ಚಿಕ್ಕಮಗಳೂರು | ನರಹಂತಕ ಕಾಡಾನೆ ಸೆರೆಗೆ ಸಾಕಾನೆ ಬಳಸಿ ಕಾರ್ಯಾಚರಣೆ

1 Min Read

ಚಿಕ್ಕಮಗಳೂರು: ಕಾಫಿನಾಡಲ್ಲಿ (Chikkamagaluru) ಇತ್ತೀಚೆಗೆ ಕಾರ್ಮಿಕನನ್ನು ಬಲಿ ಕಾಡಾನೆಯನ್ನು (Elephant) ಸೆರೆಹಿಡಿಯಲು ಸಕ್ರೆಬೈಲ್‌ ಕ್ಯಾಂಪ್‌ನ ಸಾಕಾನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ನರಹಂತಕ ಕಾಡಾನೆ ಸೆರೆಗೆ ಸಕ್ರೆಬೈಲಿನಿಂದ ಐದು ಸಾಕಾನೆಗಳ ತಂಡ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮಕ್ಕೆ ಆಗಮಿಸಿದೆ. ಮೂರು ಕಾಡಾನೆಗಳಿದ್ದು ಅದರಲ್ಲಿ ಒಂದು ಕಾಡಾನೆಯನ್ನ ಸೆರೆ ಹಿಡಿಯಲು ಸರ್ಕಾರ ಆದೇಶಿಸಿದೆ. ಉಳಿದ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಚಲನ-ವಲನ ಗಮನಿಸುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ತೋಟದಲ್ಲಿ ಹೋಗ್ತಿದ್ದ ಕಾರ್ಮಿಕನನ್ನು ಕೊಂದು ಹಾಕಿದ ಕಾಡಾನೆ

ಫೆ.16 ರಂದು ಕಾಡಾನೆ ದಾಳಿಗೆ ಯಲ್ಲಪ್ಪ ಎಂಬ ಕಾರ್ಮಿಕರೊಬ್ಬರು ಬಲಿಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಕಾಡಾನೆ ಸೆರೆಹಿಡಿಯುವಂತೆ ಬಾಳೆಹೊನ್ನೂರು ಅರಣ್ಯ ಇಲಾಖೆ (Forest Department) ಕಚೇರಿ ಮುಂದೆ ಪ್ರತಿಭಟಿಸಿದ್ದರು. ಇದನ್ನೂ ಓದಿ: ಕನಕಪುರದ ಕಾಡಂಚಿನ ಗ್ರಾಮದಲ್ಲಿ 40 ಕಾಡಾನೆಗಳ ಹಿಂಡು ಪ್ರತ್ಯಕ್ಷ – ಗ್ರಾಮಸ್ಥರಲ್ಲಿ ಆತಂಕ

Share This Article