1.25 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್‌ಐ

Public TV
1 Min Read

ಬೆಂಗಳೂರು: ಲಂಚದ ರೂಪದಲ್ಲಿ 1.25 ಲಕ್ಷ ರೂ. ಹಣವನ್ನು ಪಡೆಯುತ್ತಿದ್ದ ವೇಳೆ ಮಹಿಳಾ ಪಿಎಸ್‌ಐ‌ (Lady PSI) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಂಗಳೂರಿನ (Bengaluru) ಗೋವಿಂದಪುರ  ಪೊಲೀಸ್ ಠಾಣೆಯಲ್ಲಿ (Govindapura Police Station) ನಡೆದಿದೆ.

ಸಾವಿತ್ರಿ ಬಾಯಿ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ. ಕೇಸ್ ಒಂದರಲ್ಲಿ ಬಿ ರಿಪೋರ್ಟ್ ಹಾಕಲು ಸಾವಿತ್ರಿ ಬಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಮೊಹಮ್ಮದ್ ಯೂನಸ್ ಎಂಬವರು ನೀಡಿದ ದೂರಿನ ಮೇರೆಗೆ ಸಾವಿತ್ರಿ ಬಾಯಿಯನ್ನು ಟ್ರ್ಯಾಪ್ ಮಾಡಲಾಗಿದೆ. ಇದನ್ನೂ ಓದಿ: D-CET ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: KEA

ಗೊವಿಂದಪುರ ಪೊಲೀಸ್ ಠಾಣೆಯ ಕ್ರೈಂ ನಂಬರ್ 144/25ರ ಕೇಸ್ ಸಂಬಂಧಿಸಿದಂತೆ ಬಿ ರಿಪೋರ್ಟ್ ಸಲ್ಲಿಸಲು ಸಾವಿತ್ರಿ ಬಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ 1.25 ಲಕ್ಷ ರೂ. ಹಣ ಪಡೆಯುವಾಗ ಲೋಕಾ ಬಲೆಗೆ ಬಿದ್ದಿದ್ದಾರೆ. ಸದ್ಯ ಲೋಕಾಯುಕ್ತ ಪೊಲೀಸರು ಸಾವಿತ್ರಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: GST ನೋಟಿಸ್; ರಾಜ್ಯ ದಿವಾಳಿಯಾದಾಗ, ಬೇಕರಿ ಎಟಿಎಂ ಆಗುತ್ತದೆ- ನಿಖಿಲ್ ಕುಮಾರಸ್ವಾಮಿ

Share This Article