ಬೆಂಗಳೂರು: ದೀಪಾವಳಿ (Deepavali) ಹಬ್ಬ ದಿನಗಣನೆ ಆರಂಭವಾಗಿದ್ದು, ಹಬ್ಬದ ಹಿನ್ನೆಲೆ ಅ.17ರಿಂದ 20ರವರೆಗೆ ರಾಜ್ಯಾದ್ಯಂತ 2,500 ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಕೆಎಸ್‌ಆರ್‌ಟಿಸಿ (KSRTC) ಮಾಡಿದೆ.
ಹಬ್ಬಕ್ಕೆ ಊರಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯು ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ. ಕೆಎಸ್‌ಆರ್‌ಟಿಸಿ ಸಾಮಾನ್ಯ ಸಾರಿಗೆ, ಐರಾವತ, ಸ್ಲೀಪರ್ ಕೋಚ್ ಸೇರಿ ಎಲ್ಲಾ ಐಷಾರಾಮಿ ಬಸ್‌ಗಳು ಲಭ್ಯವಿರಲಿದೆ. ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್, ಪೀಣ್ಯಾ ಬಸ್ ನಿಲ್ದಾಣದಿಂದ ಬಸ್‌ಗಳು ಈ ನಾಲ್ಕು ದಿನ ಬೆಂಗಳೂರಿನಿಂದ ರಾಜ್ಯದ ನಾನಾಕಡೆಗಳಿಗೆ ಬಸ್ ವ್ಯವಸ್ಥೆ ಇರಲಿದೆ.
ಹಬ್ಬ ಮುಗಿದ ಬಳಿಕವೂ ವಿಶೇಷ ಬಸ್‌ಗಳು ಕಾರ್ಯಾಚರಣೆ ಮಾಡಲಿದೆ. ಅ.22 ಹಾಗೂ 26ರಂದು ಬೆಂಗಳೂರಿಗೆ ವಾಪಸ್ ಬರುವ ಪ್ರಯಾಣಿಕರಿಗೂ ಈ ಸೇವೆ ಇರಲಿದೆ. ರಾಜ್ಯ ಹಾಗೂ ಅಂತರಾಜ್ಯದಿಂದಲೂ ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿರಲಿದೆ ಎಂದು ಕೆಎಸ್‌ಆರ್‌ಟಿಸಿ ನಿಗಮ ಪ್ರಕಟಣೆ ಹೊರಡಿಸಿದೆ.
ಎಲ್ಲಿಂದ ಎಲ್ಲಿಗೆ?1.ಮೆಜೆಸ್ಟಿಕ್
ಮೆಜೆಸ್ಟಿಕ್‌ಯಿಂದ ಧರ್ಮಸ್ಥಳ, ಶೃಂಗೇರಿ, ಹೊರನಾಡು, ಮಂಗಳೂರು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಗೋಕರ್ಣ, ಕಾರವಾರ ಭಾಗ. ಉತ್ತರ ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ವಿಜಯಪುರ, ಯಾದಗಿರಿ ಸೇರಿ ಇತರೆಡೆ ಬಸ್ ವ್ಯವಸ್ಥೆ ಇರಲಿದೆ. ಅಲ್ಲದೇ ಅಂತರಾಜ್ಯ ತಿರುಪತಿ, ವಿಜಯವಾಡ, ಹೈದರಾಬಾದ್ ಕಡೆಗೂ ಹೆಚ್ಚುವರಿ ಬಸ್‌ಗಳು ಲಭ್ಯವಿರಲಿದೆ.
2.ಸ್ಯಾಟಲೈಟ್ ಬಸ್ ನಿಲ್ದಾಣ
ಮೈಸೂರು ಭಾಗದ ಎಲ್ಲಾ ಕಡೆ ಬಸ್‌ಗಳ ಕಾರ್ಯಾಚರಿಸಲಿದೆ. ಮಂಡ್ಯ, ರಾಮನಗರ, ಕುಶಾಲನಗರ, ಚಾಮರಾಜನಗರ, ಕೊಡಗು, ವಿರಾಜಪೇಟೆ, ಪಿರಿಯಾಪಟ್ಟಣಕ್ಕೆ ಬಸ್‌ಗಳು ಲಭ್ಯ ವ್ಯವಸ್ಥೆ ಇರಲಿದೆ.
3.ಶಾಂತಿನಗರ ಬಸ್ ನಿಲ್ದಾಣ
ತಮಿಳುಳುನಾಡು ಮತ್ತು ಕೇರಳ ಭಾಗಗಳಾದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆ ಬಸ್‌ಗಳು ಲಭ್ಯವಿರಲಿದೆ.
ಪ್ರಯಾಣಿಕರು ಮುಂಗಡ ಟಿಕೆಟ್ ಬುಕಿಂಗ್ ಮಾಡಿದ್ರೆ 5% ರಿಯಾಯಿತಿ ಇರಲಿದೆ. ಅಲ್ಲದೇ ಎರಡೂ ಬದಿಯ ಮುಂಗಡ ಟಿಕೆಟ್ ಬುಕ್ ಮಾಡಿದ್ರೆ 10% ರಿಯಾಯಿತಿಯ ಆಫರ್ ಅನ್ನು ಕೆಎಸ್‌ಆರ್‌ಟಿಸಿ ನೀಡಿದೆ.