲಿಯಾಬಾದ್ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಇದನ್ನೂ ಓದಿ: ದಾವಣಗೆರೆ| ಕಲುಷಿತ ನೀರು ಸೇವಿಸಿ ನವ ಜಾತ ಶಿಶು ಸೇರಿ ಐವರು ಸಾವು

Share This Article