‘ನನಗೆ ಸಚಿನ್ ಬೇಕು, ಮದ್ವೆ ಮಾಡಿಕೊಡಿ’ ಅಂದ್ರಂತೆ ಕಾರುಣ್ಯ ರಾಮ್!

Public TV
4 Min Read

ಹರೀಶ್ ಸೀನಪ್ಪ
ಬೆಂಗಳೂರು: ಲಕ್ಷ್ಮಿ ಬಾರಮ್ಮ ಧಾರಾವಾಹಿಯ ‘ಕುಮುದಾ’ ಬಾಳಲ್ಲಿ ನಟಿ ಕಾರುಣ್ಯ ಚೆಲ್ಲಾಟವಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಚಿನ್ ಜೊತೆ 11 ದಿನದ ಹಿಂದೆ ಆಗಿದ್ದ ನಿಶ್ಚಿತಾರ್ಥ ಮುರಿಯೋ ಪ್ರಯತ್ನ ನಡೆಯುತ್ತಿದೆ ಅಂತ ಕುಮುದಾ ಖ್ಯಾತಿಯ ಅನಿಕಾ ಆರೋಪಿಸಿದ್ದಾರೆ. ಈ ಹಿಂದೆ ಕಾರುಣ್ಯ ರಾಮ್ ಸಚಿನ್ ಎಂಬವರನ್ನು ಪ್ರೀತಿಸಿದ್ದರಂತೆ. ಕಾರುಣ್ಯರಾಮ್ ಜೊತೆ ಸಂಬಂಧ ಕಟ್ ಆಗಿ ಮೂರು ವರ್ಷ ಕಳೆದ ಮೇಲೆ ಸಚಿನ್ ಹಾಗೂ ಅನಿಕಾಗೆ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥ ಆದ್ಮೇಲೆ ನನ್ನ ಮದುವೆ ಮುರಿಯೋಕೆ ಕಾರುಣ್ಯ ರಾಮ್ ಪ್ರಯತ್ನ ಪಡ್ತಿದ್ದಾರೆ ಎಂದು ಕಿರುತೆರೆ ನಟಿ ಅನಿಕಾ ತನಗಾದ ನೋವನ್ನ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ. ಪಬ್ಲಿಕ್ ಟಿವಿ ಪ್ರತಿನಿಧಿ ಹರೀಶ್ ಸೀನಪ್ಪ ಜೊತೆ ಅನಿಕಾ ಸಿಂಧ್ಯಾ ಮನಸ್ಸು ಬಿಚ್ಚಿ ಮಾತನಾಡಿದಾಗ ಏನೆಲ್ಲಾ ಹೇಳಿದ್ರು ಅನ್ನೋದು ಇಲ್ಲಿದೆ ನೋಡಿ.

ನಿಮಗೆ ಯಾರಿಂದ ತೊಂದರೆಯಾಗುತ್ತಿದೆ?
ನಾನು ಮಾನಸಿಕವಾಗಿ ತುಂಬಾ ಡಿಸ್ಟರ್ಬ್ ಆಗಿದ್ದೀನಿ. ಯಾರದೇ ಲೈಫ್ ನಲ್ಲಿ ಮದುವೆ ಅಥವಾ ಎಂಗೇಜ್ಮೆಂಟ್ ಆದ್ಮೇಲೆ ಯಾರಾದ್ರೂ ಬಂದರೆ ಮನೆಯವರು ಕೂಡಾ ಡಿಸ್ಟರ್ಬ್ ಆಗ್ತಾರೆ. ಕಾರುಣ್ಯರಾಮ್ ಹಾಗೂ ನನಗೆ ಎಂಗೇಜ್ಮೆಂಟ್ ಆದ ಸಚಿನ್ ಮಧ್ಯೆ ಮುಂಚೆ ಲವ್ ಇತ್ತಂತೆ. ಅದು ನನಗೆ ಬೇಡ. ಎಂಗೇಜ್ಮೆಂಟ್ ಆದಮೇಲೆ ಅವಳು ಸುಮ್ಮನೆ ಇದ್ದು ಬಿಡಬೇಕಿತ್ತು. ಎಂಗೇಜ್ಮೆಂಟ್ ನಡೆಯುವ 10 ದಿನ ಮೊದಲು ಹಾಗೂ ಎಂಗೇಜ್ಮೆಂಟ್ ಆದಮೇಲೂ ಟಾರ್ಚರ್ ಮಾಡಿದ್ದಾರೆ. ಈ ವಿಷಯ ನನಗೆ ಮೊನ್ನೆ ಮೊನ್ನೆ ಸಚಿನ್ ನಿಂದ ವಿಷಯ ಗೊತ್ತಾಯ್ತು. ಮೊನ್ನೆ ಕೂಡಾ ಸಚಿನ್ ತಾಯಿಗೆ ಫೋನ್ ಮಾಡಿ ಕರೆಸಿಕೊಂಡು ಅವರು ನನಗೆ ಸಚಿನ್ ಬೇಕು. ಮದುವೆ ಮಾಡಿಕೊಡಿ ಎಂದು ಹೇಳಿದ್ದಾಳೆ. ಇದರಿಂದ ನನ್ ಲೈಫ್ ಏನಾಗ್ಬೇಕು? ನನ್ ಲೈಫ್ ಹಾಳಾಗಲ್ವಾ..? ನಾನೇ ಸರಿ ಇಲ್ಲ ಅಂತೆಲ್ಲಾ ಹೇಳಲ್ವಾ..? ಈ ಹಿನ್ನೆಲೆಯಲ್ಲಿ ನಾನೇ ಮೊದಲು ಹೇಳ್ತಾ ಇದೀನಿ. ದಯವಿಟ್ಟು ಇದು ನನಗೆ ಬೇಡ ಎಂದು ನೀನು ಸುಮ್ಮನಾದರೆ ಸರಿ. ನನಗೆ ಯಾವುದೇ ಹೆದರಿಕೆ ಇಲ್ಲ. ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಕೂಡಾ ಇಲ್ಲ. ಸುಮ್ಮನಾಗಿಬಿಟ್ರೆ ಈ ಕೇಸ್ ಇಲ್ಲಿಗೇ ಮುಗಿಯುತ್ತೆ. ನೀನೇನಾದ್ರೂ ಫ್ಯೂಚರಲ್ಲಿ ಅವನು ನಂಗೆ ಬೇಕು ಅಂದ್ರೆ ನಾನೇನ್ಮಾಡಬೇಕು ನನಗೆ ಗೊತ್ತು.

ಸಚಿನ್ ನಿಮಗೆ ಯಾವಾಗ, ಹೇಗೆ ಪರಿಚಯವಾದ್ರು..?
ಸಚಿನ್ ತುಂಬಾ ಒಳ್ಳೆಯ ಹುಡುಗ. ನನ್ ತಂದೆಯ ಬ್ಯುಸಿನೆಸ್ ಪಾರ್ಟನರ್ ಮೈದುನ ಸಚಿನ್. ಮನೆಯಲ್ಲಿ ನನಗೆ ಹುಡುಗನನ್ನು ಹುಡುಕ್ತಾ ಇದ್ರು. ಪ್ರಪೋಸಲ್ ಬಂತು. ಒಳ್ಳೆಯ ಹುಡುಗ ಎಂದು ಎಲ್ಲಾ ಒಪ್ಪಿಗೆಯಾಯಿತು. ಆವಾಗ ಯಾವುದೇ ತೊಂದರೆಯಿರಲಿಲ್ಲ. ಅವರು ನನ್ ಜೊತೆ ಓಡಾಡ್ತಿದ್ರು. ಎಂಗೇಜ್ಮೆಂಟ್ ಆದ್ಮೇಲೆ ಒಂದು ಕಾಲ್ ಇಲ್ಲ, ಮೆಸೇಜ್ ಇಲ್ಲ. ಸೋ ನನಗೆ ಅನುಮಾನ ಬಂತು. ಜಗಳ ಆಗಿ ಕೇಳಿದಾಗ ಮನೆಯಲ್ಲಿ ರಂಪ ರಾಮಾಯಣ ಆಗೋಗಿದೆ. ಅವಳೂ ಒಬ್ಳು ಹುಡುಗಿ. ಅವಳ ಲೈಫ್‍ಗೆ ಡ್ಯಾಮೇಜ್ ಮಾಡೋಕೆ ನನಗೆ ಇಷ್ಟವಿಲ್ಲ. ಮರ್ಯಾದೆಯಾಗಿ ಅವಳು ಹಿಂದಕ್ಕೆ ಸರಿದು ಬಿಟ್ರೆ ಸರಿ. ನನ್ ಲೈಫ್ ಬಗ್ಗೆ ನನಗೂ ಹೆದರಿಕೆ ಇರುತ್ತದೆ.

ಸಚಿನ್ ಜೊತೆ ಅಥವಾ ಕಾರುಣ್ಯ ಜೊತೆ ಮಾತನಾಡಿದ್ರಾ..? ಸಚಿನ್ ಕೇಳಿದಾಗ ಏನ್ ಹೇಳಿದ್ರು..?
ಸಚಿನ್ ಗೆ ಕೇಳಿದಾಗ ನನಗೆ ಈಗ ಅವಳು ಬೇಡ, ನೀನು ಬೇಕು. ಎಂಗೇಜ್ಮೆಂಟ್ ಆಗಿದ್ದೀನಿ. ನಿನ್ನನ್ನೇ ಮದುವೆಯಾಗ್ತೀನಿ ಅಂತಾ ಹೇಳಿದ್ದಾರೆ. ಕಾರುಣ್ಯ ಜೊತೆ ನಾನು ಇದುವರೆಗೂ ಡೈರೆಕ್ಟ್ ಆಗಿ ಮಾತನಾಡಿಲ್ಲ. ನನಗೂ ಅವಳಿಗೂ ಯಾವುದೇ ಪರಿಚಯವಿಲ್ಲ. ಇಂಡೈರೆಕ್ಟಾಗಿ ನನ್ ಹುಡ್ಗನಿಗೆ ಟಾರ್ಚರ್ ಮಾಡೋದೂ ಒಂದೇ, ನನ್ ಲೈಫ್ ಡ್ಯಾಮೇಜ್ ಮಾಡೋದೂ ಒಂದೇ.

ಈ ವಿಷಯ ನಿಮಗೆ ಗೊತ್ತಾಗಿದ್ದು ಹೇಗೆ?
ಈ ವಿಚಾರದಲ್ಲಿ ಮನೆಯಲ್ಲಿ ಏನ್ ಹೇಳ್ತಿದಾರೆ. ಈ ಪರಿಸ್ಥಿತಿಯನ್ನು ಹೇಗೆ ಹ್ಯಾಂಡಲ್ ಮಾಡುತ್ತಿದ್ದೀರಿ?
ಸಚಿನ್ ನನ್ ಜೊತೆ ಮಾತನಾಡದೇ ಇದ್ದಾಗ ಅನುಮಾನ ಬಂದು ಕೇಳಿದೆ. ಆಗ ಈ ವಿಷಯಗಳೆಲ್ಲಾ ಹೊರಗೆ ಬಂತು. ನನಗೆ ತುಂಬಾ ಹರ್ಟ್ ಆಗಿದೆ. ತಕ್ಷಣ ಫೇಸ್‍ಬುಕ್ ನಿಂದ ಎಲ್ಲಾ ಡಿಲೀಟ್ ಮಾಡಿದೀನಿ. ರಿಂಗ್ ಕೂಡಾ ತೆಗೆದುಬಿಟ್ಟೆ. ಅಷ್ಟೊಂದು ಹರ್ಟ್ ಆಗಿದ್ದೀನಿ. ಮನೆಯವರಿಗೂ ಹರ್ಟ್ ಆಗಿದೆ. ಈವಾಗ ಎಲ್ಲಾ ಸರಿ ಹೋಗ್ತಾ ಇದೆ. ಹುಡುಗ ನನ್ ಕಡೆ ಇದಾನೆ. ಅವಳು ಮತ್ತೆ ಅವನ ಲೈಫ್ ಗೆ ಬರಬಾರದು. ಅವನ ಅಮ್ಮನಿಗಾಗಲೀ, ಅವನಿಗಾಗಲೀ ಯಾವುದೇ ಟಾರ್ಚರ್ ಮಾಡಬಾರದು. ಮದುವೆಯಾದ ಮೇಲೂ ನನಗೂ ನಿನಗೂ ಸಂಬಂಧವಿಲ್ಲ ಎಂದು ಅವಳು ಸುಮ್ಮನಿದ್ದುಬಿಡಬೇಕು.

ಕಾರುಣ್ಯರಾಮ್ ಸಚಿನ್, ಅಮ್ಮನ ಜೊತೆ ಮಾತನಾಡಿದ್ದರ ಬಗ್ಗೆ ಏನ್ ಹೇಳ್ತೀರಾ..?
ಯಾರೇ ಆಗಲಿ ನನ್ ಲವ್ ಮಾಡಿರೋ ಹುಡುಗ ಬೇರೆಯವರನ್ನು ಎಂಗೇಜ್ಮೆಂಟ್ ಆಗ್ತಿದ್ದಾರೆ ಎಂದರೆ ಅವರು ಚೆನ್ನಾಗಿರ್ಲಿ ಎಂದು ಸುಮ್ಮನಾಗ್ತಾರೆ. ಎಂಗೇಜ್ಮೆಂಟ್ ಆದ್ಮೇಲೆ ಅವರ ಅಮ್ಮನಿಗೆ ಬಂದು ಬಿಟ್ಟು ನನಗೆ ಮದುವೆ ಮಾಡಿಕೊಡಿ ಎಂದರೆ ಎಲ್ಲರಿಗೂ ಏನನ್ನಿಸುತ್ತೆ..? ನನಗೆ ಯಾವ ಹೆದರಿಕೆಯೂ ಇಲ್ಲ. ನಾನು ಎಂಥ ಹುಡುಗಿ ಅಂತಾ ಇಂಡಸ್ಟ್ರಿಗೆ ಗೊತ್ತು. ಇದನ್ನ ಇಲ್ಲಿಗೆ ನಿಲ್ಲಿಸಿದರೆ ಸರಿ.

 

https://youtu.be/A8d3MaQjKpE

https://youtu.be/CGvMv9nG1j0

 

https://youtu.be/01_CZO0LRxc

https://youtu.be/k-Q4HK-s5Ko

 

Share This Article
Leave a Comment

Leave a Reply

Your email address will not be published. Required fields are marked *