ಕೆಎಸ್‌ಆರ್‌ಟಿಸಿ ಬಸ್‌ ಒಳಗೆ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Public TV
1 Min Read

– ಬೆನ್ನುನೋವಿದ್ದರೂ ಪಂಚರ್‌ ಕೆಲಸಕ್ಕೆ ಹಾಕಿದ್ದ ಅಧಿಕಾರಿಗಳು; ಡ್ಯೂಟಿ ಬದಲಿಸಲಿಲ್ಲ ಅಂತ ಬೇಸರ

ಬೆಳಗಾವಿ: ಡ್ಯೂಟಿ ಬದಲಿಸಲಿಲ್ಲ ಅಂತ ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ‌ಬೆಳಗಾವಿಯ ಡಿಪೋ 1 ರಲ್ಲಿ ಅಳ್ನಾವರ್ ಬೆಳಗಾವಿ ಬಸ್‌ನಲ್ಲಿ ಮೆಕ್ಯಾನಿಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ.‌

ಮೃತ ನೌಕರನನ್ನು ಕೇಶವ ಕಮಡೊಳಿ (57) ಎಂದು ಗುರುತಿಸಲಾಗಿದೆ. ಬೆಳಗಾವಿಯ ಹಳೆ ಗಾಂಧಿ ನಗರದ ನಿವಾಸಿ ಕೇಶವ್, ಬಸ್ ವಾಶಿಂಗ್‌ನಲ್ಲಿ ಬಸ್‌ಗಳ ಪಂಚರ್‌ ತೆಗೆಯುವ ಕೆಲಸ‌ ಮಾಡುತ್ತಿದ್ದರು. ಬೆನ್ನು ನೋವಿದ್ದರೂ ಸಹ ಪಂಚರ್ ತೆಗೆಯುವ ಕೆಲಸವನ್ನು ಅಧಿಕಾರಿಗಳು ಹಚ್ಚಿದ್ದರು ಎನ್ನಲಾಗಿದೆ.

ಡಿಪೋ ಮ್ಯಾನೇಜರ್ ಲಿಂಗರಾಜ್ ಲಾಠಿ, ಸಹಾಯಕ ಕಾರ್ಯ ಅಧೀಕ್ಷಕ ಅನಿಲ್ ಬಾಂದೇಕರ್‌ಗೆ ಕುಟುಂಬಸ್ಥರು ಮನವಿ ಮಾಡಿದ್ದರು ಎನ್ನಲಾಗಿದೆ. ಕೆಲಸದ ಒತ್ತಡ ತಡೆದಕೊಳ್ಳಲಾಗದೇ ಕೇಶವ ಆತ್ಮಹತ್ಯೆ ಮಾಡಿದಕೊಂಡಿದ್ದಾರೆ ಎನ್ನಲಾಗಿದ್ದು, ಅಧಿಕಾರಿಗಳ ವಿರುದ್ಧ ಮೃತ ಕೇಶವ್ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಸ್ಥಳಕ್ಕೆ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರು ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article