ಬಾರ್‍ಗೆ ನುಗ್ಗಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಕುಡಚಿ ಪಿಎಸ್‍ಐಗೆ ಕ್ಲೀನ್ ಚೀಟ್

Public TV
2 Min Read

ಬೆಳಗಾವಿ: ಬಾರ್‍ಗೆ ನುಗ್ಗಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಜಿಲ್ಲೆಯ ಕುಡಚಿ ಠಾಣೆಯ ಪಿಎಸ್‍ಐ ಶಿವಶಂಕರ ಮುಕ್ರಿ ಅವರಿಗೆ ಇಲಾಖೆಯ ವಿಚಾರಣೆಯಲ್ಲಿ ಕ್ಲೀನ್ ಚೀಟ್ ನೀಡಲಾಗಿದೆ.

ಕುಡಚಿ ಪೊಲೀಸ್ ಠಾಣೆ ಪಿಎಸ್‍ಐ ಶಿವಶಂಕರ ಮುಕರಿ ಮಾರ್ಚ್ 13 ರಂದು ಕುಡಚಿ ಪಟ್ಟಣದ ಶಿವಶಕ್ತಿ ಬಾರ್‍ಗೆ ನುಗ್ಗಿ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ರು. ಹಲ್ಲೆಯ ದೃಶ್ಯಗಳು ಬಾರ್‍ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ತನಿಖೆಯಲ್ಲಿ ಸಾಕ್ಷಿಗಳನ್ನ ಪರಿಗಣಿಸದ ತನಿಖಾಧಿಕಾರಿಗಳು, 15 ಪುಟಗಳ ಸಂಪೂರ್ಣ ತನಿಖಾ ವರದಿಯನ್ನ ಪಿಎಸ್‍ಐ ಪರವಾಗಿಯೇ ತಯಾರಿಸಿದ್ದಾರೆ. ದೂರುದಾರ ಬಾರ್ ಮಾಲೀಕರ ವಿರುದ್ಧವೇ ಇಡೀ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಾ.18ರಂದು ಐಜಿಪಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು. ಡಿಸಿಆರ್‍ಬಿ ಘಟಕದ ಡಿವೈಎಸ್ಪಿ ಎಸ್.ಎಂ.ನಾಗರಾಜ್ ಅವರಿಗೆ ತನಿಖೆ ನಡೆಸಲು ಸೂಚಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಡಿವೈಎಸ್ಪಿ ನಾಗರಾಜ್ ಮಾರ್ಚ್ 27ರಂದೇ ವರದಿ ನೀಡಿದ್ದಾರೆ.

ಹಲ್ಲೆಗೊಳಗಾದ ಅಜೀತ್

ಇದನ್ನೂ ಓದಿ: ಮಾಮೂಲಿ ಕೊಡದಕ್ಕೆ ಬಾರ್ ಸಿಬ್ಬಂದಿಯನ್ನ ಮನಬಂದಂತೆ ಥಳಿಸಿದ ಪಿಎಸ್‍ಐ!
ವರದಿಯಲ್ಲಿನ ಅಂಶಗಳೇನು?:
1. ಪಿಎಸ್‍ಐ ಹಲ್ಲೆ ನಡೆಸಿದ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆಯೇ ಅನುಮಾನವಿದೆ. ಬಾರ್ ನಲ್ಲಿ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟತೆ ಕೊರತೆಯಿದೆ ಎಂದು ಹೇಳಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳು ನಿಜವೆಂದು ನಂಬಲು ಸಾಧ್ಯವಿಲ್ಲ ಅಂತಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2. ಬಾರ್ ಸಿಬ್ಬಂದಿಯಿಂದ ಉದ್ದೇಶಪೂರ್ವಕ ಘಟನೆಯ ಅತಿಯಾದ ರಂಜಿಸಿದ್ದು, ಇದಕ್ಕಾಗಿಯೇ ಹಲ್ಲೆಗೊಳಗಾದ ವ್ಯಕ್ತಿ ಎನ್ನಲಾದ ಅಜಿತ್ ಎಂಬಾತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸದೇ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಪಿಎಸ್‍ಐ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿಲ್ಲ, ಹಿಗ್ಗಾಮುಗ್ಗಾ ಥಳಿಸಿದ್ದಾರೆಂಬುದು ಸುಳ್ಳು ಎಂದು ವರದಿಯಲ್ಲಿ ತಿಳಿಸಲಾಗಿದೆ.

3. ಘಟನೆ ದಿನ ಮದ್ಯ ಮಾರಾಟ ನಿಷೇಧವಿದ್ದರೂ ಬಾರ್ ನಲ್ಲಿ ಮದ್ಯ ಮಾರಾಟ ಮಾಡಲಾಗುತಿತ್ತು. ಪೊಲೀಸ್ ಅಧಿಕಾರಿಗಳಲ್ಲಿ ಭಯ ಹುಟ್ಟಿಸಲು ಹಲ್ಲೆಯ ಆಪಾದನೆ ಮಾಡಲಾಗಿದೆ. ಇನ್ನೂ ಪಿಎಸ್‍ಐ ಪ್ರತಿ ತಿಂಗಳು 30ಸಾವಿರ ರೂ. ಮಾಮೂಲಿ ಪಡೆಯುತ್ತಾರೆಂಬ ಆರೋಪ ಶುದ್ಧ ಸುಳ್ಳು ಎಂದು ಸಾಬೀತಾಗಿದೆ. ಪಿಎಸ್‍ಐ ಶಿವಶಂಕರ ಮುಕರಿ ಬಾರ್‍ನಲ್ಲಿದ್ದ ಯಾವುದೇ ನೀರಿನ ಬಾಟಲ್, ತಂಪು ಪಾನೀಯ ದೋಚಿಲ್ಲ. ಬಾರ್ ಮಾಲೀಕ ಶಿವರಾಜ್ ನೀಡಿದ ದೂರು ಸತ್ಯಕ್ಕೆ ದೂರವಾದದ್ದು ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ತನ್ನ ಜೀಪಿಗೆ ದಾರಿ ಬಿಡದವನ ಮೇಲೆ ಕುಡಚಿ ಪಿಎಸ್‍ಐ ಗೂಂಡಾಗಿರಿ

 

Share This Article
Leave a Comment

Leave a Reply

Your email address will not be published. Required fields are marked *