ಹಿಂದೂ, ಮುಸ್ಲಿಮರು ಸಹೋದರ, ಸಹೋದರಿಯರಂತೆ ಇದ್ದೇವೆ- ಬ್ರಿಟನ್‌ನಲ್ಲಿ ಒಗ್ಗಟ್ಟಿನ ಮಂತ್ರ

Public TV
2 Min Read

ಲಂಡನ್: ನಾವು ಹಿಂದೂ, ಮುಸ್ಲಿಮರಾಗಷ್ಟೇ ಅಲ್ಲದೇ ಸಹೋದರ, ಸಹೋದರಿಯರಂತೆ ಇದ್ದೇವೆ. ಅಷ್ಟೇ ಅಲ್ಲದೇ ನಾವೆಲ್ಲರೂ ಲೀಸೆಸ್ಟರ್‌ನ (Leicester) ಕುಟುಂಬವಾಗಿದ್ದೇವೆ ಎಂದು ಹಿಂದೂ, ಮುಸ್ಲಿಂ ಸಮುದಾಯದ ಮುಖಂಡರು ಜಂಟಿಯಾಗಿ ತಿಳಿಸಿದ್ದಾರೆ.

ಕಳೆದ ತಿಂಗಳು ಏಷ್ಯಾ ಕಪ್ (Asia Cup) ಕ್ರಿಕೆಟ್ (Cricket) ಟೂರ್ನಿಯಲ್ಲಿ ಭಾರತ (India) ಹಾಗೂ ಪಾಕಿಸ್ತಾನದ (Pakistan) ನಡುವೆ ನಡೆದ ಮೊದಲ ಪಂದ್ಯದಲ್ಲಿ ಭಾರತ ಜಯ ಸಾಧಿಸಿದ ಬಳಿಕ ಅಭಿಮಾನಿಗಳ ನಡುವೆ ಘರ್ಷಣೆ ನಡೆದಿತ್ತು. ಇದೀಗ ಈ ಘರ್ಷಣೆಯನ್ನು ಕೊನೆಗೊಳಿಸುವಂತೆ ಬ್ರಿಟನ್‍ನ ಲೀಸೆಸ್ಟರ್‍ನಲ್ಲಿರುವ ಹಿಂದೂಗಳು ಹಾಗೂ ಮುಸ್ಲಿಮರ ಸಮುದಾಯದ ಮುಖಂಡರು ಜಂಟಿ ಹೇಳಿಕೆ ನೀಡಿದ್ದಾರೆ.

ದ್ವೇಷಕ್ಕೆ ಕಾರಣವಾಗುವ ಯಾವುದೇ ವಿದೇಶಿ ಉಗ್ರಗಾಮಿ ಸಿದ್ಧಾಂತಕ್ಕೆ ಲೀಸೆಸ್ಟರ್ ಸ್ಥಾನವಿಲ್ಲ. ನಮ್ಮ ಎರಡು ಧರ್ಮಗಳು ಈ ಅದ್ಭುತ ನಗರದಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸಾಮರಸ್ಯದಿಂದ ಬದುಕಿವೆ. ನಾವು ಒಟ್ಟಿಗೆ ಈ ನಗರಕ್ಕೆ ಬಂದಿದ್ದೇವೆ. ನಾವು ಅನೇಕ ಸವಾಲುಗಳನ್ನು ಒಟ್ಟಿಗೆ ಎದುರಿಸಿದ್ದೇವೆ. ಅಷ್ಟೇ ಅಲ್ಲದೇ ನಾವು ಜನಾಂಗೀಯ ದ್ವೇಷಿಗಳ ವಿರುದ್ಧವೂ ಒಟ್ಟಾಗಿ ಹೋರಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ದೇವೇಗೌಡ್ರ ಮನೆಗೆ ಬೊಮ್ಮಾಯಿ ಭೇಟಿ – ಆರೋಗ್ಯ ವಿಚಾರಿಸಿ, ಈಗ್ಲೂ ಮುದ್ದೆ ತಿಂತೀರಾ ಸರ್ ಎಂದ ಸಿಎಂ

ಇದೆಲ್ಲದರ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಸೀದಿ ಹಾಗೂ ದೇವಾಲಯಗಳ ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆಯನ್ನು ಗೌರವಿಸಬೇಕು. ಅವಹೇಳನಕಾರಿ ಹಾಡುಗಳು ಅಥವಾ ಪೂಜೆಯ ಬಟ್ಟೆಯ ವಿರುದ್ಧ ದೈಹಿಕ ದಾಳಿಗಳನ್ನು ಯಾರೂ ಮಾಡಬಾರದು ಹಾಗೂ ಯಾರೂ ಪ್ರಚೋದನೆಗೆ ಒಳಗಾಗಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: PayCM ಪೋಸ್ಟರ್‌ಗೆ ಸಿಎಂ ಗರಂ – ಎಫ್‌ಐಆರ್‌ ದಾಖಲು

ಇತ್ತೀಚೆಗಷ್ಟೇ ಬ್ರಿಟನ್‍ನ ಲೀಸೆಸ್ಟರ್ ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಗುಂಪು ಘರ್ಷಣೆ ಏರ್ಪಟ್ಟಿದ್ದು, ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 47 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲದೇ ಘರ್ಷಣೆ ಸಂದರ್ಭದಲ್ಲಿ ಆಕ್ರಮಣಕಾರಿ ಶಸ್ತ್ರಾಸ್ತ್ರವನ್ನು ಹೊಂದಿದ್ದ 20 ವರ್ಷದ ಯುವಕನಿಗೆ ತಪೆÇ್ಪಪ್ಪಿಕೊಂಡ ನಂತರ 10 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *