ಮಾದೇವ ನಂತರ ಲಂಕಾಸುರನಾಗಿ ಮರಿ ಟೈಗರ್ ಅಬ್ಬರ

Public TV
1 Min Read

ರಿ ಟೈಗರ್ ವಿನೋದ್ ಪ್ರಭಾಕರ್ (Vinod Prabhkar) ಅಭಿನಯದ ಮಾದೇವ ಈ ವರ್ಷದ ಬಾಕ್ಸಾಫಿಸ್‌ನಲ್ಲಿ ಸದ್ದು ಮಾಡಿದ ಸಿನಿಮಾ. ಕಮರ್ಷಿಯಲ್ ಎಲಿಮೆಂಟ್ ಜೊತೆಗೆ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಉಣಬಡಿಸಿದ ಮಾದೇವ ಸಿನಿಮಾ ಈ ವರ್ಷದ ಸಕ್ಸಸ್ ಲಿಸ್ಟ್‌ನಲ್ಲಿದೆ. ಸಿನಿಮಾದ ನಂತರ ವಿನೋದ್ ಪ್ರಭಾಕರ್ (Vinod Prabhakar) ನಟನೆಯ ಲಂಕಾಸುರ (Lankasura) ಸಿನಿಮಾ ತಂಡ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟಿದೆ.

ಟೈಗರ್ ಟಾಕೀಸ್ ಬ್ಯಾನರ್‌ ನಡಿಯಲ್ಲಿ ವಿನೋದ್ ಪ್ರಭಾಕರ್ ಪತ್ನಿ ನಿಶಾ ವಿನೋದ್ ಪ್ರಭಾಕರ್ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾ ಇದೇ ವರ್ಷ ತೆರೆಗೆ ಬರಲು ಸಿದ್ಧತೆಯನ್ನ ಮಾಡುತ್ತಿದೆ. ಮಾದೇವ ಈ ವರ್ಷ ತಂದುಕೊಟ್ಟ ಸಕ್ಸಸ್‌ನ ಸಂಭ್ರಮದಲ್ಲಿರುವ ವಿನೋದ್ ಪ್ರಭಾಕರ್ ಈ ವರ್ಷಾಂತ್ಯಕ್ಕೆ ಲಂಕಾಸುರ ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ. ಈ ಖುಷಿ ವಿಚಾರವನ್ನು ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರತಂಡ ಹಂಚಿಕೊಂಡಿದೆ. ಇದನ್ನೂ ಓದಿ: ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾಗೆ ಮುಹೂರ್ತ

ಶಿವಭಕ್ತನಾಗಿ ಮಾದೇವ ಸಿನಿಮಾದ ಮೂಲಕ ಕರುನಾಡ ಮನಗೆದ್ದ ವಿನೋದ್ ಪ್ರಭಾಕರ್ ಲಂಕಾಸುರನಾಗಿ ಮನರಂಜನೆ ನೀಡಲು 2025ರಲ್ಲಿ ಮುಹೂರ್ತ ಇಡಲಾಗಿದೆ. ಲಂಕಾಸುರ ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ದೇವರಾಜ್, ರವಿಶಂಕರ್, ಪಾರ್ವತಿ ಅರುಣ್ ಸೇರಿದಂತೆ ಅತಿದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಈ ಚಿತ್ರಕ್ಕೆ ಸುಗನ್ ಅವರ ಛಾಯಾಗ್ರಾಹಣವಿದ್ದರೆ, ವಿಜೇತ್ ಕೃಷ್ಣ ಸಂಗೀತ ನಿರ್ದೇಶನವಿದೆ. ಇದನ್ನೂ ಓದಿ:ಕಾಂತಾರ ಚಾಪ್ಟರ್ 1| ಕನಕವತಿಯ ಮೊದಲ ನೋಟ ವರಮಹಾಲಕ್ಷ್ಮಿಯಂದು ಅನಾವರಣ

Share This Article