ಸಮಂತಾ ಮನೆಯಲ್ಲಿ ಮದುವೆ ಸಡಗರ- ಹೂಗುಚ್ಛ ಹಿಡಿದು ನಿಂತ ನಟಿ

Public TV
1 Min Read

ಸೌತ್ ನಟಿ ಸಮಂತಾ (Samantha) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಸಹೋದರ ಮದುವೆಯಲ್ಲಿ (Wedding) ನಟಿ ಮಿರ ಮಿರ ಅಂತ ಮಿಂಚಿದ್ದಾರೆ. ಮದುವೆ ಸಡಗರದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಲಾಂಚ್ ಆಯ್ತು ಟ್ರೈಲರ್

ಸಮಂತಾ ಅಣ್ಣ ಡೇವಿಡ್ ಪ್ರಭು (David Prabhu) ಫಾರಿನ್‌ನಲ್ಲಿ ವಿದೇಶಿ ಮಹಿಳೆಯೊಟ್ಟಿಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಕುಟುಂಬದ ಜೊತೆ ಸಮಯ ಕಳೆದು ಎಂಜಾಯ್ ಮಾಡಿದ್ದಾರೆ. ನೇರಳೆ ಬಣ್ಣದ ಗೌನ್ ಧರಿಸಿ ನಟಿ ಕಂಗೊಳಿಸಿದ್ದಾರೆ. ಹೂಗುಚ್ಛ ಹಿಡಿದು ನಟಿ ಮಿಂಚಿದ್ದಾರೆ.

 

View this post on Instagram

 

A post shared by Samantha (@samantharuthprabhuoffl)

ನಟಿಗೆ ಇಬ್ಬರೂ ಸಹೋದರರು ಇದ್ದಾರೆ. ಅದರಲ್ಲಿ ಅಣ್ಣ ಡೇವಿಡ್ ಅಮೆರಿಕದಲ್ಲಿ ನೆಲೆಸಿದ್ದು, ನಗರದ ಗ್ರೇಟ್ ಲೇಕ್ ಬಳಿ ನಿಖೊಲೆ ಅವರನ್ನು ವಿವಾಹವಾಗಿದ್ದಾರೆ. ಇದನ್ನೂ ಓದಿ:ದರ್ಶನ್ ‍ಪ್ರಕರಣ ವೈಯಕ್ತಿಕ: ಡಾ.ರಾಜ್ ನೆನಪಿಸಿಕೊಂಡ ಗುರುಕಿರಣ್

ಅಂದಹಾಗೆ, ಆದಿತ್ಯಾ ರಾಯ್ ಕಪೂರ್ ಜೊತೆ ಸಮಂತಾ ಹೊಸ ಬಾಲಿವುಡ್ ಪ್ರಾಜೆಕ್ಟ್ ಮಾಡಲು ಮುಂದಾಗಿದ್ದಾರೆ. ಈ ಚಿತ್ರವನ್ನು ರಾಜ್ ಮತ್ತು ಡಿಕೆ ನಿರ್ಮಾಣ ಮಾಡಿದ್ದಾರೆ.

Share This Article