ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ – ವಾಹನ ಸಂಚಾರ ಸಂಪೂರ್ಣ ಬಂದ್

Public TV
1 Min Read

ಕಾರವಾರ: ಇಲ್ಲಿನ ದೇವಿಮನೆ ಘಟ್ಟದಲ್ಲಿ (Devimane Ghat) ಮತ್ತೆ ಗುಡ್ಡ ಕುಸಿದಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.

ಕಳೆದ ಎರಡು ದಿನದಿಂದ ಶಿರಸಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766 (ಇ) ನಲ್ಲಿ ಗುಡ್ಡ ಕುಸಿತವಾಗುತಿತ್ತು. ಕುಸಿದ ಗುಡ್ಡದ (Land Slide) ಮಣ್ಣು ತೆಗೆದು ಶನಿವಾರ ರಾತ್ರಿ ಲಘು ವಾಹನ ಸಂಚಾರಕ್ಕೆ ಬಿಡಲಾಗಿತ್ತು. ಇದನ್ನೂ ಓದಿ: ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ – ಪೈಲೆಟ್, ಮಗು ಸೇರಿ 6 ಮಂದಿ ಸಜೀವ ದಹನ

ಇಂದು ಮತ್ತೆ ಕುಸಿದ ಜಾಗದಲ್ಲೇ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ಹೆದ್ದಾರಿ ಮೇಲೆ ಕಲ್ಲು, ಮರಗಳು ಬಿದ್ದಿವೆ. ಈ ಹಿನ್ನೆಲೆ ಇಂದು ಬೆಳಗ್ಗಿನಿಂದ ಕುಮಟಾ-ಶಿರಸಿಯ ಹೆದ್ದಾರಿ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಇದನ್ನೂ ಓದಿ: Bengaluru | ಆಟೋಗೆ ಕಾರು ಡಿಕ್ಕಿ – ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

Share This Article