ಮಧುಮೇಹ ನಿಯಂತ್ರಣಕ್ಕೆ ಬೆಂಡೆಕಾಯಿ ಸೂಪ್ – ಮಾಡೋದು ಹೇಗೆ?

Public TV
1 Min Read

ಬೆಂಡೆಕಾಯಿಯಲ್ಲಿ ಮಧುಮೇಹ ನಿಯಂತ್ರಣದ ಅಂಶಗಳಿದ್ದು, ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಈ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕೂಡ ನಿಯಂತ್ರಣದಲ್ಲಿರುತ್ತದೆ. ಬೆಂಡೆಕಾಯಿಯನ್ನು ಸುಲಭವಾಗಿ ಸೂಪ್‌ ಮಾಡಿ ಸೇವಿಸಬಹುದು. ಸೂಪ್‌ ಮಾಡುವ ವಿಧಾನ ಇಲ್ಲಿ ತಿಳಿಸಲಾಗಿದೆ.

ಬೆಂಡೆಕಾಯಿ ಸೂಪ್‌ಗೆ ಬೇಕಾಗಿರುವ ಸಾಮಗ್ರಿಗಳು
1 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ
2 ಕಪ್ ತೊಳೆದು ಹೆಚ್ಚಿದ ಬೆಂಡೆಕಾಯಿ
3 ಕಪ್ ಹೆಚ್ಚಿದ ಟೊಮೆಟೊ
1 ಕಪ್ ಹೆಚ್ಚಿದ ದಪ್ಪ ಮೆಣಸಿನಕಾಯಿ
1 ಕಪ್ ಚೆನ್ನಾಗಿ ಬೇಯಿಸಿದ ಮುಸುಕಿನ ಜೋಳ
1 ಟೀ ಚಮಚದಷ್ಟು ಕಪ್ಪು ಮೆಣಸು
1 ಟೀ ಚಮಚದಷ್ಟು ಗ್ರೌಂಡ್ ಬ್ಲಾಕ್ ಪೆಪ್ಪರ್
4 ಕಪ್ ನೀರು
ಉಪ್ಪು: ರುಚಿಗೆ ತಕ್ಕಷ್ಟು

ಬೆಂಡೆಕಾಯಿ ಸೂಪ್ ತಯಾರು ಮಾಡುವ ವಿಧಾನ
ಮೊದಲಿಗೆ ಗ್ಯಾಸ್ ಸ್ಟವ್ ಮೇಲೆ ಒಂದು ಪ್ಯಾನ್ ಬಿಸಿಗಿಟ್ಟು ಸ್ವಲ್ಪ ಎಣ್ಣೆ ಹಾಕಬೇಕು. ಈಗ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಹೆಚ್ಚಿದ ಬೆಂಡೆಕಾಯಿ, ಟೊಮೆಟೊ, ದಪ್ಪಮೆಣಸಿನಕಾಯಿ, ಮುಸುಕಿನ ಜೋಳ, ಉಪ್ಪು ಮತ್ತು ಮೆಣಸಿನ ಪುಡಿಯನ್ನು ಹಾಕಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ. ಅದಕ್ಕೆ ಎಷ್ಟು ಬೇಕೋ ಅಷ್ಟು ನೀರನ್ನು ಹಾಕಿ ಬೆಂಡೆಕಾಯಿ ಬೇಯುವವರೆಗೆ ಚೆನ್ನಾಗಿ ಕುದಿಸಿ. ಈಗ ರುಚಿಕರವಾದ ಬೆಂಡೆಕಾಯಿ ಸೂಪ್ ಸವಿಯಲು ಸಿದ್ಧ.

Share This Article