ʻಆದಿಪುರುಷ್‌ʼ ಸಿನಿಮಾದ ಹಿರಿಯ ನಟಿ ಆಶಾ ಶರ್ಮಾ ನಿಧನ

Public TV
1 Min Read

ʻಆದಿಪುರುಷ್‌ʼ (Adipurush) ಸಿನಿಮಾದಲ್ಲಿ ಡಾರ್ಲಿಂಗ್‌ ಪ್ರಭಾಸ್‌ ಜೊತೆ ನಟಿಸಿದ್ದ ಹಿರಿಯ ನಟಿ ಆಶಾ ಶರ್ಮಾ (Asha Sharma) (88) ಭಾನುವಾರ ನಿಧನರಾಗಿದ್ದಾರೆ.

ಏಕ್ತಾ ಕಪೂರ್‌ ಅವರ ಹಿಟ್‌ ಶೋ ʻಕುಂಕುಮ್‌ ಭಾಗ್ಯʼ (Kumkum Bhagya) ಮೂಲಕ ಜನಪ್ರಿಯರಾಗಿದ್ದ ಹಿರಿಯ ನಟಿ 88‌ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಆಕೆಯ ಸಾವಿಗೆ ಇನ್ನೂ ಕಾರಣ ಬಹಿರಂಗಪಡಿಸಿಲ್ಲ.

ಆಶಾ ಶರ್ಮಾ ನಿಧನಕ್ಕೆ ಸಿನಿ ಮತ್ತು ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ ​​(CINTAA) ಎಕ್ಸ್‌ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದೆ. ಜೊತೆಗೆ ಹಿರಿಯ ನಟಿ ಹೇಮಾ ಮಾಲಿನಿ, ಪ್ರೇಮ್ ಚೋಪ್ರಾ, ಅರುಣಾ ಇರಾನಿ ಮತ್ತು ನಿರುಪಾ ರಾಯ್ ಸೇರಿದಂತೆ ಬಾಲಿವುಡ್‌ನ ಹಿರಿಯ ನಟ-ನಟಿಯರು ಕಂಬನಿ ಮಿಡಿದಿದ್ದಾರೆ.

ʻಕುಂಕುಮ್‌ ಭಾಗ್ಯʼ ಡ್ರಾಮಾ ಶೋ ಮೂಲಕ ಜನಪ್ರಿಯವಾಗಿದ್ದ ನಟಿ ಹೆಚ್ಚಾಗಿ ತಾಯಿ ಮತ್ತು ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೊನೆಯದಾಗಿ ಪ್ರಭಾಸ್‌ ಹಾಗೂ ಕೃತಿ ಸನೋನ್‌ ನಟನೆಯ ʻಆದಿಪುರುಷ್‌ʼ ಸಿನಿಮಾದಲ್ಲಿ ʻಶಬರಿʼ ಪಾತ್ರ ನಿರ್ವಹಿಸಿದ್ದರು. ಇವರ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

Share This Article