ಯಲ್ಲಾಪುರದ ಬೀಗಾರ ಗ್ರಾಮದಲ್ಲಿ ಭೂಕುಸಿತ

By
1 Min Read

ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮತ್ತೆ ಭೂಕುಸಿತ ಮುಂದುವರಿದಿದೆ. ಜಿಲ್ಲೆಯ ಯಲ್ಲಾಪುರದ (Yellapur) ವಜ್ರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೀಗಾರ ಗ್ರಾಮದಲ್ಲಿ (Beegar Village) ಭೂಕುಸಿತವಾಗಿದೆ.

ಇಲ್ಲಿನ ತಾರಗಾರ-ಬೀಗಾರ ಮತ್ತು ಬಾಗಿನ ಕಟ್ಟಾ ಗ್ರಾಮ ಸಂಪರ್ಕಿಸುವ ರಸ್ತೆ ತಳಭಾಗದಲ್ಲಿ ಭೂಮಿ ಕುಸಿತ ಕಂಡಿದೆ. ಹೆಚ್ಚಿನ ಮಳೆಯಾದರೆ ಸಂಪೂರ್ಣ ರಸ್ತೆ ಕುಸಿಯುವ ಆತಂಕ ತಂದೊಡ್ಡಿದೆ. ಇದನ್ನೂ ಓದಿ: ಬಸವಸಾಗರ ಡ್ಯಾಂನಿಂದ ಕೃಷ್ಣ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ಲಿಂಗಸೂಗುರು ಸೇತುವೆ ಮುಳುಗಡೆ

ಈ ಭಾಗದಲ್ಲಿ ಆರು ಅಡಿಗೂ ಹೆಚ್ಚು ಭಾಗ ಮಣ್ಣು ಕುಸಿತವಾಗಿದ್ದು, ಕಾಂಕ್ರಿಟ್ ರೋಡ್ ಮಾತ್ರ ಉಳಿದುಕೊಂಡಿದೆ. ಮಳೆಯ ನೀರು ಕುಸಿತವಾದ ಜಾಗದಲ್ಲಿ ಝರಿಯಾಗಿ ಹರಿಯುತ್ತಿದ್ದು, ಮತ್ತೆ ಭೂಕುಸಿತವಾಗುವ ಆತಂಕ ತಂದೊಡ್ಡಿದೆ.

ಮತ್ತೆ ಭೂ ಕುಸಿತವಾದಲ್ಲಿ ತಾತಗಾರ, ಬೀಗಾರ, ಬಾಗಿನ ಕಟ್ಟಾ ಗ್ರಾಮದ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಕುಸಿದ ಭಾಗದ ರಸ್ತೆಯ ತಳಭಾಗದಲ್ಲಿ ಮನೆಗಳು ಸಹ ಇದ್ದು, ಒಂದು ವೇಳೆ ಮತ್ತೆ ಕುಸಿತವಾದರೆ ಮನೆಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ 1.15 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ಕಂಪ್ಲಿ ಸೇತುವೆ ಮುಳುಗಡೆ

ಸದ್ಯ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಇನ್ನೂ ಒಂದು ದಿನ ರೆಡ್ ಅಲರ್ಟ್‌ ನೀಡಲಾಗಿದೆ. ಇನ್ನೆರೆಡು ದಿನದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆದರೆ, ಮಳೆಯಿಂದಾಗಿ ಇದೀಗ ಪಶ್ಚಿಮ ಘಟ್ಟ ಭಾಗದಲ್ಲಿ ಭೂಕುಸಿತವಾಗುತ್ತಿದ್ದು, ಮತ್ತೆ ಆತಂಕ ತಂದೊಡ್ಡಿದೆ.

Share This Article