ಬೆಂಗಳೂರು: ನಮ್ಮ ಡೆವಲಪ್ಮೆಂಟ್ ಮಾಡೆಲ್‍ಗೆ ನಾಯಕತ್ವವನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೆ, ಪಕ್ಷದ ಸಂಸದೀಯ ಮಂಡಳಿ ನಾಯಕತ್ವ ನಿರ್ಧಾರ ಮಾಡುತ್ತೆ ಅಂತಾ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಯಕತ್ವ ನಿರ್ಧಾರ ಚುನಾವಣೆಗೂ ಮುನ್ನ ಆದರೂ ಆಗಬಹುದು. ಚುನಾವಣೆ ಬಳಿಕವಾದ್ರೂ ಆಗಬಹುದು. ಆದರೆ ಸದ್ಯಕ್ಕೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕೆಲಸಗಳ ಬಗ್ಗೆ ಮಾತಾಡುತ್ತೇವೆ ಅಂತಾ ಮಾರ್ಮಿಕವಾಗಿ ಹೇಳಿದ್ರು. ರಾಜ್ಯದ ಜನ ಡೆವಲಪ್ಮೆಂಟ್ ಮಾಡೆಲ್ ಬಯಸುತ್ತಾರೆ. ಜೈಲ್ ಆಂಡ್ ಬೇಲ್ ಮಾಡೆಲ್ ಜನ ಬಯಸೋದಿಲ್ಲ, ಕರಪ್ಟ್ ಮಾಡೆಲ್ ಜನ ಬಯಸೋದಿಲ್ಲ ಅಂತಾ ಕಾಂಗ್ರೆಸ್‍ಗೆ ಟಾಂಗ್ ಕೊಟ್ಟರು.
ಇದೇ ವೇಳೆ ಕ್ಯಾಬಿನೆಟ್ ಪುನಾರಚನೆ ವಿಚಾರವಾಗಿ ಮಾತನಾಡಿದ ಅವರು, ಮಂತ್ರಿ ಸ್ಥಾನ ಬಿಟ್ಟುಕೊಡುವುದು ತ್ಯಾಗವೂ ಅಲ್ಲ, ಬಲಿದಾನವೂ ಅಲ್ಲ ಅವರವರ ಅವಶ್ಯಕತೆ ಇದ್ದಾಗ ಪಕ್ಷ ಜವಾಬ್ದಾರಿ ನೀಡುತ್ತದೆ, ಎಲ್ಲರೂ ಅದನ್ನು ಪಾಲಿಸುತ್ತಾರೆ. ಭಗತ್ ಸಿಂಗ್ ರಾಜಗುರು ಅಂಥವರದ್ದು ತ್ಯಾಗ ಬಲಿದಾನ, ನಮ್ಮದು ತ್ಯಾಗವೂ ಅಲ್ಲ, ಬಲಿದಾನವೂ ಅಲ್ಲ, ಪಕ್ಷ ಯಾರಿಗೆ ಏನ್ ಸೂಚನೆ ಕೊಡ್ತಾರೆ ಅದನ್ನ ಅವರು ಪಾಲಿಸಬೇಕು ಅಂತೇಳಿದ್ರು. 8,9ಕ್ಕೆ ನಮ್ಮ ಪಕ್ಷದ ಬೈಠಕ್ ಇದೆ. ಆ ಬೈಠಕ್ ನಲ್ಲಿ ಹಲವು ವಿಚಾರಗಳು ಚರ್ಚೆ ಆಗಲಿವೆ. ಬಸವರಾಜ ಬೊಮ್ಮಾಯಿ ಅವರು ಇರ್ತಾರೆ. ಎಲ್ಲರ ಅಭಿಪ್ರಾಯಗಳನ್ನು ಪಡೆದು ಪಕ್ಷ ನಿರ್ಧಾರ ಮಾಡುತ್ತೆ ಅಂತಾ ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ರಾಜ್ಯದಲ್ಲಿ 1,187 ಬೆಂಗ್ಳೂರಲ್ಲಿ 923 ಕೇಸ್ – ಸಕ್ರಿಯ ಪ್ರಕರಣ 10,292ಕ್ಕೆ ಏರಿಕೆ
ಇನ್ನೊಂದೆಡೆ ಕಾಂಗ್ರೆಸ್ ನಾಯಕತ್ವ ಕುಟುಕಿದ ಸಿ.ಟಿ.ರವಿ, ನಮ್ಮ ಪಾರ್ಟಿಯಲ್ಲಿ ಯಾರೂ ಎಷ್ಟೇ ದೊಡ್ಡವರಿರಲಿ ನಮ್ಮ ಅಧ್ಯಕ್ಷರೇ ಸುಪ್ರೀಂ. ಆದರೆ ಕಾಂಗ್ರೆಸ್ ನಲ್ಲಿ ಯಾರು ಸುಪ್ರೀಂ..? ಏನಯ್ಯಾ ನನ್ನ ಬಿಟ್ಟು ಮೀಟಿಂಗ್ ಮಾಡ್ತೀಯಾ ಅಂತಾ ಸಿದ್ದರಾಮಯ್ಯ ಕೇಳ್ತಾರೆ. ಹಾಗಾದ್ರೆ ಅವರ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಇರುವ ಅಧಿಕಾರ ಏನು..? ಅಧಿಕಾರ ಚಲಾಯಿಸುವ ಹಕ್ಕು ಇಲ್ಲವಾ ಅವರಿಗೆ ಹೇಳಲಿ ಅಂತಾ ಟಾಂಗ್ ಕೊಟ್ಟರು. ಇದನ್ನೂ ಓದಿ: 2.50 ಲಕ್ಷಕ್ಕೆ ಹರಾಜಾಯ್ತು ಮಾರುತಿ ದೇವರ ಹಣ್ಣುಕಾಯಿ ಪ್ರಸಾದ
ಡಿಕೆ-ಹೆಚ್‍ಡಿಕೆ ನಾವು ಜೋಡೆತ್ತುಗಳು ಅಂತಿದ್ರು. ಜೋಡೆತ್ತು ಇಷ್ಟು ಬೇಗ ಕಣಿ ಹರಿದುಕೊಂಡು ಬಿಟ್ಟಿದೆಯಾ? ಸಿದ್ದರಾಮಯ್ಯ ಬಹಳಷ್ಟು ಸಾರಿ ಉಪ್ಪು ತಿಂದವನು ನೀರು ಕುಡಿಬೇಕ್ರಿ ಅಂತೇಳಿದ್ರು. ಕೆಲವರು ಉಪ್ಪು ತಿಂದಿದ್ದಾರೆ, ನೀರು ಕುಡೀತಾರೆ. ಸಿದ್ದರಾಮಯ್ಯ ಏನಾದ್ರೂ ಹೇಳಿದ್ರಾ ಕಾಂಗ್ರೆಸ್ ನವರು ಎಷ್ಟೇ ಭ್ರಷ್ಟಾಚಾರ ಮಾಡಿದ್ರೂ ನಿತ್ಯ ಪತಿವ್ರತೆಯರು ಅಂತಾ..? ಯಾರು ಉಪ್ಪು ತಿಂದಿದ್ದಾರೋ ಅವರು ನೀರು ಕುಡಿಯಲೇಬೇಕು ಅಂತಾ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.