ಬನ್ನೇರುಘಟ್ಟ ಸಫಾರಿ ವೇಳೆ ಬೊಲೆರೋ ಹಿಂಬಾಲಿಸಿ ಬಾಲಕನ ಮೇಲೆ ಚಿರತೆ ದಾಳಿ

Public TV
1 Min Read

ಬೆಂಗಳೂರು: ಸಫಾರಿ ವೇಳೆ ಚಿರತೆಯೊಂದು (Leopard ) ಬಾಲಕನ ಮೇಲೆ ದಾಳಿ ಮಾಡಿದ ಘಟನೆ ಬನ್ನೇರುಘಟ್ಟದ (Bannerghatta Safari) ಜೈವಿಕ ಉದ್ಯಾನವನದಲ್ಲಿ ನಡೆದಿದೆ.

ಶುಕ್ರವಾರ ಮಧ್ಯಾಹ್ನ ಸಫಾರಿ ವೇಳೆ ಈ ಘಟನೆ ನಡೆದಿದೆ. 13 ವರ್ಷದ ಬಾಲಕ ಪೋಷಕರ ಜೊತೆ ಸಫಾರಿಗೆ ತೆರಳಿದ್ದ. ಈ ವೇಳೆ ಚಿರತೆಯನ್ನು ನೋಡಿ ಚಾಲಕ ಬೊಲೆರೋ ನಿಲ್ಲಿಸಿದ್ದಾನೆ. ಇದನ್ನೂ ಓದಿ: ಗಿರೀಶ್ ಮಟ್ಟಣ್ಣನವರ್ ಹತ್ತಾರು ಎಕ್ರೆ ಪ್ರದೇಶದಲ್ಲಿ ರೆಸಾರ್ಟ್‌ ಮಾಡಿದ್ದಾನೆ ಬ್ರಾಹ್ಮಣ ಪುರೋಹಿತ ಪರಿಷತ್ಆರೋಪ

ನಿಂತ ಕೆಲ ಕ್ಷಣದ ಬಳಿಕ ಬೊಲೆರೋ ಮುಂದಕ್ಕೆ ನಿಧಾನವಾಗಿ ಸಾಗಿದೆ. ಈ ವೇಳೆ ಬೊಲೆರೋ ಹಿಂಬಾಲಿಸಿದ ಚಿರತೆ ಕಿಟಕಿಯ ಮೂಲಕ ಕೈ ಹಾಕಿ ಉಗುರಿನಿಂದ ಪರಚಿದೆ. ಗಾಯಾಳು ಬಾಲಕನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಬಾಲಕ ಮನೆಗೆ ತೆರಳಿದ್ದಾನೆ.

ಚರತೆ ಬೊಲೆರೋ ಹತ್ತಿ ದಾಳಿ ನಡೆಸುತ್ತಿರುವ ದೃಶ್ಯ ಹಿಂಬದಿಯ ವಾಹನದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲಿನಲ್ಲಿ ಸೆರೆಯಾಗಿದೆ.

ಪಾರ್ಕ್ ಒಳಗೆ ಸಂಚಾರ ಮಾಡುವ ಬಸ್‌ ಹಾಗೂ ಜೀಪ್‌ಗಳಲ್ಲಿ ಸಣ್ಣದಾದ ರಂದ್ರ ಇದ್ದು ಅದನ್ನು ಕೂಡ ಸಂಪೂರ್ಣವಾಗಿ ಬಂದ್ ಮಾಡಲು ಕೆಎಸ್‌ಟಿಡಿಸಿಗೆ ಸೂಚನೆ ನೀಡಿದ್ದು, ಇನ್ನು ಮುಂದೆ ಇಂತಹ ಘಟನೆ ಆಗದಂತೆ ಎಚ್ಚರ ವಹಿಸಲು ಸಿಬ್ಬಂದಿಗೆ ಹಾಗೂ  ಚಾಲಕರಿಗೆ ಸೂಚನೆ ನೀಡಿದ್ದೇನೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸುರ್ಯಸೇನ್ ಮಾಹಿತಿ ನೀಡಿದ್ದಾರೆ.

ಈ ಹಿಂದೆಯೂ ಕೂಡ ಒಮ್ಮೆ ಚಿರತೆ ಹಾಗೂ ಇನ್ನೊಮ್ಮೆ ಹುಲಿ ಇದೇ ರೀತಿ ದಾಳಿ ಮಾಡಿತ್ತು. ಆದರೂ ಕೂಡ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

Share This Article