46 ರೂ. ಆಗಿದ್ರೂ 50 ರೂ. ಟಿಕೆಟ್‌ – ಭಾರೀ ಟೀಕೆ ಬೆನ್ನಲ್ಲೇ KSRTC ಆದೇಶ ರದ್ದು

Public TV
1 Min Read

ಬೆಂಗಳೂರು: 46 ರೂ. ಟಿಕೆಟ್‌ ಮೊತ್ತ ಆಗಿದ್ದರೂ ಪ್ರಯಾಣಿಕರಿಂದ 50 ರೂ. ಪ್ರಯಾಣ ಶುಲ್ಕ ವಿಧಿಸಿದ್ದಕ್ಕೆ ಕೆಎಸ್‌ಆರ್‌ಟಿಸಿ (KSRTC) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

ಪ್ರಯಾಣಿಕರೊಬ್ಬರು ಜುಲೈ 2ರ ರಾತ್ರಿ 9 ಗಂಟೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ಅಲಂಗಾರು ಕಡೆಗೆ ಸ್ಲೀಪರ್‌ ಬಸ್ಸಿನಲ್ಲಿ (Sleeper Bus) ಹೊರಟ್ಟಿದ್ದಾರೆ. ಟಿಕೆಟ್‌ ದರ 46 ರೂ. ಆಗಿದ್ದರೂ ನಿರ್ವಾಹಕ 50 ರೂ. ಪಡೆದಿದ್ದಾನೆ.

ಈ ಟಿಕೆಟಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಮಾಜಿ ಸಚಿವ, ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ (Suresh Kumar) ಅವರು ಪೋಸ್ಟ್‌ ಶೇರ್‌ ಮಾಡಿ ರಾಜ್ಯ ಸಾರಿಗೆ ಸಚಿವರು ಅಥವಾ ಸಂಬಂಧಪಟ್ಟ ಅಧಿಕಾರಿ ಇದಕ್ಕೆ ಸ್ಪಷ್ಟೀಕರಣ ನೀಡಬೇಕೆಂದು ಕೇಳಿದ್ದರು. ಭಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿ ಹಿಂದೆ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ. ಇದನ್ನೂ ಓದಿ: `ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು

 

ಕೆಎಸ್‌ಆರ್‌ಟಿಸಿ ಸ್ಪಷ್ಟನೆ ಏನು?
ಈ ವ್ಯವಸ್ಥೆಯು ಪ್ರತಿಷ್ಠಿತ ಸಾರಿಗೆಗಳಲ್ಲಿ(ಪ್ರೀಮಿಯಂ ಸೇವೆ ನೀಡುವ 400 ಬಸ್ಸುಗಳಲ್ಲಿ ಮಾತ್ರ) ಜಾರಿಯಲ್ಲಿತ್ತು. ಅದರಲ್ಲೂ ETM ಮತ್ತು ಅವತಾರ್ ಕೌಂಟರ್ ಗಳಲ್ಲಿ ಮತ್ತು ಇಟಿಎಂ ಯಂತ್ರಗಳಲ್ಲಿ ಚಿಲ್ಲರೆ ಸಮಸ್ಯೆಯಿಂದ ಪ್ರಯಾಣ ದರವನ್ನು ರೌಂಡ್‌ ಆಫ್‌ ಮಾಡಲು ಆದೇಶಿಸಲಾಗಿತ್ತು. ಇದನ್ನೂ ಓದಿ: ಒಂದು ಗಡಿ, ಮೂರು ವಿರೋಧಿಗಳು; ಆಪರೇಷನ್‌ ಸಿಂಧೂರದಲ್ಲಿ ಪಾಕ್‌-ಚೀನಾ-ಟರ್ಕಿ ನಂಟು ಬಹಿರಂಗಪಡಿಸಿದ ಸೇನಾ ಉಪಮುಖ್ಯಸ್ಥ

ಪ್ರಯಾಣಿಕರು ಟಿಕೆಟ್‌ ಕಾಯ್ದಿರಿಸಲು ಪಿಒಎಸ್‌ ಯಂತ್ರಗಳನ್ನು ಹಾಗೂ ಇಟಿಎಂ ಯಂತ್ರಗಳಲ್ಲಿ ಯಪಿಐ ವ್ಯವಸ್ಥೆ ಒದಗಿಸಿದ್ದರಿಂದ ಪ್ರಯಾಣ ದರವನ್ನು ರೌಂಡ್‌ ಆಫ್‌ ಮಾಡುವ ಅವಶ್ಯಕತೆ ಇಲ್ಲದಿರುವುದರಿಂದ ಈಗ ಈ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ. ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದ್ದು, ತಂತ್ರಾಂಶದಲ್ಲಿ ಈ ಸಂಬಂಧ ಬದಲಾವಣೆ ಮಾಡುವ ಕ್ರಮ ಪ್ರಗತಿಯಲ್ಲಿರುತ್ತದೆ.

Share This Article