ಜ. 31 ರೊಳಗೆ ಇಡಿ ಮುಂದೆ ಹಾಜರಾಗಿ- ಜಾರ್ಖಂಡ್ ಸಿಎಂಗೆ ಇಡಿ 10ನೇ ಸಮನ್ಸ್‌

Public TV
1 Min Read

ರಾಂಚಿ: ಭೂ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್‌ (Hemant Soren) ಅವರಿಗೆ ಜಾರಿ ನಿರ್ದೇಶನಾಲಯ (ED) 10ನೇ ಸಮನ್ಸ್ ಕಳುಹಿಸಿದೆ.

ಜನವರಿ 29 ಮತ್ತು 31ರ ನಡುವೆ ಯಾವಾಗ ವಿಚಾರಣೆ ನಡೆಸಬೇಕು ಎಂದು ನಿರ್ಧರಿಸುವಂತೆ ಇಡಿ ಮುಖ್ಯಮಂತ್ರಿಗೆ ಕಳುಹಿಸಿದ ಪತ್ರದಲಿ ತಿಳಿಸಿದೆ. ಈ ಹಿಂದಿನಂತೆ ಹೇಳಿಕೆ ದಾಖಲಿಸಿಕೊಳ್ಳಲು ಬರದಿದ್ದರೆ ಇಡಿ ಅಧಿಕಾರಿಗಳೇ ನಿಮ್ಮ ಮುಂದೆ ಬರುವುದಾಗಿ ಎಚ್ಚರಿಕೆಯನ್ನೂ ನೀಡಲಾಗಿದೆ.

ಇದಕ್ಕೂ ಮುನ್ನ ಜನವರಿ 25ರಂದು ಇಡಿ ವಿಚಾರಣೆಗೆ ಕಾಲಾವಕಾಶ ನೀಡಲು ಸಿಎಂ ಪರೋಕ್ಷವಾಗಿ ನಿರಾಕರಿಸಿದ್ದರು. ಅಲ್ಲದೆ ಇಡಿಗೆ ಕಳುಹಿಸಿರುವ ಪತ್ರದಲ್ಲಿ ಕಾಲಾವಕಾಶ ನೀಡುವ ಬಗ್ಗೆ ಸಿಎಂ ಉಲ್ಲೇಖಿಸಿಲ್ಲ. ಸೂಕ್ತ ಸಮಯದಲ್ಲಿ ಉತ್ತರ ನೀಡುವುದಾಗಿ ಹೇಳಲಾಗಿತ್ತು . ಇದನ್ನೂ ಓದಿ: 7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್‌ – ಕೇಜ್ರಿವಾಲ್‌ ಹೊಸ ಬಾಂಬ್‌

ಜನವರಿ 27ರಿಂದ 31ರೊಳಗೆ ಇಡಿ ತನಿಖಾ ತಂಡದ ಮುಂದೆ ಹಾಜರಾಗುವಂತೆ ಇಡಿ ಜನವರಿ 22ರಂದು ಸಿಎಂಗೆ 9ನೇ ಸಮನ್ಸ್‌ ಕಳುಹಿಸಿತ್ತು. ಇದಕ್ಕೂ ಮುನ್ನ ಜನವರಿ 20ರಂದು 8ನೇ ಸಮನ್ಸ್‌ನಲ್ಲಿ ಇಡಿ ಅಧಿಕಾರಿಗಳು ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿದ್ದರು. ಈ ವೇಳೆ ತಂಡ ಸುಮಾರು 7 ಗಂಟೆಗಳ ಕಾಲ ಅವರನ್ನು ವಿಚಾರಣೆ ನಡೆಸಿತು. ಆದರೆ ಇಡಿ ವಿಚಾರಣೆ ಪೂರ್ಣಗೊಂಡಿಲ್ಲ. ಹೀಗಾಗಿ ಜಾರಿ ನಿರ್ದೇಶನಾಲಯ ತಂಡ ಹೇಮಂತ್‌ ಸೊರೆನ್ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸಲಿದೆ.

ಇಡಿ ಕಳುಹಿಸಿದ ಕಳೆದ 7 ಸಮನ್ಸ್‌ಗಳಿಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಗೈರುಹಾಜರಾಗಿದ್ದರು, ಈ ಸಮನ್ಸ್‌ಗಳು ಅಸಂವಿಧಾನಿಕ ಮತ್ತು ತಮ್ಮ ಸರ್ಕಾರಕ್ಕೆ ಕಿರುಕುಳ ನೀಡಲು ಇದನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದರು.

Share This Article