ಬೆಂಗಳೂರಿನಲ್ಲಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ – ರಿಕ್ಕಿ ರೈಗೆ ನೋಟಿಸ್

1 Min Read

– ರಿಕ್ಕಿ ಕಾರು ಓಡಿಸಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ (Rikki Rai) ಕಬ್ಬನ್ ಪಾರ್ಕ್ (Cubbon Park) ಟ್ರಾಫಿಕ್ ಪೊಲೀಸರು (Traffic Police) ನೋಟಿಸ್ ನೀಡಿದ್ದಾರೆ.

ಶನಿವಾರ ಮುಂಜಾನೆ 2:30ರ ವೇಳೆಗೆ ಲ್ಯಾಂಬೋರ್ಗಿನಿ ಕಾರಿನಲ್ಲಿ ಡ್ರಿಫ್ಟಿಂಗ್ (Drifting) ಮಾಡಲಾಗಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ರಿಕ್ಕಿ ರೈ ನಾನು ಕಾರು ಓಡಿಸಿಲ್ಲ ಎಂದಿದ್ದರು. ಅನಿಲ್ ಕುಂಬ್ಳೆ ಸರ್ಕಲ್ ಬಳಿಯ ಸಿಸಿಟಿವಿ ಪರಿಶೀಲನೆ ವೇಳೆ ರಿಕ್ಕಿ ರೈ ಕಾರು ಓಡಿಸಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಮಧ್ಯಪ್ರಾಚ್ಯ ಸಂಘರ್ಷ: ದೇಶದಲ್ಲಿ ಪರಿಸ್ಥಿತಿ ನಿಭಾಯಿಸಲು ಮೋದಿ ನೇತೃತ್ವದ ಸಭೆ – ಹಿರಿಯ ಸಚಿವರ ತಂಡ ರಚನೆ

ಸದ್ಯ ಲ್ಯಾಂಬೋರ್ಗಿನಿ ಕಾರನ್ನು ವಶಕ್ಕೆ ಪಡೆದಿರುವ ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸರು ರಿಕ್ಕಿ ರೈಗೆ ನೋಟಿಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಮೊಬೈಲ್ ಪಾಸ್‌ವರ್ಡ್ ಕೊಡೋ ಮುನ್ನ ಎಚ್ಚರ – ಗೆಳೆಯನ ಫೋನ್‌ನಿಂದ 4.5 ಲಕ್ಷ ಶಾಪಿಂಗ್ ಮಾಡಿದ ಭೂಪ

ಏನಿದು ಕಾರ್ ಡ್ರಿಫ್ಟಿಂಗ್?
ಕಾರ್ ಡ್ರಿಫ್ಟಿಂಗ್ ಎಂಬುದು ವಾಹನದ ಹಿಂದಿನ ಚಕ್ರಗಳ ಹಿಡಿತವನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿ, ತಿರುವುಗಳಲ್ಲಿ ನಿಯಂತ್ರಿತ ರೀತಿಯಲ್ಲಿ ಜಾರುವಂತೆ ಮಾಡುವ ಸಾಹಸಮಯ ಚಾಲನಾ ತಂತ್ರವಾಗಿದೆ. ಈ ಕಲೆಗೆ ಹೆಚ್ಚಿನ ಕೌಶಲ್ಯದ ಅಗತ್ಯವಿದೆ. ವೇಗ, ನಿಯಂತ್ರಣ ಮತ್ತು ಕೌಶಲ್ಯವನ್ನು ಪ್ರದರ್ಶಿಸುವ ಮೋಟಾರ್‌ಸ್ಪೋರ್ಟ್ ಆಗಿದೆ.

Share This Article