ಬೆಂಗಳೂರು: ನಗರದ ಪ್ರಸಿದ್ಧ ಲುಲು ಮಾಲ್ (Lulu Mall) ಮುಂದೆ ಕೆಎಸ್‌ಆರ್‌ಟಿಸಿ ಬಸ್ಸೊಂದು (KSRTC Bus) ಹೊತ್ತಿ ಉರಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ರಾತ್ರಿ 10:15ಕ್ಕೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಶಿವಮೊಗ್ಗಕ್ಕೆ (Shivamogga) ಕರ್ನಾಟಕ ಸಾರಿಗೆ ಬಸ್ ಹೊರಟಿತ್ತು. ಲುಲು ಮಾಲ್ ಬಳಿ ರಾತ್ರಿ 10:20 ತಲುಪುವಾಗ ಬಸ್ಸಿನ ಕೆಳ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಈ ದೃಶ್ಯ ನೋಡಿದ ಜನರು ಚಾಲಕನಿಗೆ ತಿಳಿಸಿದ್ದಾರೆ. ಚಾಲಕ ಕೂಡಲೇ ಬಸ್ಸನ್ನು ನಿಲ್ಲಿಸಿದ್ದು ಪ್ರಯಾಣಿಕರು ಕೆಳಗೆ ಇಳಿದಿದ್ದಾರೆ. ಜನರು ಇಳಿದ ಕೆಲ ಕ್ಷಣಗಳಲ್ಲಿ ಬಸ್ ಧಗಧಗಿಸಿದೆ. ಪರಿಣಾಮ ಮೆಜೆಸ್ಟಿಕ್‌ನಿಂದ ಲುಲುಮಾಲ್‌ಗೆ ಹೋಗುವ ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಇದನ್ನೂ ಓದಿ: ಪಾಕ್ ಧ್ವಜ ಇರುವ 10 ತೈಲ ಟ್ಯಾಂಕರ್‌ಗಳನ್ನು ಇರಾನ್ ನಮಗೆ ಗಿಫ್ಟ್ ನೀಡಿದೆ: ಟ್ರಂಪ್

