ಅವರು ಹೃದಯವಂತರು, ಹೃದಯವಂತಿಕೆ ಇರೋರು ಒಳ್ಳೆಯ ಹಾರೈಕೆ ಮಾಡಿದ್ರೆ ಸಂತೋಷ: ಎಚ್‍ಡಿಕೆಗೆ ಸುಮಲತಾ ಟಾಂಗ್

Public TV
1 Min Read

ಮಂಡ್ಯ: ಅವರು ಏನು ಬೇಕಾದರು ಮಾತನಾಡಲಿ. ಅವರು ಹೃದಯವಂತರು ಹೃದಯವಂತಿಕೆ ಇರೋರು. ಮನೆ ಮಾಡುವ ಸಂದರ್ಭಗಳಲ್ಲಿ ಒಳ್ಳೆಯ ಹಾರೈಕೆ ಮಾಡಿದ್ರೆ ಸಂತೋಷ ಪಡುತ್ತಿದ್ದೆ. ಬೇರೆ ಮಾತನಾಡಿದ್ದರೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಸಂಸದೆ ಸುಮಲತಾ ಅಂಬರೀಶ್ ಟಾಂಗ್ ನೀಡಿದ್ದಾರೆ.

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಮನೆ ವಿಚಾರ ಎಚ್‍ಡಿಕೆ ಹೇಳಿಕೆಗೆ ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಸುಮಲತಾ ಅಂಬರೀಶ್, ಅವರು ಮಾತನಾಡಿರುವ ಅರ್ಥ ಏನು ಅಂತಾ ಗೊತ್ತಿಲ್ಲ. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಅವರೇ ಹೇಳಬೇಕು. ನಾನು ಮಾತುಗಳಲ್ಲಿ ಮಾತ್ರ ಅಲ್ಲ ಕೆಲಸ ಮಾಡಿ ತೋರಿಸುತ್ತೇನೆ. ಅವರು ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ರೆ ಧನ್ಯವಾದ ಹೇಳುತ್ತೇನೆ. ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಸುಮಲತಾ ಗುದ್ದಲಿ ಪೂಜೆ

ಎಚ್‍ಡಿಕೆ ಪ್ರತಿಕ್ರಿಯೆ
ಮಂಡ್ಯದಲ್ಲಿ ಸುಮಲತಾ ಅವರು ಮನೆ ಮಾಡಿದರೆ ಸಂತೋಷ. ಇದರಿಂದ ನಮ್ಮ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಮಂಡ್ಯದ ಜನರ ಸಮಸ್ಯೆ ಕೇಳಿ ಅವರು ಬಗೆಹರಿಸಲಿ ಎಂದರು. ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಮನೆ ಮಾಡುವ ವಿಚಾರವಾಗಿ ಪ್ರಶ್ನೆ ಮಾಡಿದಾಗ ಅದರ ಅಗತ್ಯವೇನೂ ಇಲ್ಲ. ಕ್ಷೇತ್ರದಲ್ಲಿ ಮನೆ ಮಾಡುವುದೇ ಮುಖ್ಯವಲ್ಲ. ಮನೆ ಮಾಡುವುದರಿಂದಲೇ ಎಲ್ಲ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಪರೋಕ್ಷವಾಗಿ ಕುಟುಕಿದರು.

ಕ್ಷೇತ್ರದಲ್ಲಿ ಮನೆ ಮಾಡಿದ ಬಳಿಕ ಮನೆಯೊಳಗೆ ಕುಳಿತರೆ ಪ್ರಯೋಜನ ಆಗಲ್ಲ. ನಾನು ರಾಮನಗರ, ಚನ್ನಪಟ್ಟಣದಲ್ಲಿ ಮನೆ ಮಾಡಿದ್ದೀನಾ? ಸಾ.ರಾ.ಮಹೇಶ್ ಕೂಡ ಕೆ.ಆರ್.ನಗರದಲ್ಲಿ ಮನೆ ಮಾಡಿಲ್ಲ. ಆದರು ನಾವು ಜನರೊಂದಿಗೆ ಸಂಪರ್ಕದಲ್ಲಿದ್ದೇವೆ. ಜನರೊಂದಿಗೆ ಹೇಗೆ ಸಂಪರ್ಕದಲ್ಲಿ ಇರಬೇಕು ಎನ್ನುವುದು ನಮ್ಮ ಮೇಲೆಯೇ ಇದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ನೀವು ಹೇಳಿದಂತೆಯೇ ಎಲ್ಲವನ್ನೂ ಮಾಡಿದ್ದೀನಿ, ನೀವು ಏನು ಮಾಡಿದ್ರಿ ಹೇಳಿ?: ಸಚಿವ ಗೋಪಾಲಯ್ಯ

Share This Article
Leave a Comment

Leave a Reply

Your email address will not be published. Required fields are marked *