ಅಭಿಮಾನಿಗಳ ಪ್ರೀತಿಗೆ ಕಣ್ಣೀರಿಟ್ಟ ಸಮಂತಾ

Public TV
1 Min Read

ಸೌತ್ ನಟಿ ಸಮಂತಾ (Samantha) ಸದ್ಯ ಬಾಲಿವುಡ್ (Bollywood) ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ, ಜಾಹೀರಾತು ಶೂಟಿಂಗ್ ಅಂತ ನಟಿ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಸಮಂತಾ ಫ್ಯಾನ್ಸ್ ಮೀಟ್ ಕಾರ್ಯಕ್ರಮ ಮಾಡಿದ್ದಾರೆ. ಅಭಿಮಾನಿಗಳ ಅಭಿಮಾನ ಕಂಡು ನಟಿ ಕಣ್ಣೀರಿಟ್ಟಿದ್ದಾರೆ.

ತಮ್ಮ ಕೆಲಸದ ಒತ್ತಡದ ನಡುವೆ ಬಿಡುವು ಮಾಡಿಕೊಂಡು ಅಭಿಮಾನಿಗಳ ಜೊತೆ ನಟಿ ಸಮಯ ಕಳೆದಿದ್ದಾರೆ. ಪ್ರತಿಯೊಬ್ಬರಿಗೂ ಫೋಟೋ ನೀಡಿ, ಅವರು ತಂದ ಉಡುಗೊರೆಯನ್ನು ನಟಿ ಸ್ವೀಕರಿಸಿದ್ದಾರೆ. ಇದನ್ನೂ ಓದಿ:ಹೋಳಿ ಹಬ್ಬಕ್ಕೆ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಹಾಡು

ಮಹಿಳಾ ಅಭಿಮಾನಿಯೊಬ್ಬರು ಸಮಂತಾರನ್ನು ತಬ್ಬಿಕೊಂಡು ಅಳುತ್ತಾರೆ. ಆ ಅಭಿಮಾನಿಯನ್ನು ತಬ್ಬಿ ಸಮಾಧಾನಿಸಿದ್ದಾರೆ. ಬಳಿಕ ಫ್ಯಾನ್ಸ್ ಪ್ರೀತಿಯಿಂದ ತಂದಿರುವ ಕೇಕ್ ಅನ್ನು ಸಮಂತಾ ಕತ್ತರಿಸಿ ಸಂಭ್ರಮಸಿದ್ದಾರೆ. ಬಹುದಿನಗಳ ನಂತರ ಅಭಿಮಾನಿಗಳು ಪ್ರೀತಿ, ಹಾರೈಕೆ ನೋಡಿ ನಟಿ ಭಾವುಕರಾಗಿದ್ದಾರೆ. ಸದ್ಯ ಫ್ಯಾನ್ಸ್ ಮೀಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

ಇನ್ನೂ ಪ್ರಸ್ತುತ ಪ್ರಾಜೆಕ್ಟ್ ವಿಚಾರಕ್ಕೆ ಬರೋದಾದ್ರೆ, ಪ್ರಿಯಾಂಕಾ ಚೋಪ್ರಾ ನಟಿಸಿದ `ಸಿಟಾಡೆಲ್’ ಇಂಡಿಯನ್ ವರ್ಷನ್‌ನಲ್ಲಿ ‘ಹನಿ ಬನಿ’ ಎಂಬ ಟೈಟಲ್‌ನೊಂದಿಗೆ ರಿಲೀಸ್ ಆಗುತ್ತಿದೆ. ವರುಣ್ ಧವನ್‌ಗೆ ನಾಯಕಿಯಾಗಿ ಸಮಂತಾ ನಟಿಸಿದ್ದಾರೆ. ಈ ವೆಬ್ ಸಿರೀಸ್ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

ಅಂದಹಾಗೆ, ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.

ಆದರೆ ‘ಯಶೋದ’ ಮತ್ತು ‘ಖುಷಿ’ (Kushi) ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 8 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ.

Share This Article