ಮಾರುತಿ ಸುಜುಕಿ ಶೋರೂಂಗೆ ನುಗ್ಗಿದ ಚಿರತೆ

Public TV
1 Min Read

ಗುರುಗಾವ್: ನಸುಕಿನ ವೇಳೆಯಲ್ಲಿ ಕಾಡಿನಿಂದ ತಪ್ಪಿಸಿಕೊಂಡು ಬಂದಂತಹ ಚಿರತೆಯೊಂದು ಮಾರುತಿ ಸುಜುಕಿ ಶೋರೂಂಗೆ ಒಳಗೆ ನುಗ್ಗಿ ಭಯ ಸೃಷ್ಟಿಸಿದ್ದ ಘಟನೆ ಮನೇಸರ್ ನಲ್ಲಿ ನಡೆದಿದೆ.

ಚಿರತೆಯು ಸುಮಾರು ಮುಂಜಾನೆ 4 ರ ವೇಳೆಯಲ್ಲಿ ಇಂಜಿನ್ ಡಿಪಾರ್ಟ್‍ಮೆಂಟ್ ಕೊಠಡಿಯೊಳಗೆ ಒಳಗೆ ನುಗ್ಗಿದೆ. ಮುಂಜಾನೆ 7 ಗಂಟೆ ವೇಳೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಚಿರತೆಯನ್ನು ಕಂಡು ಹೆದರಿ ಭಯಭೀತರಾಗಿದ್ದಾರೆ. ನಂತರ ತಮ್ಮ ರಕ್ಷಣೆಗಾಗಿ ಚಿರತೆಯನ್ನು ಹಿಡಿಯಲು ಪೊಲೀಸರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ.

ಚಿರತೆಯನ್ನು ನೋಡಿದಂತಹ ಜನರು ಕರೆಮಾಡಿ ತಿಳಿಸುತ್ತಿದ್ದಾರೆ. ಚಿರತೆಯನ್ನು ಹಿಡಿಯಲು ಹುಡುಕುತ್ತಿದ್ದೇವೆ, ಆದರೆ ಚಿರತೆಯು ಇದುವರೆಗೂ ಸಿಕ್ಕಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಚಿರತೆಯೊಂದು ಸುಹಾನ್ ಎಂಬ ಗ್ರಾಮದಲ್ಲಿ, ಮನೆಯೊಳಗೆ ನುಗ್ಗಿ ದಾಳಿ ನಡೆಸಿದ್ದರಿಂದ ಐವರಿಗೆ ಗಾಯಗಳಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *