ರಸ್ತೆ ದಾಟುತಿದ್ದ ಬಾಲಕನ ಮೇಲೆ ಹರಿದ KSRTC ಬಸ್!

Public TV
1 Min Read

ಸಾಂದರ್ಭಿಕ ಚಿತ್ರ

ಹಾಸನ: ರಸ್ತೆ ದಾಟುತಿದ್ದ ಬಾಲಕನೊಬ್ಬನ ಮೇಲೆ ಬಸ್ಸೊಂದು ಹರಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಳೇನರಸೀಪುರದ ಯಡೆಗೌಡನ ಹಳ್ಳಿಯಲ್ಲಿ ನಡೆದಿದೆ.

ಗಿರೀಶ್(7) ಮೃತ ಬಾಲಕ. ಇಂದು ತಾಯಿಯೊಂದಿಗೆ ಆಟೋ ರಿಕ್ಷಾ ಇಳಿದು ರಸ್ತೆ ದಾಟುವಾಗ ಕೆಎಸ್‌ಆರ್‌ಟಿಸಿ ಬಸ್ ಬಾಲಕನ ಮೇಲೆ ಹರಿದಿದೆ. ಈ ವೇಳೆ ತಕ್ಷಣ ಸ್ಥಳದಲ್ಲಿದ್ದವರು ಬಾಲಕನನ್ನು ಹಾಸನ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಆದ್ರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.

ಹೊಳೆನರಸಿಪುರ ಕಡೆಯಿಂದ ಮೈಸೂರಿನ ಕೆ.ಆರ್.ನಗರ ಕಡೆಗೆ ಈ ಬಸ್ ಹೊರಟಿತ್ತು. ಈ ವೇಳೆ ರಸ್ತೆಗೆ ಏಕಾಏಕಿ ಬಾಲಕ ದಾಟಲು ಬಂದ ಕಾರಣ ಚಾಲಕ ಬ್ರೇಕ್ ಹಾಕುವ ಮುನ್ನ ಬಸ್ ಆತನ ಮೇಲೆ ಹರಿದಿದೆ. ಈ ಘಟನೆ ಸಂಬಂಧ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರ ವಶಕ್ಕೆ ಪಡೆದಿದ್ದು, ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *