ನಾರಿ ಶಕ್ತಿಗೆ ಮುರಿದ ಮತ್ತೊಂದು ಕೆಎಸ್‍ಆರ್‌ಟಿಸಿ ಬಸ್ ಡೋರ್

Public TV
1 Min Read

ಮಂಡ್ಯ: ಹೆಚ್ಚಿನ ಸಂಖ್ಯೆಯ ಮಹಿಳೆಯರು ಬಸ್ ಏರುವ ವೇಳೆ ನೂಕುನುಗ್ಗಲು ಉಂಟಾಗಿ ಬಸ್ (Bus) ಡೋರ್ ಮುರಿದ ಘಟನೆ ಮಳವಳ್ಳಿಯ (Malavalli) ಕೆಎಸ್‍ಆರ್‌ಟಿಸಿ (KSRTC) ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಸೀಟು ಹಿಡಿಯುಲು ಜನರು ಏಕಾಏಕಿ ನುಗ್ಗಿದ್ದಾರೆ. ಇದರಿಂದ ಡೋರ್ ಮುರಿದು ಹೋಗಿದೆ. ನಂತರ ಬಸ್‍ನಿಂದ ಪ್ರಯಾಣಿಕರನ್ನು ಸಿಬ್ಬಂದಿ ಕೆಳಗಿಳಿಸಿದ್ದಾರೆ. ಕಿತ್ತು ಹೋದ ಡೋರ್‌ನ್ನು ಟಿಸಿಗೆ ಹಸ್ತಾಂತರಿಸಿದ್ದಾರೆ.ಇದನ್ನೂ ಓದಿ: ರೂಲ್ಸ್ ನೆಪದಲ್ಲಿ ಎಗ್‍ರೈಸ್ ಬಂಡಿ ವ್ಯಾಪಾರಿಗಳಿಂದ ಪೊಲೀಸರು ಲಂಚ!

ರಾಜ್ಯದಲ್ಲಿ ಶಕ್ತಿ ಯೋಜನೆ ಘೋಷಣೆ ಆದಾಗಿನಿಂದ ಎಲ್ಲೆಡೆ ಕೆಎಸ್‍ಆರ್‌ಟಿಸಿ ಬಸ್‍ಗಳು ತುಂಬಿ ತುಳುಕುತ್ತಿವೆ. ಬಹುತೇಕ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ಭೇಟಿ ನೀಡುತ್ತಿದ್ದಾರೆ. ಇದರಿಂದ ಎಷ್ಟೋ ಪ್ರಯಾಣಿಕರು ಬಸ್‍ನಲ್ಲಿ ಜಾಗ ಇಲ್ಲದೇ ಪರದಾಡಿದ್ದಾರೆ.

ಶನಿವಾರ ಕೊಳ್ಳೆಗಾಲದಲ್ಲಿ ಕೆಎಸ್‍ಆರ್‌ಟಿಸಿ ಬಸ್ ಒಂದರ ಬಾಗಿಲು ಕಿತ್ತು ಬಂದಿತ್ತು. ಇದೀಗ ಅದೇ ರೀತಿಯ ಘಟನೆ ಮಳವಳ್ಳಿ ಪಟ್ಟಣದಲ್ಲಿ ಮರುಕಳಿಸಿದೆ. ಇದನ್ನೂ ಓದಿ: ರಾಜಕುಮಾರ್ ಟಾಕಳೆ ಒಬ್ಬ ಹೆಣ್ಣುಬಾಕ, ಸೆಕ್ಸ್ ಟ್ರೆಡರ್: ನವ್ಯಶ್ರೀ

Share This Article