KSRTC ಬಸ್ ತಡೆದು ವಿದ್ಯಾರ್ಥಿಗಳು, ಜನರಿಂದ ಪ್ರತಿಭಟನೆ

Public TV
1 Min Read

– ಬೇಡಿಕೆ ಈಡೇರದಿದ್ದರೆ ಉಗ್ರರೂಪದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ
– ಬಸ್‍ಗಳು ಸರ್ವಿಸ್ ರಸ್ತೆಯಲ್ಲಿಯೂ ಸಂಚಾರ ಮಾಡಿ ಎಂದು ಮನವಿ

ನೆಲಮಂಗಲ: ವಿದ್ಯಾರ್ಥಿಗಳು ಹಾಗೂ ಜನರು ಕೆ.ಎಸ್‍.ಆರ್.ಟಿ.ಸಿ  ಬಸ್‍ಗಳನ್ನು ತಡೆದು ನೆಲಮಂಗಲದಲ್ಲಿ ಪ್ರತಿಭಟನೆ ನಡೆಸಿದರು.

ಕೊರೊನಾ ಆತಂಕದ ನಡುವೆಯೇ ಇತ್ತೀಚೆಗೆ ಶಾಲಾ ಕಾಲೇಜುಗಳನ್ನು ಓಪನ್ ಮಾಡಿದ್ದು, ಪಾಠ ಪ್ರವಚನಗಳು ನಡೆಯುತ್ತಿವೆ. ಆದರೆ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯಿಂದ ಸಾಕಷ್ಟು ಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ, ಕೆ.ಎಸ್‍.ಆರ್.ಟಿ.ಸಿ  ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.ಇದನ್ನೂ ಓದಿ:ಕೇರಳದ 32 ಮಂದಿಗೆ ಸೋಂಕು, ಕೋಲಾರದ ನರ್ಸಿಂಗ್ ಕಾಲೇಜು ವಿರುದ್ಧ ಕಠಿಣ ಕ್ರಮ: ಸುಧಾಕರ್

ಬೆಳಗ್ಗೆ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ಹೋಗಲು ಬಸ್‍ಗಳು ಸರಿಯಾಗಿ ಬರುತ್ತಿಲ್ಲ. ಬರುವಂತಹ ಎಲ್ಲಾ ಬಸ್‍ಗಳು ಸರ್ವೀಸ್ ರಸ್ತೆಯಲ್ಲಿ ಚಲಿಸದೆ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿವೆ. ಈ ನಿಟ್ಟಿನಲ್ಲಿ ಸಾಕಷ್ಟು ಬಾರಿ ತುಮಕೂರು ಡಿಪೋ ಅಧಿಕಾರಿಗಳಿಗೆ ಲಿಖಿತ ಮೂಲಕ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಪರೀಕ್ಷೆಗಳು ಶುರುವಾಗಿದ್ದು, ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತೆರಳಲು ಸಾಧ್ಯವಾಗದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.ಇದನ್ನೂ ಓದಿ:ನಂದಿಬೆಟ್ಟದಿಂದ ಮರಳುತ್ತಿದ್ದಾಗ ಯುವಕ, ಯುವತಿಯನ್ನು ಅಡ್ಡಗಟ್ಟಿ ಸುಲಿಗೆ

ಈ ಹಿನ್ನೆಲೆಯಲ್ಲಿ ಪೊಷಕರು ಮತ್ತು ವಿದ್ಯಾರ್ಥಿಗಳು ಪ್ರತಿದಿನ ಸರ್ವಿಸ್ ರಸ್ತೆಯಲ್ಲಿ ಬಸ್ಸುಗಳು ಸಂಚಾರ ಮಾಡುವಂತೆ ಪ್ರತಿಭಟನೆ ಮಾಡಿದರು. ಒಂದು ವೇಳೆ ಈ ಬೇಡಿಕೆಯನ್ನು ಸರಿ ಪಡಿಸದಿದ್ದರೆ ಮುಂದೆ ಉಗ್ರರೂಪದ ಪ್ರತಿಭಟನೆ ನಡೆಸುವುದಾಗಿ ಇಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ:ಮೊಹರಂ, ಪೀರದೇವರು ಹಬ್ಬ – ದೇವರ ದರ್ಶನ ಪಡೆಯಲು ಮುಗಿಬಿದ್ದ ಜನ

ಈ ವೇಳೆ ಬಿಎಂಟಿಸಿ ನಿರ್ದೇಶಕ ಬೃಂಗೇಶ್, ಸ್ಥಳೀಯ ಮುಖಂಡ ಜಗದೀಶ್ ಚೌದರಿ, ರವಿಚಂದ್ರ, ಪಂಚಾಕ್ಷರಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *