ಧನುಷ್-ರಶ್ಮಿಕಾ ಕಾಂಬಿನೇಷನ್ ಚಿತ್ರಕ್ಕೆ ‘ಕುಬೇರ’ ಟೈಟಲ್ ಫಿಕ್ಸ್

Public TV
2 Min Read

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಧನುಷ್ ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ನಿನ್ನೆಯಷ್ಟೇ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದು, ಚಿತ್ರಕ್ಕೆ ಕುಬೇರ (Kubera)ಎಂದು ಟೈಟಲ್ ಇಡಲಾಗಿದೆ. ಕನ್ನಡದಲ್ಲಿ ಇದೇ ಹೆಸರಿನಲ್ಲಿ ಜಗ್ಗೇಶ್ ಈ ಹಿಂದೆ ಚಿತ್ರ ಮಾಡಿದ್ದರು. ಧನುಷ್ ನಟನೆಯ ಈ ಚಿತ್ರವು ಕನ್ನಡವೂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ತಯಾರು ಆಗಲಿದೆ.

ಒಂದು ಕಡೆ ಸಾಲು ಸಾಲು ಚಿತ್ರಗಳಲ್ಲಿ ಧನುಷ್ ನಟಿಸುತ್ತಿದ್ದರೆ, ಮತ್ತೊಂದು ಕಡೆ ನಿರ್ದೇಶನಕ್ಕೂ ಮುಂದಾಗಿದ್ದಾರೆ. ಈ ಚಿತ್ರಕ್ಕೆ ರಾಯನ್ ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಖ್ಯಾತ ನಟ ಎಸ್.ಜೆ ಸೂರ್ಯ ವಿಲನ್ ಪಾತ್ರ ನಿರ್ವಹಿಸುವ ಬಗ್ಗೆ ಮಾಹಿತಿಯನ್ನು ಸ್ವತಃ ಧನುಷ್ (Dhanush) ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬೆನ್ನಲ್ಲೇ ಚಿತ್ರದ ಮತ್ತೊಂದು ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಕನ್ನಡದ ಮಾಣಿಕ್ಯ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಚಿತ್ರದಲ್ಲಿ ನಟಿಸಿದ್ದಾರೆ.

ಮಾಣಿಕ್ಯ (Maanikya) ಸಿನಿಮಾದಲ್ಲಿ ಸುದೀಪ್‌ಗೆ (Sudeep) ನಾಯಕಿ ನಟಿಸಿದ್ದ ವರಲಕ್ಷ್ಮಿ ಸದ್ಯ ಧನುಷ್ ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದ ಲುಕ್ ಕೂಡ ರಿವೀಲ್ ಆಗಿದ್ದು, ಹಳ್ಳಿ ಹುಡುಗಿಯ ಲುಕ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ & ವೈಟ್ ಶೇಡ್‌ನಲ್ಲಿ ವರಲಕ್ಷ್ಮಿ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಧನುಷ್ ಅವರ ಮಹತ್ವಾಕಾಂಕ್ಷಿ ಈ ಸಿನಿಮಾದ ಟೈಟಲ್ ಫಿಕ್ಸ್ ಆಗಿದೆ. ಈ ಸಿನಿಮಾಗೆ ಧನುಷ್ ಅವರೇ ನಿರ್ದೇಶಿಸಿ, ನಟಿಸುತ್ತಿದ್ದು, ಚಿತ್ರಕ್ಕೆ ‘ರಾಯನ್’ ಎಂದು ಹೆಸರಿಡಲಾಗಿದೆ. ಜೊತೆಗೆ ಚಿತ್ರದ ಫಸ್ಟ್ ಲುಕ್ ಕೂಡ ಇತ್ತೀಚೆಗೆ ರಿಲೀಸ್ ಮಾಡಿತ್ತು ಚಿತ್ರತಂಡ. ನಾನಾ ಕಾರಣಗಳಿಂದಾಗಿ ಫಸ್ಟ್ ಲುಕ್ ಕುತೂಹಲ ಮೂಡಿಸಿತ್ತು.

 

2017ರಲ್ಲಿ ತೆರೆಕಂಡ ‘ಪಾ ಪಂಡಿ’ ಸಿನಿಮಾದ ಮೂಲಕ ನಿರ್ದೇಶಕರಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ಧನುಷ್. ಅದಾದ ನಂತರ ಇದೀಗ ತಮ್ಮ ಚಿತ್ರಕ್ಕೆ ತಾವೇ ನಿರ್ದೇಶನ ಮಾಡಿಕೊಂಡಿದ್ದಾರೆ. ಇದು ಧನುಷ್ ಅವರ 50ನೇ ಸಿನಿಮಾ ಎನ್ನುವುದು ಮತ್ತೊಂದು ವಿಶೇಷ. ಸನ್ ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ.

Share This Article