ವಿಜೃಂಭಣೆಯಿಂದ ಜರುಗಿದ ಲಕ್ಷ್ಮಿ ತಿರುಪತಿ ತಿಮ್ಮಪ್ಪ ರಥೋತ್ಸವ

Public TV
1 Min Read

ಯಾದಗಿರಿ: ಗಿರಿನಾಡು ಯಾದಗಿರಿ (Yadagiri) ಜಿಲ್ಲೆಯ ಬೆಟ್ಟದ ಮಡಿಲಿನಲ್ಲಿರುವ ಶ್ರೀ ಲಕ್ಷ್ಮಿ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮಹಾರಥೋತ್ಸವವು ಅದ್ಧೂರಿಯಾಗಿ ಜರುಗಿತು.

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬೋರಬಂಡಾ ಗ್ರಾಮದ ಹೊರ ಭಾಗದಲ್ಲಿರುವ ಬೆಟ್ಟದ ಮೇಲಿರುವ ಶ್ರೀ ಲಕ್ಷ್ಮಿ ತಿರುಪತಿ ತಿಮ್ಮಪ್ಪ ದೇವಸ್ಥಾನವು ಕಲ್ಯಾಣ ಕರ್ನಾಟಕ ಭಾಗದ ತಿರುಪತಿ ತಿಮ್ಮಪ್ಪನೆಂದೇ ಪ್ರಸಿದ್ಧಿ ಹೊಂದಿದ್ದಾನೆ. ಶ್ರೀ ಕೃಷ್ಣನ ಜನ್ಮಾಷ್ಠಮಿ ದಿನದಂದು ಪ್ರತೀ ವರ್ಷ ಈ ಲಕ್ಷ್ಮಿ ತಿರುಪತಿ ತಿಮ್ಮಪ್ಪನ ಮೂರ್ತಿಯನ್ನು ಗ್ರಾಮಸ್ಥರೆಲ್ಲರೂ ಸೇರಿಕೊಂಡು ಪಾಲಿಕೆಯಲ್ಲಿರಿಸಿ ಗ್ರಾಮದ ಶ್ರೀ ಹನುಮಾನ ದೇವಸ್ಥಾನಕ್ಕೆ ಪಾಲಿಕೆಯಲ್ಲಿರಿಸಿ ಮೆರವಣಿಗೆ ನಡೆಸಿದ ನಂತರ ದೇವಸ್ಥಾನಕ್ಕೆ ಆಗಮಿಸುತ್ತಾರೆ.

ಈ ವೇಳೆ ಮೊದಲು ಭಕ್ತರೆಲ್ಲರೂ ಮೊಸರಿನ ಗಡಿಗೆಯನ್ನು ಒಡೆದ್ರು. ನಂತರ ದೇವಸ್ಥಾನದ ಒಳಗಡೆಯೇ ಇರುವ ರಥದಲ್ಲಿ ಮೂರ್ತಿಯನ್ನಿರಿಸಿ ವಿಜೃಂಭಣೆಯಿಂದ ರಥವನ್ನು ಎಳೆದ್ರು. ಐದು ಸುತ್ತು ಗರ್ಭ ಗುಡಿಯ ಸುತ್ತು ಹಾಕಿ ಭಕ್ತರು ಪುನೀತರಾದ್ರು. ಇನ್ನು ಈ ರಥೋತ್ಸವದ ವಿಶೇಷವೆಂದರೆ ಮಕ್ಕಳೇ ರಥ ಎಳೆಯುವುದು. ಇದನ್ನೂ ಓದಿ: ಬಿಜೆಪಿ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಶೀಘ್ರವೇ ಕಾಂಗ್ರೆಸ್ ಸೇರ್ಪಡೆ

ರಥೋತ್ಸವ ಜರುಗಿದ ನಂತರ ಲಕ್ಷ್ಮಿ ತಿರುಪತಿ ತಿಮ್ಮಪ್ಪನ ಮೂರ್ತಿಯನ್ನು ಜೋಳಿಗೆಯಲ್ಲಿ ಹಾಕಿ ತೂಗಲಾಯಿತು. ಈ ವೇಳೆ ಭಕ್ತರೆಲ್ಲರೂ ಗೋವಿಂದ ಗೋವಿಂದ ಅನ್ನುವ ಘೋಷ ವಾಕ್ಯಗಳು ಮೊಳಗಿದವು. ಈ ದೇವಸ್ಥಾನಕ್ಕೆ ಬಂದು ಹೋಗುವ ಭಕ್ತರ ಇಷ್ಟಾರ್ಥಗಳು ಈಡೇರುತ್ತಿರುವುದರಿಂದ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್