ಮೈಸೂರು: ಅರಣ್ಯಾಧಿಕಾರಿಗಳ ಎಡವಟ್ಟಿನಿಂದ ಚಿರತೆ ಸಾವನ್ನಪ್ಪಿದ ಘಟನೆ ಮೈಸೂರಿನ ಗೋಹಳ್ಳಿ ಬಳಿ ನಡೆದಿದೆ.
ಬುಧವಾರ ಬೆಳಗ್ಗೆ 12 ಗಂಟೆಯಿಂದ ಚರಂಡಿಯಲ್ಲೇ ಚಿರತೆ ಇತ್ತು. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಬಂದ ನಂತರ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದರು. ಚರಂಡಿಯಲ್ಲಿದ್ದ ಚಿರತೆಗೆ ಬಲೆ ಹಾಕುವ ವೇಳೆ ಕುತ್ತಿಗೆಗೆ ಬಲೆ ಬಿದ್ದಿದ್ದನ್ನು ಗಮನಿಸದೆ ಎಳೆದ ಕಾರಣ ಉಸಿರುಗಟ್ಟಿ ಚಿರತೆ ಮೃತಪಟ್ಟಿದೆ ಎನ್ನಲಾಗುತ್ತಿದೆ. ಸರಿಯಾಗಿ ಪ್ಲಾನ್ ಮಾಡದೆ ಕಾರ್ಯಚರಣೆ ಆರಂಭಿಸಿದ ಕಾರಣ ಚಿರತೆ ಮೃತಪಟ್ಟಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯುವ ವೇಳೆ ಸಾಯಿಸಿದ್ದಾರೆಂದು ಸ್ಥಳೀಯರು ಆರೋಪಿಸಿ ಸಾವನ್ನಪ್ಪಿದ ಚಿರತೆ ಹಿಡಿದು ಆಕ್ರೋಶ ಹೊರಹಾಕಿದರು.