ನನಗೆ ಅಧಿಕಾರದ ಆಸೆಯಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

Public TV
1 Min Read

ಬೆಳಗಾವಿ: ರಾಜ್ಯದ ಜನರಿಗೆ ಕೊಟ್ಟ 5 ಭರವಸೆ ಈಡೇರಿಸುವುದು ನಮ್ಮೆಲ್ಲರ ಲಕ್ಷ್ಯವಾಗಿದೆ ಹೊರತಾಗಿ ಅಧಿಕಾರದ ಆಸೆ ಇಲ್ಲ ಎಂದು ಕಾಂಗ್ರೆಸ್‍ನ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೋ ಆ ಜವಾಬ್ದಾರಿ ನಿಭಾಯಿಸುತ್ತೇನೆ. ನಾನು ಅದರ ಬಗ್ಗೆ ಏನು ಮಾತನಾಡಲ್ಲ. 135 ಜನ ಗೆದ್ದಿದ್ದೇವೆ ಕರ್ನಾಟಕದ ಮಹಾಜನತೆ ಆಶೀರ್ವಾದ ಮಾಡಿದ್ದಾರೆ ಎಂದರು.

ನನಗೆ ನನ್ನ ಜನ ಸನ್ಮಾನ ಮಾಡಿದ್ದಾರೆ. ಹೈಕಮಾಂಡ್‍ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿಎಲ್‍ಪಿ ನಾಯಕ ಸಿದ್ದರಾಮಯ್ಯರಿಗೆ ಭಾಷೆ ಕೊಟ್ಟಿದ್ದೆವು. ಜಿಲ್ಲೆಯ ಎಲ್ಲ ನಾಯಕರು ಸಾಮೂಹಿಕ ನಾಯಕತ್ವದಲ್ಲಿ ಸತೀಶ್ ಜಾರಕಿಹೊಳಿ ನಾಯಕತ್ವದಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲೋದಾಗಿ ಹೇಳಿದ್ವಿ, ಬೆಳಗಾವಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದೇವೆ. ಬೆಳಗಾವಿ (Belagavi) ಜಿಲ್ಲಾ ರಾಜಕಾರಣ ಇತಿಹಾಸದಲ್ಲಿ ಇಷ್ಟೊಂದು ಸೀಟ್ ಬಂದಿರಲಿಲ್ಲ, ಬಹಳ ಧೈರ್ಯದಿಂದ ಸಿಎಲ್‍ಪಿ ಸಭೆಯಲ್ಲಿ ಮುಖ ಎತ್ತಿ ಮಾತನಾಡುವ ಧೈರ್ಯ ಇಟ್ಟು ಹೋಗುತ್ತಿದ್ದೇವೆ ಎಂದರು. ಇದನ್ನೂ ಓದಿ: ಕ್ಯಾಬ್‌ ಬುಕ್‌ ಮಾಡಿದ್ರು; ಪಿಕಪ್‌ ಮಾಡಲು ಬಂದ ಚಾಲಕನನ್ನೇ ಎಳೆದು ಹಾಕಿ ಕ್ಯಾಬ್‌ ಕದ್ದೊಯ್ದರು!

ಖುಷಿಯಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹೋಗುತ್ತಿದ್ದೇನೆ. ಕಾಂಗ್ರೆಸ್ (Congress) ಪಕ್ಷದ ಒಗ್ಗಟ್ಟು, ಜಿಲ್ಲೆಯ ನೇತೃತ್ವ ಗೆಲುವಿಗೆ ಪ್ರಮುಖ ಕಾರಣವಾಗಿದೆ. ನಿನ್ನೆ ಸತೀಶ್ ಜಾರಕಿಹೊಳಿ (Satish Jarkiholi) ಹೋಗಿದ್ದಾರೆ. ಇಂದು ಐದಾರು ಶಾಸಕರು ಹೋಗುತ್ತಿದ್ದೇವೆ ಎಂದರು. ಇದನ್ನೂ ಓದಿ: ಮೋದಿ ಅಲೆ ಮುಗಿದಿದೆ, ಬಜರಂಗ ಬಲಿ ಕಾಂಗ್ರೆಸ್ ಜೊತೆಗಿದೆ: ಸಂಜಯ್ ರಾವತ್

Share This Article