ಹೊನ್ನಾವರದಲ್ಲಿ ಆರು ಜಾನುವಾರುಗಳನ್ನು ತಿಂದು ತೇಗಿದ ಚಿರತೆ

Public TV
1 Min Read

ಕಾರವಾರ: ಹೊನ್ನಾವರದ (Honnavar) ಕೆಲವು ಗ್ರಾಮಗಳಲ್ಲಿ ಮತ್ತೆ ಚಿರತೆ (Leopard) ಕಾಟ ಪ್ರಾರಂಭವಾಗಿದೆ. ಎರಡು ದಿನಗಳಲ್ಲಿ ಆರು ಜಾನುವಾರುಗಳನ್ನು ಬಲಿ ಪಡೆದು ಜನರಲ್ಲಿ ಆತಂಕ ಮೂಡಿಸಿದೆ.

ಕಳೆದ ಒಂದು ವಾರದಿಂದ ಸಾಲ್ಕೋಡು, ಕೊಂಡಕುಳಿ, ಕೆರೆಮನೆ ಪ್ರದೇಶದಲ್ಲಿ ಚಿರತೆ ತಿರುಗಾಡುತ್ತಿದೆ. ಗಣಪಗೌಡ ಹಾಗೂ ಬೆಳ್ಳಗೌಡ ಎಂಬುವವರ ತಲಾ 1 ಕರು, ಸುನೀಲ್ ಆಚಾರಿ ಹಾಗೂ ಬಾಬು ಹಳ್ಳೇರ್ ಅವರ ತಲಾ 2 ಜಾನುವಾರನ್ನು ಕೊಂದುಹಾಕಿದೆ.

ಜಾನುವಾರುಗಳನ್ನು ಬಲಿ ಪಡೆಯುವ ಮುನ್ನ ಶನಿವಾರ ಎರಡು ಜಿಂಕೆಗಳನ್ನು ಕೊಂದಿತ್ತು. ಮತ್ತೆ ಪ್ರತ್ಯಕ್ಷವಾದ ಚಿರತೆಯಿಂದ ಸ್ಥಳೀಯರು ನಿತ್ಯದ ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಭರ್ಜರಿ ರೋಡ್ ಶೋ – ಬಾಗೇಪಲ್ಲಿಯಲ್ಲಿ ಅಭ್ಯರ್ಥಿ ನಿಲ್ಲಿಸಲು ತಯಾರಿ

ಹಿಂದೆಯೂ ಆತಂಕ ಮೂಡಿಸಿದ್ದ ಚಿರತೆ: ಈ ಹಿಂದೆ ಸಾಲ್ಕೋಡು, ಕೊಂಡಕುಳಿ, ಕೆರೆಮನೆ (Keremane) ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಗಣಪತಿ ಭಟ್ ಎಂಬುವವರ ಮನೆಯ ನಾಯಿಯ ಮೇಲೆ ದಾಳಿ ನಡೆಸಿತ್ತು. ಇದಲ್ಲದೇ ಹಸುಗಳ ಮೇಲೆ ಎರಗಿ ತಿಂದಿತ್ತು. ಹೀಗಾಗಿ ಗ್ರಾಮದವರ ಆಗ್ರಹದ ಮೇಲೆ ಅರಣ್ಯ ಇಲಾಖೆ (Forest Department) ಚಿರತೆ ಕಾರ್ಯಾಚರಣೆ ನಡೆಸಿ ಬೋನ್ ಇಟ್ಟಿತ್ತು. ಆದರೆ ಚಿರತೆ ಮಾತ್ರ ಸೆರೆ ಸಿಕ್ಕಿರಲಿಲ್ಲ. ಒಂದು ತಿಂಗಳ ನಂತರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.

ಚಿರತೆ ದಾಳಿ ಮತ್ತೆ ಗ್ರಾಮದಲ್ಲಿ ಪ್ರಾರಂಭವಾಗಿದ್ದು ಕೃಷಿಕರು ತಮ್ಮ ರಾಸುಗಳನ್ನು ಕಳೆದುಕೊಳ್ಳುವಂತಾಗಿದೆ. ಕೂಡಲೇ ಚಿರತೆ ಸೆರೆ ಹಿಡಿದು ಬೇರೆಡೆ ಬಿಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಗನ್ ಸಂಸ್ಕೃತಿ ವಿರುದ್ಧ ಕ್ರಮ – ರಾಜ್ಯದಲ್ಲಿ 813 ಗನ್ ಪರವಾನಗಿ ರದ್ದು

Share This Article
Leave a Comment

Leave a Reply

Your email address will not be published. Required fields are marked *