ʻಕೊಡಗು ಬಂದ್‌ʼಗೆ ನೀರಸ ಪ್ರತಿಕ್ರಿಯೆ – ಎಂದಿನಂತೆ ಜನ ಸಂಚಾರ

Public TV
1 Min Read

ಮಡಿಕೇರಿ: ವೀರ ಸೇನಾನಿಗಳಿಗೆ ಅಪಮಾನ ಹೇಳಿಕೆಯನ್ನು ಖಂಡಿಸಿ ಸರ್ವಜನಾಂಗಗಳ ಒಕ್ಕೂಟ ಕರೆ ನೀಡಿದ್ದ ʻಕೊಡಗು ಬಂದ್ʼಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಳೆದ ಕೆಲ ದಿನಗಳ‌ ಹಿಂದೆ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ (Field Marshal Cariappa), ಜನರಲ್ ತಿಮ್ಮಯ್ಯ ಅವರ ಬಗ್ಗೆ ವಕೀಲರೊಬ್ಬರು ಆಕ್ಷೇಪರ್ಹ ಸಂದೇಶವನ್ನು ವಾಟ್ಸಪ್ ಗ್ರೂಪ್‌ನಲ್ಲಿ ಹರಿ ಬಿಟ್ಟಿದ್ದು, ಕೊಡಗಿನ ಸೇನಾನಿಗಳಿಗೆ ಮಾಡಿದ ಅಪಮಾನ ಎಂದು ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬಳಿಕ ವಕೀಲರನ್ನ ಬಂಧಿಸಿ ಕೆಲವೇ ಸಮಯದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಿಂದ ಕೊಡಗಿನ ಮುಂಖಡರು ಪ್ರತಿಭಟನೆಗಿಳಿದಿದ್ದರು. ಇಂದು ಸಹ ವಕೀಲರನ್ನ ಗಡಿಪಾರು ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸರ್ವಜನಾಂಗಗಳ ಒಕ್ಕೂಟ ಅರ್ಧದಿನದ ʻಕೊಡಗು ಬಂದ್ʼಗೆ ಕರೆ ನೀಡಿತ್ತು. ಆರಂಭದಲ್ಲಿ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದವು. ಆದ್ರೆ ಇಂದು ಕೆಲವರು ಬಂದ್ ನೈತಿಕ ಬೆಂಬಲ‌ ಮಾತ್ರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತುಮಕೂರು | ಕಾಂಗ್ರೆಸ್‌ನ ಮಾಜಿ ಶಾಸಕ ಆರ್. ನಾರಾಯಣ ನಿಧನ

ಸರ್ವಜನಾಂಗಗಳ ಒಕ್ಕೂಟ ನೀಡಿದ ಬಂದ್‌ಗೆ ಮಡಿಕೇರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾನೆಯಿಂದಲೇ ಅಂಗಡಿ ಮುಂಗಟ್ಟುಗಳು ಓಪನ್ ಆಗಿದ್ದು ಜನತೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದಾರೆ. ಇನ್ನೂ ಸರ್ಕಾರಿ ಬಸ್ ಕಚೇರಿಗಳು ಶಾಲೆಗಳು ಎಂದಿನಂತೆ ಆರಂಭವಾಗುತ್ತಿದೆ. ಆದ್ರೆ ಖಾಸಗಿ ವಲಯದ ಶಾಲೆಗಳು ಬಸ್‌ಗಳು ಗೊಂದಲದಲ್ಲಿಯೆ ರಸ್ತೆಗಿಳಿಯುತ್ತಿವೆ‌.

ಸದ್ಯದ ಮಟ್ಟಿಗೆ ಜಿಲ್ಲೆಗೆ ಬಂದ್ ಬೀಸಿ ತಟ್ಟಿಲ್ಲ ಯಥಾ ಸ್ಥಿತಿ ಕಾಯ್ದುಕೊಂಡಿದ್ದು ಹತ್ತು ಗಂಟೆಯ ನಂತರ ಯಾವ ರೀತಿ ಬಂದ್ ವಾತವರಣ ಇರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಸದ್ಯ ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದು ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದೆ. ಇದನ್ನೂ ಓದಿ: ಜೈಲಿಂದ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ಹತ್ಯೆ – ಮೃತದೇಹ ಕತ್ತರಿಸಿ ನದಿಗೆಸೆದ ಹಂತಕ 

Share This Article