ಭಾರತವನ್ನು ಹೊಗಳಿದ ಇಮ್ರಾನ್ ಖಾನ್‍ಗೆ ಪಾಕ್ ಬಿಟ್ಟು ತೊರೆಯಿರಿ ಎಂದ ಷರೀಫ್ ಪುತ್ರಿ

Public TV
1 Min Read

ಇಸ್ಲಾಮಾಬಾದ್: ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷೆ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ  ರ‍್ಯಮ್ ನವಾಜ್ ಷರೀಫ್ ಅವರು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಅಷ್ಟೊಂದು ಇಷ್ಟಪಡುವುದಾದರೆ ಪಾಕ್ ತೊರೆದು ಭಾರತಕ್ಕೆ ಹೋಗುವಂತೆ ಕಟುವಾಗಿ ಟೀಕಿಸಿದ್ದಾರೆ.

ಈ ಹಿಂದೆ ಇಮ್ರಾನ್ ಅವರು ಭಾರತವನ್ನು ‘ಖುದ್ದರ್ ಕ್ವಾಮ್’ (ಬಹಳ ಸ್ವಾಭಿಮಾನಿ ಜನರು) ಎಂದು ಶ್ಲಾಘಿಸಿದ್ದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಹೋದದ್ದನ್ನು ನೋಡಿ ಹುಚ್ಚೆದ್ದು ಕುಣಿದಾಡುತ್ತಿರುವ ವ್ಯಕ್ತಿಗೆ ಯಾರು ಹೇಳಬೇಕು. ಬೇರೆಯವರಲ್ಲ ಸ್ವಂತ ಪಕ್ಷದವರೇ ಅವರನ್ನು ಉಚ್ಛಾಟಿಸಿದ್ದಾರೆ. ನೀವು ಭಾರತವನ್ನು ತುಂಬಾ ಇಷ್ಟಪಡುವುದಾದರೆ, ಅಲ್ಲಿಗೆ ತೆರಳಿ ಮತ್ತು ಪಾಕಿಸ್ತಾನವನ್ನು ಬಿಟ್ಟುಬಿಡಿ ಎಂದಿದ್ದಾರೆ. ಇದನ್ನೂ ಓದಿ: ಮುಸ್ಲಿಮರನ್ನ ಮದುವೆಯಾದ್ರೆ SSK ಸಮಾಜದಿಂದ ಬಹಿಷ್ಕರಿಸಿ: ನಾಗೇಶ್‌

ಪಾಕಿಸ್ತಾನದ ಸಂಸತ್ತಿನಲ್ಲಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ಮತಕ್ಕೂ ಮೊದಲು ಅಧಿಕಾರಕ್ಕಾಗಿ ಈ ರೀತಿ ಅಳುತ್ತಿರುವವರನ್ನು ನಾನು ನೋಡಿದ್ದು ಇದೇ ಮೊದಲು ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯಲ್ಲೇ ಆರಗ ಜ್ಞಾನೇಂದ್ರ ವಿರುದ್ಧ ಅಪಸ್ವರ- ಬದಲಾಗುತ್ತಾ ಸಚಿವರ ಖಾತೆ..?

ಖಾನ್ ಅವರು ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯದ ಮೊದಲು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ಯಾವುದೇ ಸೂಪರ್ ಪವರ್ ಭಾರತಕ್ಕೆ ಷರತ್ತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ. ನವದೆಹಲಿ ಮತ್ತು ಇಸ್ಲಾಮಾಬಾದ್ ಎರಡೂ ಉತ್ತಮ ಸಂಬಂಧವನ್ನು ಹಂಚಿಕೊಳ್ಳುವುದಿಲ್ಲ ಎಂದು ಒಪ್ಪಿಕೊಂಡಿದ್ದರು. ಭಾರತೀಯರು ಖುದ್ದಾರ್ ಕ್ವಾಮ್ (ಬಹಳ ಸ್ವಾಭಿಮಾನಿ ಜನರು). ಯಾವುದೇ ಮಹಾಶಕ್ತಿಯು ಭಾರತಕ್ಕೆ ಷರತ್ತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಇಮ್ರಾನ್ ಅವರು ಶುಕ್ರವಾರ ಹೇಳಿದ್ದರು.

ಆರ್‍ಎಸ್‍ಎಸ್ ಸಿದ್ಧಾಂತ ಮತ್ತು ಈ ಹಿಂದೆ ಕಾಶ್ಮೀರವನ್ನು ಪಾಕಿಸ್ತಾನವು ಯಾವ ರೀತಿ ಬಳಸಿಕೊಂಡಿದೆ ಎಂಬುದರ ಬಗ್ಗೆ ನಮಗೆ ಬೇಸರವಿದೆ. ಹೀಗಾಗಿ ಭಾರತವು ನಮ್ಮ ಜೊತೆ ಉತ್ತಮ ಸಂಬಂಧವನ್ನು ಹೊಂದಿಲ್ಲ. ಭಾರತ ಮತ್ತು ಪಾಕಿಸ್ತಾನ ಎರಡೂ ಒಟ್ಟಿಗೆ ಸ್ವಾತಂತ್ರ್ಯವನ್ನು ಪಡೆದುಕೊಂಡವು. ಆದರೆ ಇಸ್ಲಾಮಾಬಾದ್ ಅನ್ನು ಟಿಶ್ಯೂ ಪೇಪರ್ ಆಗಿ ಬಳಸಲಾಗುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *