ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆ (Hospet) ತಾಲೂಕಿನ ಧರ್ಮದ ಗುಡ್ಡದಲ್ಲಿ (Dharmada Gudda) ಚಿರತೆ ಪತ್ತೆಯಾಗಿದೆ.
ಧರ್ಮದ ಗುಡ್ಡದ ಕೆಳಗಡೆ ಯುವಕರ ಓಡಾಡುತ್ತಿದ್ದಾಗ ಮೇಲೆ ಚಿರತೆ (Leopard) ಕಾಣಿಸಿಕೊಂಡಿದೆ. ಚಿರತೆ ಕಂಡು ಯುವಕರು ಗಾಬರಿಯಾಗಿದ್ದಾರೆ. ಇದನ್ನೂ ಓದಿ: ವಿಷ್ಣುವರ್ಧನ್ ಸಮಾಧಿ ನೆಲಸಮ – ಅಭಿಮಾನಿಗಳಿಂದ ತೀವ್ರ ಆಕ್ರೋಶ
ಬಸವನದುರ್ಗ- ನಾಗೇನಹಳ್ಳಿ ಸೇರಿದಂತೆ ನಾನಾ ಗ್ರಾಮಗಳ ಭಕ್ತಾದಿಗಳು ಧರ್ಮದಗುಡ್ಡಕ್ಕೆ ಆಗಮಿಸುತ್ತಾರೆ. ಚಿರತೆ ಪ್ರತ್ಯಕ್ಷದಿಂದ ಧರ್ಮದ ಗುಡ್ಡಕ್ಕೆ ಬರುವ ಭಕ್ತರಲ್ಲಿ ಆತಂಕ ಹೆಚ್ಚಾಗಿದೆ. ಚಿರತೆ ಓಟಾದ ದೃಶ್ಯಗಳು ಸ್ಥಳೀಯ ಯುವಕರ ಮೊಬೈಲಿನಲ್ಲಿ ಸೆರೆಯಾಗಿದೆ.