ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸಲ್ಲ, ಆದರೆ ಅವರಲ್ಲಿ ಶ್ರೀಮಂತರಿಲ್ಲವೇ?- ಬಿಜೆಪಿ ಶಾಸಕ

Public TV
2 Min Read

ಪಾಟ್ನಾ: ಕಾಂತಾರಾ (Kantara) ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ ಚೇತನ್ (Actor Chetan) ಅವರು ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಭಾರೀ ಚರ್ಚೆಗೀಡಾಗಿದ್ದರು. ಇದೀಗ ಬಿಹಾರದ ಬಿಜೆಪಿ ಶಾಸಕ (Bihar BJP MLA) ರೊಬ್ಬರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹಿಂದೂ ದೇವತೆಗಳ ಕುರಿತಾಗಿ ಬಿಹಾರದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ (Lalan Paswan) ವಿವಾದಾತ್ಮಕ ಹೇಳಿಕೊಂದನ್ನು ನೀಡಿದ್ದಾರೆ. ಸದ್ಯ ಶಾಸಕರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಲಾಲನ್ ಪಾಸ್ವಾನ್ ಭಾಗಲ್ಪುರ ಜಿಲ್ಲೆಯ ಪಿರ್ಪೈಂಟಿ ವಿಧಾನಸಭಾ ಕ್ಷೇತ್ರದ ಶಾಸಕ. ಇದೀಗ ಇವರು ಹಿಂದೂಗಳ ನಂಬಿಕೆಯಾದ ಲಕ್ಷ್ಮಿ ಪೂಜೆ (Lakshmi Pooja) ಯನ್ನು ಅವಹೇಳನ ಮಾಡುವ ಹೇಳಿಕೆ ನೀಡಿ ಫಜೀತಿಗೆ ಸಿಲುಕಿದ್ದಾರೆ. ಇದನ್ನೂ ಓದಿ: ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ – ರಿಷಬ್ ಸಮರ್ಥನೆ ತಳ್ಳಿಹಾಕಿದ ನಟ ಚೇತನ್

ಕೇವಲ ಲಕ್ಷ್ಮಿಯನ್ನು ಪೂಜಿಸುವುದರಿಂದಲೇ ಸಂಪತ್ತು ಸಿಗುವುದಾದರೆ ಇಂದು ಮುಸ್ಲಿಮರು ಕೋಟ್ಯಧಿಪತಿಗಳಾಗುತ್ತಿರಲಿಲ್ಲ. ಯಾಕೆಂದರೆ ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸುವುದಿಲ್ಲ. ಆದರೆ ಅವರಲ್ಲಿ ಶ್ರೀಮಂತರಲಿಲ್ಲವೇ ಎಂದು ಶಾಸಕರು ಪ್ರಶ್ನಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಮುಸ್ಲಿಮರು ಸರಸ್ವತಿ ದೇವಿ (Goddess Saraswati) ಯನ್ನು ಕೂಡ ಪೂಜಿಸುವುದಿಲ್ಲ. ಆದರೆ ಅವರಲ್ಲಿ ಪಂಡಿತರು, ವಿದ್ವಾಂಸರಿಲ್ಲವೇ. ಅವರು ಕೂಡ ಐಎಎಸ್, ಐಪಿಎಸ್ ಆಗಿಲ್ಲವೇ ಎಂದು ಮರು ಪ್ರಶ್ನೆ ಹಾಕುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಆತ್ಮ ಹಾಗೂ ಪರಮಾತ್ಮ ಎಂಬುದು ಜನರ ನಂಬಿಕೆಯಾಗಿದೆ ಅಷ್ಟೇ. ನೀವು ನಂಬಿದರೆ ಅದು ದೇವತೆ, ಇಲ್ಲದಿದ್ದರೆ ಅದು ಬರೀ ಕಲ್ಲಿನ ವಿಗ್ರಹವಾಗಿರುತ್ತದೆ. ಹೀಗಾಗಿ ನಾವು ದೇವತೆಗಳನ್ನು ನಂಬಬೇಕೋ, ಬೇಡವೋ ಅನ್ನೋದು ನಮಗೆ ಬಿಟ್ಟ ವಿಚಾರವಾಗಿರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

ಆಂಜನೇಯ ಶಕ್ತಿಯುಳ್ಳ ದೇವರು ಎಂದು ನಂಬಲಾಗುತ್ತದೆ. ಆದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಬಜರಂಗಬಲಿಯನ್ನು ಪೂಜಿಸುವುದಿಲ್ಲ. ಹಾಗಾದರೆ ಅವರು ಶಕ್ತಿಶಾಲಿಗಳಲ್ಲವೇ..?. ಒಟ್ಟಿನಲ್ಲಿ ನೀವು ನಂಬುವುದನ್ನು ನಿಲ್ಲಿಸಿದ ದಿನ ಇವೆಲ್ಲದಕ್ಕೂ ಒಂದು ಅಂತ್ಯ ಕಾಣುತ್ತೇವೆ ಎಂದು ಪಾಸ್ವಾನ್ ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *