ಕಾರ್ಮಿಕ ಇಲಾಖೆಯ ಎಡವಟ್ಟು; ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಕಾರ್ಮಿಕರು

Public TV
1 Min Read

ಹಾವೇರಿ: ಕಾರ್ಮಿಕ ಇಲಾಖೆಯ (Labour Department) ಕಾರ್ಡ್ ಹೊಂದಿದ್ದ ಕಾರ್ಮಿಕರ ಮಕ್ಕಳಿಗೆ ಕಿಟ್ ನೀಡುವುದಾಗಿ ಕರೆಸಿ ವಾಪಾಸ್ ಕಳಿಸಲು ಮುಂದಾದ ಅಧಿಕಾರಿಗಳನ್ನು ಜನ ತರಾಟೆಗೆ ತೆಗೆದುಕೊಂಡ ಘಟನೆ ಹಾವೇರಿಯ ಎಪಿಎಂಸಿ (APMC) ಆವರಣದಲ್ಲಿ ನಡೆದಿದೆ.

ಹಾವೇರಿ (Haveri), ಸವಣೂರು ಮತ್ತು ಶಿಗ್ಗಾಂವಿ ತಾಲ್ಲೂಕಿನ ಫಲಾನುಭವಿಗಳನ್ನು ಹಾವೇರಿ ಎಪಿಎಂಸಿ ಆವರಣಕ್ಕೆ ಕಿಟ್ ಕೊಡುವುದಾಗಿ ಕರೆಸಲಾಗಿತ್ತು. ನೂರಾರು ಜನ ಬೆಳಗ್ಗಿನಿಂದಲೇ ಕ್ಯೂನಲ್ಲಿ ನಿಂತಿದ್ದರು. ಅದರೆ ಕೇವಲ 150 ಕಿಟ್‍ಗಳಿವೆ. ನಾಳೆ ಬನ್ನಿ ಎಂದು ಅಧಿಕಾರಿಗಳು ವಾಪಾಸ್ ಕಳಿಸಲು ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಫಲಾನುಭವಿಗಳು ಇಲಾಖೆಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಐದು ತಿಂಗಳ ಬಳಿಕ ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣದಲ್ಲಿ ಏರಿಕೆ

ನಾವು ಯಾರೂ ಕಿಟ್ ಕೇಳಿರಲಿಲ್ಲ. ಕಿಟ್ ಕೊಡುವುದಾಗಿ ಕರೆಸಿ, ಈಗ ಕಿಟ್‍ಗಳನ್ನ ಬೇರೆ ಕಡೆ ಸಾಗಿಸಿ ಮಾರಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕಾರ್ಮಿಕ ಇಲಾಖೆಯ ಉಪನಿರ್ದೇಶಕ ಮಹೇಶ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ 2.5 ಲಕ್ಷಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಅದರಲ್ಲಿ 60 ಸಾವಿರಕ್ಕೂ ಹೆಚ್ಚಿನ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರದಿಂದ ಪ್ರತಿಯೊಂದು ತಾಲೂಕಿಗೆ 250 ಕಿಟ್‍ಗಳು ಬಂದಿವೆ. ಈಗಾಗಲೇ ಎರಡು ತಾಲ್ಲೂಕಿನ ಫಲಾನುಭವಿಗಳಿಗೆ ಕಿಟ್ ವಿತರಣೆ ಮಾಡಲಾಗಿದೆ. ಬುಧವಾರ ಸಾವಿರಾರು ಫಲಾನುಭವಿಗಳು ಬಂದಿದ್ದಾರೆ. ಸರ್ಕಾರದ ಗಮನಕ್ಕೆ ತಂದು ಎಲ್ಲರಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಮುಗಿಸಿದ ಪತ್ನಿ- ತನಿಖೆಯಲ್ಲಿ ಸತ್ಯ ಬಯಲು

ಆದರೂ ಎಪಿಎಂಸಿ ಆವರಣದಲ್ಲಿ ಕಾದು ಕುಳಿತಿದ್ದ ಜನ, ನೀತಿ ಸಂಹಿತೆ ಘೋಷಣೆ ಆಗುತ್ತಿದ್ದಂತೆ ಮನೆ ಕಡೆ ತೆರಳಿದ್ದಾರೆ.

Share This Article