ಕೆಎಸ್‌ಆರ್‌ಟಿಸಿ ಬಸ್ ಎಂಜಿನ್‍ಗೆ ಬೆಂಕಿ: 30 ಪ್ರಯಾಣಿಕರು ಬಚಾವ್

Public TV
1 Min Read

ಬೆಂಗಳೂರು: ಆನೇಕಲ್ ಬಸ್ ನಿಲ್ದಾಣದಿಂದ ಹೊರಡಲು ಸಿದ್ಧವಾಗಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

ಹೊಸೂರು ಮಾರ್ಗವಾಗಿ ಆನೇಕಲ್-ತಮಿಳುನಾಡು ಸಂಚರಿಸುವ ಎಕೆ-41 ಜಿ-038 ನಂಬರಿನ ಬಸ್ಸು ಆನೇಕಲ್ ಬಸ್ ನಿಲ್ದಾಣದಲ್ಲಿ ಬಂದು ನಿಂತಿತ್ತು. ಬಳಿಕ 30 ಜನ ಪ್ರಯಾಣಿಕರನ್ನು ಹೊತ್ತು ಹೊಸೂರು ಕಡೆ ತೆರಳಲು ಸಿದ್ಧವಾಗಿತ್ತು. ಆದರೆ ಬಸ್ಸಿನ ಎಂಜಿನ್‍ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಜಾಗೃತನಾದ ಚಾಲಕ ಪ್ರಯಾಣಿಕರನ್ನು ಕೆಳಗೆ ಇಳಿಯುವಂತೆ ಸೂಚಿಸಿ, ನೀರು ಹಾಕಿ ಬೆಂಕಿ ನಂದಿಸಿದ್ದಾರೆ.

ಕೆಲ ಹೊತ್ತು ಬಸ್ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಳೇ ವಾಹನಗಳನ್ನು ಸಂಚಾರಕ್ಕೆ ಬಿಡುತ್ತಾರೆ. ಕಳೆದ ವಾರವೂ ಸಹ ಇಂತಹದ್ದೇ ಘಟನೆ ನಡೆದಿದ್ದು, ಕೂಡಲೇ ಹಳೆಯ ಬಸ್ಸುಗಳನ್ನು ಬದಲಾವಣೆ ಮಾಡಿ ಮುಂದಾಗುವ ಅನಾಹುತಗಳನ್ನು ತಡೆಯಬೇಕು ಎಂದು ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
1 Comment

Leave a Reply

Your email address will not be published. Required fields are marked *