ಮಂಡ್ಯದಿಂದ ಸ್ಪರ್ಧಿಸುವಂತೆ ಕುಮಾರಸ್ವಾಮಿಗೆ ಮುಖಂಡರು, ನಾಯಕರ ಒತ್ತಾಯ

By
2 Min Read

ಬೆಂಗಳೂರು: ಮಂಡ್ಯ (Mandya) ಜಿಲ್ಲೆಯಿಂದ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಲೋಕಸಭೆ ಚುನಾವಣೆಗೆ (Lok Sabha Election) ಸ್ಪರ್ಧಿಸುವಂತೆ ಮಂಡ್ಯ ಜಿಲ್ಲಾ ನಾಯಕರು ಒತ್ತಾಯ ಮಾಡಿದ್ದಾರೆ. ಜೆಪಿ ಭವನದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ನಡೆದ ಮಂಡ್ಯ ಜಿಲ್ಲೆಯ ಮುಖಂಡರು, ನಾಯಕರ ಸಭೆಯಲ್ಲಿ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ ಕೇಳಿ ಬಂತು. ಅಲ್ಲದೆ ಮಂಡ್ಯ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಡದಂತೆ ನಾಯಕರು ಅಭಿಪ್ರಾಯ ಸಲ್ಲಿಕೆ ಮಾಡಿದರು.

ಮಂಡ್ಯ ಲೋಕಸಭೆ ಸೀಟು ಜೆಡಿಎಸ್ ತೆಗೆದುಕೊಳ್ಳಬೇಕು. ಮಂಡ್ಯ ನಮ್ಮ ಭದ್ರಕೋಟೆ. ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿರಬಹುದು. ಆದರೆ ಲೋಕಸಭೆಯಲ್ಲಿ ನಮಗೆ ದೊಡ್ಡ ಗೆಲುವು ಆಗಲಿದೆ. ಬಿಜೆಪಿ ಹೈಕಮಾಂಡ್ ಜೊತೆ ಈ ಬಗ್ಗೆ ಚರ್ಚೆ ಮಾಡಿ. ಸುಮಲತಾ ಅಂಬರೀಶ್ ಇದ್ದರೂ ಬಿಜೆಪಿ ನಾಯಕರು ಅವರ ಜೊತೆ ಮಾತನಾಡಲಿ. ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ಕೊಡೋಕೆ ಆಗೋದು ಜೆಡಿಎಸ್‌ನಿಂದ ಮಾತ್ರ. ಯಾವುದೇ ಕಾರಣಕ್ಕೂ ಮಂಡ್ಯ ಕ್ಷೇತ್ರ ಬಿಟ್ಟು ಕೊಡದಂತೆ ನಾಯಕರು ಒತ್ತಾಯ ಮಾಡಿದರು. ಇದನ್ನೂ ಓದಿ: ಫೆ.14 ಕ್ಕೆ ಬಿಎಪಿಎಸ್‌ ಹಿಂದೂ ದೇವಾಲಯ ಉದ್ಘಾಟನೆ; ಎಲ್ಲಿ? ದೇವಸ್ಥಾನದ ವೈಶಿಷ್ಟ್ಯವೇನು?

ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ಗೆಲುವು ಖಚಿತ. ಕುಮಾರಸ್ವಾಮಿ ಸ್ಪರ್ಧೆಯಿಂದ ಕಾರ್ಯಕರ್ತರು, ಮುಖಂಡರು ಒಟ್ಟಾಗಿ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಸೋಲಿಸೋಕೂ ಕುಮಾರಸ್ವಾಮಿ ಸ್ಪರ್ಧೆ ಅನುಕೂಲ ಆಗುತ್ತದೆ. ವರಿಷ್ಠರು ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡುವಂತೆ ಒಕ್ಕೊರಲ ಒತ್ತಡ ಹೇರಿದರು. ಇದನ್ನೂ ಓದಿ: ನಾವು ಗಾಂಧಿ ಹಿಂದುತ್ವವಾದಿಗಳು, ರಾಮಲಲ್ಲಾ ಟೆಂಟ್‌ನಲ್ಲಿದ್ದಾಗ ದರ್ಶನ ಮಾಡಿದ್ದೇವೆ: ಕೆಎನ್ ರಾಜಣ್ಣ

ಸಭೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ಜೊತೆ ನಾವು ಮೈತ್ರಿಯಾಗಿದ್ದೇವೆ. ಯಾವ ಕ್ಷೇತ್ರ ಸಿಗುತ್ತೋ ಗೊತ್ತಿಲ್ಲ. ಸಂಕ್ರಾಂತಿ ಬಳಿಕ ಸೀಟು ಹಂಚಿಕೆ ಫೈನಲ್ ಆಗಲಿದೆ. ಯಾವ ಯಾವ ಕ್ಷೇತ್ರ ಅಂತ ಆಗ ಅಂತಿಮ ಆಗುತ್ತದೆ. ಯಾವುದೇ ಕ್ಷೇತ್ರ ನಮಗೆ ಸಿಗಲಿ. ನಾವು ಒಟ್ಟಾಗಿ ಕೆಲಸ ಮಾಡಬೇಕು. ಬಿಜೆಪಿ ಜೊತೆ ಒಟ್ಟಾಗಿ ಕೆಲಸ ಮಾಡಿ. ಮೈತ್ರಿಗೆ ದೇವೇಗೌಡರು ಮುದ್ರೆ ಹಾಕಿರೋದು. ಹೀಗಾಗಿ ನಾವು ಮೈತ್ರಿ ಧರ್ಮ ಪಾಲನೆ ಮಾಡಲೇಬೇಕು ಎಂದರು. ಇದನ್ನೂ ಓದಿ: ಕೆಲ ಧರ್ಮದ್ವೇಷಿಗಳಿಂದ ಅಪಪ್ರಚಾರ: ಶೃಂಗೇರಿ ಮಠದಿಂದ ಸ್ಪಷ್ಟನೆ

ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದೀರಾ. ದೇವೇಗೌಡರು, ಕುಮಾರಸ್ವಾಮಿ ಅವರಿಗೆ ನಿಮ್ಮ ಭಾವನೆ ತಿಳಿಸುತ್ತೇನೆ. ಅಂತಿಮವಾಗಿ ದೇವೇಗೌಡರು ಸ್ಪರ್ಧೆ ಬಗ್ಗೆ ನಿರ್ಧಾರ ಮಾಡುತ್ತಾರೆ. ನೀವೆಲ್ಲಾ ಏನು ಹೇಳುತ್ತೀರೋ ವರಿಷ್ಠರು ಹಾಗೇ ಮಾಡುತ್ತಾರೆ. ಕ್ಷೇತ್ರಗಳಲ್ಲಿ ಏನಾದ್ರು ಸಮಸ್ಯೆಗಳು ಇದ್ದರೆ ಸರಿ ಮಾಡಿಕೊಂಡು ಬಿಜೆಪಿ ಜೊತೆ ಒಟ್ಟಾಗಿ ಕೆಲಸ ಮಾಡಿ ಎಂದು ಮಂಡ್ಯ ನಾಯಕರು, ಮುಖಂಡರಿಗೆ ನಿಖಿಲ್ ಮನವಿ ಮಾಡಿದರು. ಇದನ್ನೂ ಓದಿ: ಮಂಡ್ಯದಿಂದ ಹೆಚ್‌ಡಿಕೆ ಸ್ಪರ್ಧೆ – ಕಾರ್ಯಕರ್ತರು, ನಾಯಕರ ಜೊತೆ ಚರ್ಚೆ ಮಾಡಿ ನಿರ್ಧಾರ: ನಿಖಿಲ್ ಕುಮಾರಸ್ವಾಮಿ

Share This Article