ಕುರುಕ್ಷೇತ್ರ ನಿರ್ಮಾಪಕ ಮುನಿರತ್ನರಿಂದ ದರ್ಶನ್ ಭೇಟಿ

Public TV
1 Min Read

ಮೈಸೂರು: ಅಪಘಾತದಿಂದ ಗಾಯಗೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಅವರನ್ನು ಕುರುಕ್ಷೇತ್ರ ಚಿತ್ರದ ನಿರ್ಮಾಪಕ ಮುನಿರತ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ದರ್ಶನ್ ಆರಾಮಾಗಿ ಇದ್ದಾರೆ. ಕೈ ಮುರಿದಿರೋದು ಬಿಟ್ಟರೆ ಬೇರೆ ಸಮಸ್ಯೆ ಆಗಿಲ್ಲ. ಶೀಘ್ರದಲ್ಲೇ ಅವರು ಗುಣಮುಖರಾಗುತ್ತಾರೆ ಎಂದು ಹೇಳಿದರು.

ಕುರುಕ್ಷೇತ್ರ ಸಿನಿಮಾದ ಬಗ್ಗೆ ಪ್ರತಿಕ್ರಿಯಿಸಿ, ಚಿತ್ರದಲ್ಲಿ ದರ್ಶನ್ ಅಭಿನಯದ ಎಲ್ಲ ದೃಶ್ಯಗಳ ಶೂಟಿಂಗ್ ಮುಗಿದಿದೆ. ಡಬ್ಬಿಂಗ್ ಸಹ ಮುಗಿಸಿಕೊಟ್ಟಿದ್ದಾರೆ. ಗ್ರಾಫಿಕ್ಸ್ ನಿಂದಾಗಿ ಚಿತ್ರ ಬಿಡುಗಡೆಗೆ ತಡವಾಗುತ್ತಿದೆ ಅಷ್ಟೇ ಎಂದು ತಿಳಿಸಿದರು. ಇದನ್ನು ಓದಿ:  ದರ್ಶನ್ ಸೇಫ್ ಆಗಿದ್ದು, ಯಾರಾದ್ರು ರೂಮರ್ಸ್ ಹಬ್ಬಿಸಿದ್ರೆ ನಂಬಬೇಡಿ: ಸೃಜನ್ ಲೋಕೇಶ್

ಇದೇ ವೇಳೆ ನಟ ದುನಿಯಾ ವಿಜಯ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಿತ್ರರಂಗದ ನಟರು ಸೂಕ್ಷ್ಮ ಮಾತುಗಳನ್ನಾಡಬೇಕು. ಈ ರೀತಿ ಬೀದಿಯಲ್ಲಿ ಜಗಳವಾಡಿಕೊಂಡು ನಿಲ್ಲಬಾರದು. ನಿಮ್ಮನ್ನು ಲಕ್ಷಾಂತರ ಜನ ಹಿಂಬಾಲಿಸುತ್ತಿರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ರಾಜ್‍ಕುಮಾರ್, ವಿಷ್ಣುವರ್ಧನ್ ಅಂತಹ ಮಾದರಿ ನಟರಿದ್ದರು. ಅವರನ್ನ ನೋಡಿ ಅದೆಷ್ಟೋ ಮಂದಿ ಬದಲಾವಣೆ ಆಗಿದ್ದರು. ಚಿತ್ರಗಳು, ಚಿತ್ರನಟರು ಜನರ ಮೇಲೆ ಪರಿಣಾಮ ಬೀರುತ್ತಾರೆ ಎಂದರು. ಇದನ್ನು ಓದಿ: ದುನಿಯಾ ವಿಜಿ ಹಲ್ಲೆ ಪ್ರಕರಣ: ಜಯಮ್ಮನ ಮಗನಿಗೆ ಜೈಲು..?

ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸಹ ನಿರ್ಮಾಪಕರ ಸಂಘದಿಂದ ಸಭೆ ಕರೆಯುತ್ತೇನೆ. ನಾನು ಮತ್ತು ಅಂಬರೀಶ್ ಇಬ್ಬರು ಜೊತೆಯಲ್ಲಿ ಕೂತು ವಿಜಯ್ ಮತ್ತು ಕಿಟ್ಟಿಯನ್ನು ಕರೆಸಿ ಮಾತಾಡುತ್ತೇವೆ. ಅವರಿಬ್ಬರ ಬಳಿ ಮಾತನಾಡಿದ ಮೇಲೆ ಅವರ ಸ್ನೇಹ ಚಿಗುರುವಂತೆ ಮಾಡುತ್ತೇನೆ. ದುನಿಯಾ ವಿಜಯ್ ಇದರಿಂದ ಹೊರಗೆ ಬಂದು ಒಳ್ಳೆಯ ಚಿತ್ರ ಮಾಡಲಿ. ಅವರ ಅಭಿಮಾನಿಗಳ ನಿರಾಸೆಯಾಗುವಂತೆ ನಡೆದುಕೊಳ್ಳದೆ ಇರಲಿ ಎಂದು ಪ್ರತಿಕ್ರಿಯಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *