India vs England, 5th Test Day 1: ಕುಲ್ದೀಪ್‌ಗೆ 5 ವಿಕೆಟ್‌; 218 ರನ್‌ಗಳಿಗೆ ಇಂಗ್ಲೆಂಡ್‌ ಆಲೌಟ್‌

Public TV
2 Min Read

– 100ನೇ ಟೆಸ್ಟ್‌ ಪಂದ್ಯದಲ್ಲಿ ಅಶ್ವಿನ್‌ಗೆ 4 ವಿಕೆಟ್‌
– ಜೈಸ್ವಾಲ್‌ ಫಿಫ್ಟಿ; ಅರ್ಧಶತಕ ಬಾರಿಸಿ ಕ್ರೀಸ್‌ನಲ್ಲಿ ರೋಹಿತ್‌ ಶರ್ಮಾ

ಧರ್ಮಶಾಲಾ: ಭಾರತ ತಂಡದ ಕುಲ್ದೀಪ್‌ ಯಾದವ್‌ ಹಾಗೂ ಆರ್‌.ಅಶ್ವಿನ್‌ ಅವರ ಸ್ಪಿನ್‌ ದಾಳಿಗೆ ತತ್ತರಿಸಿದ ಆಂಗ್ಲರ ಪಡೆ ಇಲ್ಲಿ ನಡೆಯುತ್ತಿರುವ 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 57.4 ಓವರ್‌ಗೆ 218 ರನ್‌ಗಳಿಗೆ ಆಲೌಟ್‌ ಆಗಿದೆ.

ಟಾಸ್‌ ಗೆದ್ದು ಇಂಗ್ಲೆಂಡ್‌ (England) ತಂಡ ಮೊದಲ ಬ್ಯಾಟಿಂಗ್‌ ಆಯ್ದುಕೊಂಡಿತು. ಉತ್ತಮ ಶುಭಾರಂಭ ಪಡೆದರೂ ಇಂಗ್ಲೆಂಡ್‌ ತಂಡದ ಬ್ಯಾಟರ್‌ಗಳ ವೈಫಲ್ಯ ಅನುಭವಿಸಿದರು. ಇದನ್ನೂ ಓದಿ: ಕಳಪೆ ಬೌಲಿಂಗ್‌, ಬ್ಯಾಟಿಂಗ್‌ನಿಂದ RCBಗೆ ಸೋಲು – WPL 2ನೇ ಆವೃತ್ತಿಯಲ್ಲಿ ಗುಜರಾತ್‌ಗೆ ಚೊಚ್ಚಲ ಜಯ

ಜಾಕ್ ಕ್ರಾಲಿ (Zak Crawley) ಬಿಟ್ಟರೆ ಆಂಗ್ಲ ಪಡೆಯ ಯಾವೊಬ್ಬ ಆಟಗಾರನೂ ಹೆಚ್ಚು ಸಮಯ ಕ್ರೀಜ್‌ನಲ್ಲಿ ನಿಲ್ಲಲಿಲ್ಲ. ಜಾಕ್‌ ಕ್ರಾಲಿ 79 (11 ಫೋರ್‌, 1 ಸಿಕ್ಸರ್‌) ಸಿಡಿಸಿ ಕುಲ್ದೀಪ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿ ನಡೆದರು. ಇವರ ಬೆನ್ನಲ್ಲೇ ಎಲ್ಲಾ ಆಟಗಾರರು ಅಲ್ಪ ಮೊತ್ತಕ್ಕೆ ಒಬ್ಬೊಬ್ಬರಾಗಿ ಪೆವಿಲಿಯನ್‌ ಪರೇಡ್‌ ನಡೆಸಿದರು.

ಬೆನ್ ಡಕೆಟ್ 27, ಓಲಿ ಪೋಪ್‌ 11, ಜೋ ರೂಟ್‌ 26, ಜಾನಿ ಬೈರ್ಸ್ಟೋವ್ 29 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿ ಹೊರ ನಡೆದರು. ಬೆನ್‌ ಸ್ಟೋಕ್ಸ್‌ ರನ್‌ ಖಾತೆ ತೆರೆಯದೇ ಶೂನ್ಯ ಸುತ್ತಿ ಔಟಾದರು. ಇದನ್ನೂ ಓದಿ: ಮಾ.7 ರಿಂದ ಇಂಗ್ಲೆಂಡ್‌ ವಿರುದ್ಧ ಫೈನಲ್‌ ಟೆಸ್ಟ್‌ – ಹಲವು ದಾಖಲೆ ನಿರ್ಮಿಸಲು ಭಾರತ ವೇಯ್ಟಿಂಗ್‌

ಬೆನ್‌ ಫೋಕ್ಸ್‌ 24, ಟಾಮ್ ಹಾರ್ಟ್ಲಿ 6 ರನ್‌ ಗಳಿಸಿ ಔಟಾದರೆ, ಮಾರ್ಕ್ ವುಡ್ ಮತ್ತು ಜೇಮ್ಸ್ ಆಂಡರ್ಸನ್ ಶೂನ್ಯ ಸುತ್ತಿದರು. ಶೋಯೆಬ್ ಬಶೀರ್ ಅಜೇಯ 11 ಗಳಿಸಿದರು.

ಕುಲ್ದೀಪ್‌, ಅಶ್ವಿನ್‌ ಮಿಂಚು
ಭಾರತ (India) ತಂಡದ ಕುಲ್ದೀಪ್‌ ಯಾದವ್‌ (Kuldeep Yadav) ಮತ್ತು ಆರ್‌.ಅಶ್ವಿನ್‌ (R.Ashwin) ಸ್ಪಿನ್‌ ದಾಳಿಗೆ ಆಂಗ್ಲರ ಪಡೆ ಮಂಡಿಯೂರಿತು. ಕುಲ್ದೀಪ್‌ 5 ವಿಕೆಟ್‌ ಕಿತ್ತು ಮಿಂಚಿದರು. 100 ನೇ ಟೆಸ್ಟ್‌ ಪಂದ್ಯ ಆಡುತ್ತಿರುವ ಅಶ್ವಿನ್‌ 4 ಬೀಳಿಸಿದ್ದಾರೆ. ರವೀಂದ್ರ ಜಡೇಜಾ 1 ವಿಕೆಟ್‌ ಕಬಳಿಸಿದರು. ಇದನ್ನೂ ಓದಿ: ಮೆಗ್‌ ಲ್ಯಾನಿಂಗ್‌, ರಾಡ್ರಿಗಾಸ್‌ ಫಿಫ್ಟಿ; ಮುಂಬೈ ವಿರುದ್ಧ ಡೆಲ್ಲಿಗೆ 29 ರನ್‌ಗಳ ಗೆಲುವು

ಜೈಸ್ವಾಲ್‌, ರೋಹಿತ್‌ ಫಿಫ್ಟಿ
ಮೊದಲ ಇನಿಂಗ್ಸ್‌ ಬ್ಯಾಟಿಂಗ್‌ ನಡೆಸುತ್ತಿರುವ ಭಾರತ ಆರಂಭದಲ್ಲೇ ಉತ್ತಮ ಪ್ರದರ್ಶನ ತೋರಿದೆ. ಓಪನರ್‌ಗಳಾದ ಯಶಸ್ವಿ ಜೈಸ್ವಾಲ್‌ (Yashavi Jaiswal) ಮತ್ತು ರೋಹಿತ್‌ ಶರ್ಮಾ (Rohit Sharma) ಅರ್ಧಶತಕ ಗಳಿಸಿ ಮಿಂಚಿದ್ದಾರೆ. ಜೈಸ್ವಾಲ್‌ 57 (58 ಬಾಲ್‌, 5 ಫೋರ್‌, 3 ಸಿಕ್ಸರ್‌) ಬಾರಿಸಿ ಶೋಯೆಬ್‌ ಬಶೀರ್‌ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ರೋಹಿತ್‌ ಶರ್ಮಾ 52 ಹಾಗೂ ಶುಭಮನ್‌ ಗಿಲ್‌ 26 ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಮೊದಲ ಇನಿಂಗ್ಸ್‌ನ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 30 ಓವರ್‌ಗಳಿಗೆ 1 ವಿಕೆಟ್‌ ನಷ್ಟಕ್ಕೆ 135 ರನ್‌ ಗಳಿಸಿದೆ. ಆ ಮೂಲಕ 83 ರನ್‌ಗಳ ಹಿನ್ನಡೆಯಲ್ಲಿದೆ. ಇದನ್ನೂ ಓದಿ: ಫ್ರೀ.. ಫ್ರೀ.. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಡಿಸ್ನಿ+ ಹಾಟ್‍ಸ್ಟಾರ್‌ನಲ್ಲಿ ಫ್ರೀ

Share This Article