ಮಂಗಳೂರು| ಮನೆಯೊಳಗೆ ಏಕಾಏಕಿ ನುಗ್ಗಿದ ಚಿರತೆ

Public TV
1 Min Read

ಮಂಗಳೂರು: ಮನೆಯೊಳಗೆ ಏಕಾಏಕಿ ಚಿರತೆಯೊಂದು (Leopard) ನುಗ್ಗಿದ ಘಟನೆ ಮಂಗಳೂರು (Mangaluru) ಹೊರವಲಯದ ಮೂಲ್ಕಿಯಲ್ಲಿ ನಡೆದಿದೆ.

ಮೂಲ್ಕಿಯ ಅಕ್ಕಸಾಲಿಗರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆಯೊಳಗೆ ಚಿರತೆ ನುಗ್ಗಿದ್ದು, ಮೂಡಬಿದ್ರೆ ವಲಯದ ಅರಣ್ಯ ಅಧಿಕಾರಿಗಳ ಕಾರ್ಯಾಚರಣೆಯಿಂದ ಬೋನ್ ಮೂಲಕ ಚಿರತೆ ಸೆರೆ ಹಿಡಿಯಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಮಳೆ – ರಸ್ತೆಗಳು ಜಲಾವೃತ, ಹಲವೆಡೆ ಜನಜೀವನ ಅಸ್ತವ್ಯಸ್ತ

ಸದಾನಂದ ಕೋಟ್ಯಾನ್‌ರ ಮನೆಯ ಅಡುಗೆ ಕೋಣೆಗೆ ಸುಮಾರು ಒಂದು ವರ್ಷ ಪ್ರಾಯದ ಚಿರತೆ ನುಗ್ಗಿದೆ. ಈ ವೇಳೆ ನಾಯಿ ಬೊಗಳಲು ಆರಂಭಿಸಿದ್ದು, ಮನೆಮಂದಿ ಚಿರತೆ ನೋಡಿ ಕಂಗಾಲಾಗಿದ್ದಾರೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಅಡುಗೆ ಮನೆಯ ಮುಂಭಾಗ ಬಾಗಿಲಿಗೆ ಬೋನ್ ಅಳವಡಿಸಿದರು. ಸುಮಾರು 5 ಗಂಟೆಗಳ ಬಳಿಕ ಚಿರತೆ ಬೋನಿನೊಳಗೆ ಬಿದ್ದಿದೆ.

ಚಿರತೆಯನ್ನು ನೋಡಲು ಜನಸಮೂಹ ನೆರೆದಿತ್ತು. ಅರಣ್ಯಾಧಿಕಾರಿಗಳು, ಮೂಲ್ಕಿ ಪೋಲಿಸರು, ಸಾರ್ವಜನಿಕರು ಚಿರತೆ ಹಿಡಿಯಲು ಸಹಕರಿಸಿದ್ದಾರೆ. ಇದನ್ನೂ ಓದಿ: ಮುಡಾ ಮೇಲಿನ ಇ.ಡಿ ದಾಳಿ ಅಂತ್ಯ – ಸತತ 29 ಗಂಟೆ ಅಧಿಕಾರಿಗಳಿಗೆ ಡ್ರಿಲ್‌

Share This Article