ದಂಪತಿ ಏಕಾಂತದಲ್ಲಿದ್ದಾಗ ಮಾಸ್ಟರ್ ಕೀ ಬಳಸಿ ರೂಮ್‌ಗೆ ನುಗ್ಗಿದ ಸಿಬ್ಬಂದಿ; ಲೀಲಾ ಪ್ಯಾಲೇಸ್ ಹೋಟೆಲ್‌ಗೆ 10 ಲಕ್ಷ ದಂಡ

2 Min Read

ಜೈಪುರ: ಹೋಟೆಲ್‌ ಸಿಬ್ಬಂದಿಯೊಬ್ಬರು ಮಾಡಿದ ಯಡವಟ್ಟಿಗೆ ಈಗ ಉದಯ್‌ಪುರ್ ಲೀಲಾ ಪ್ಯಾಲೇಸ್ (Leela Palace Udaipur) ಹೋಟೆಲ್‌ಗೆ 10 ಲಕ್ಷ ರೂ. ದಂಡ ಬಿದ್ದಿದೆ.

ಹೌದು. ಹೋಟೆಲ್‌ ರೂಮಿನಲ್ಲಿದ್ದ (Hotel Room) ದಂಪತಿಯು ಖಾಸಗಿ ಕ್ಷಣ ಕಳೆಯುತ್ತಿದ್ದಾಗ ಹೇಳದೇ ಕೇಳದೇ ಮಾಸ್ಟರ್‌ ಕೀ ಬಳಸಿ ಒಳ ನುಗ್ಗಿದ ಸಿಬ್ಬಂದಿ ಖಾಸಗಿ ಕ್ಷಕ್ಷಣಕ್ಕೆ ಧಕ್ಕೆಯುಂಟು ಮಾಡಿದ್ದಾನೆ. ಹೀಗಾಗಿ ಉದಯ್ ಪುರದ ಐಶಾರಾಮಿ ದಿ ಲೀಲಾ ಪ್ಯಾಲೇಸ್ ಹೋಟೆಲ್ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಹೋಲ್ಡಿಂಗ್ಸ್ ಶ್ಲಾಸ್ ಉದಯ್ ಪುರ್ ಪ್ರೈವೇಟ್ ಲಿಮಿಟೆಡ್‌ಗೆ ಚೆನ್ನೈ ಉತ್ತರ ಜಿಲ್ಲಾ ಗ್ರಾಹಕರ ಕೋರ್ಟ್‌ 10 ಲಕ್ಷ ರೂ. ದಂಡ ವಿಧಿಸಿದೆ.

ಇದು ಒಂದು ವರ್ಷದ ಹಿಂದೆ, ಚೆನ್ನೈ ಮೂಲದ ಮಹಿಳಾ ವಕೀಲರೊಬ್ಬರು ದಾಖಲಿಸಿದ್ದ ಕೇಸ್. ಈ ಪ್ರಕರಣ ಈಗ ಇತ್ಯರ್ಥವಾಗಿದೆ. ಇದರೊಂದಿಗೆ ಕೊಠಡಿಯ ಆ ದಿನದ ಬಾಡಿಗೆ 55 ಸಾವಿರ ರೂ. ಅದಕ್ಕೆ ಶೇ.9 ರಷ್ಟು ಬಡ್ಡಿ ಜೊತೆಗೆ ಕೋರ್ಟ್‌ನ ಖರ್ಚುವೆಚ್ಚಗಳಿಗಾಗಿ 10,000 ರೂ.ಗಳನ್ನ ನೀಡುವಂತೆ ಆದೇಶಿಸಿದೆ. ಇದನ್ನೂ ಓದಿ: ಇಡಿ ದಾಳಿ ವೇಳೆ I-PAC ಕಚೇರಿಗೆ ನುಗ್ಗಿ ಫೈಲ್‌ ಹೊತ್ತೊಯ್ದ ಸಿಎಂ – ದೀದಿ ವಿರುದ್ಧ 2 FIR ದಾಖಲು

ಏನಾಗಿತ್ತು?
2025ರ ಜ.26 ರಂದು ತಮ್ಮ ಪತಿಯ ಹುಟ್ಟುಹಬ್ಬ ಆಚರಿಸಲು ಹಾಗೂ ಬೇಬಿ ಮೂನ್ ದಿನಗಳನ್ನು ಕಳೆಯಲು ಅವರು ಉದಯ್ ಪುರದ ದ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಚೆನ್ನೈನ ಮಹಿಳಾ ವಕೀಲೆಯೊಬ್ಬರು ತಮ್ಮ ಪತಿಯೊಂದಿಗೆ ತಂಗಿದ್ದರು. ಜ. 27ರ ರಾತ್ರಿ ತಂಗಲು ಆ ಕೊಠಡಿ ಬುಕ್ ಆಗಿತ್ತಲ್ಲದೆ, ಆ ಒಂದು ರಾತ್ರಿ ತಂಗಲು ಆ ಹೋಟೆಲ್ ನಲ್ಲಿ ನಿಗದಿಯಾಗಿದ್ದ 55,000 ರೂ.ಗಳನ್ನು ಪಾವತಿಸಿದ್ದರು. ಇದನ್ನೂ ಓದಿ: ಬಾಂಗ್ಲಾದೇಶದ ಹಿಂದೂ ವ್ಯಕ್ತಿ ದೀಪು ದಾಸ್ ಹತ್ಯೆ ಕೇಸ್‌ – ಪ್ರಮುಖ ಆರೋಪಿ ಬಂಧನ

ಜ. 27ರಂದು ಸಂಜೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಇಬ್ಬರು, ದಂಪತಿಗಳಿಬ್ಬರೂ ಸ್ನಾನಗೃಹದಲ್ಲಿದ್ದಾಗ ಹೋಟೆಲಿನ ಸರ್ವೀಸ್ ಸಿಬ್ಬಂದಿ ಆ ಕೊಠಡಿಯ ಮಾಸ್ಟರ್ ಕೀ ಬಳಸಿ, ಹೇಳದೇ ಕೇಳದೆ ಒಳಗೆ ನುಗ್ಗಿದ್ದ. ಸರ್ವೀಸ್‌ ಇಲ್ಲ ಅಂತಾ ಹೇಳಿದ್ರೂ, ಸ್ನಾನಗೃಹದಲ್ಲಿ ಇಣುಕಿದ್ದ. ಗರ್ಭಿಣಿಯಾಗಿದ್ದ ಆ ಪತ್ನಿಯು ಏಕಾಏಕಿ ಮಾನಸಿಕ ಆಘಾತಕ್ಕೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಕೇಸ್ ದಾಖಲಿಸಿದ್ದರು. ಇದನ್ನೂ ಓದಿ: ಜೈಪುರದಿಂದ ಬೆಂಗ್ಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಮಗುವಿಗೆ ಉಸಿರಾಟದ ಸಮಸ್ಯೆ – ಇಂದೋರ್‌ನಲ್ಲಿ ತುರ್ತು ಭೂಸ್ಪರ್ಶ

Share This Article