ಮೆಟ್ರೋ ಪಿಲ್ಲರ್‌ಗೆ ಬಸ್ ಡಿಕ್ಕಿ ಪ್ರಕರಣ- ಗುಂಡಿ ಅನಾಹುತ ಅಲ್ಲವೆಂದ ಬಿಬಿಎಂಪಿ

Public TV
1 Min Read

ಬೆಂಗಳೂರು: ಮೆಟ್ರೋ ಪಿಲ್ಲರ್ ಗೆ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಪ್ರಕರಣಕ್ಕೆ ರಸ್ತೆ ಗುಂಡಿ ಕಾರಣವಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ವರದಿ ಪ್ರಕಾರ ಅದು ಹಂಪ್ ಬಳಿ ನಿಲ್ಲಿಸುವಾಗ ಗುಂಡಿ ಇಲ್ಲ ಅಂತ ಗೊತ್ತಾಗಿದೆ. ಬಸ್ ಡಿಕ್ಕಿ ಹೊಡೆದಿದೆ ಎಂಬ ಕಾರಣ ನೋಡಬೇಕಿದೆ. ಚಾಲಕರ ಬಳಿ ಪೂರ್ಣ ಮಾಹಿತಿ ಪಡೆದು ತನಿಖೆ ಆಗಬೇಕಾಗಿದೆ. ಪಾಲಿಕೆ ಕಾರಣ ಎಂದು ಹೇಳಲು ಆಗಲ್ಲ. ಗುತ್ತಿಗೆದಾರರೇ ಅದನ್ನ ಮಾಡಬೇಕಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಮೆಟ್ರೋ ಪಿಲ್ಲರ್‌ಗೆ KSRTC ಬಸ್ ಡಿಕ್ಕಿ- ನಾಲ್ವರು ಗಂಭೀರ

ಇದೇ ವೇಳೆ ಹೊಸ ಕಮೀಷನರ್ ಹೊಸ ರೂಲ್ಸ್ ಜಾರಿಗೆ ತಂದರು. ಬಿಬಿಎಂಪಿ ಅಧಿಕಾರ ವಿಕೇಂದ್ರಿಕರಣ ಮಾಡಿ ಎಲ್ಲ ವಲಯ ವಿಶೇಷ ಆಯುಕ್ತರಿಗೆ ವಿಶೇಷ ಅಧಿಕಾರ ನೀಡಿದರು. ತಮ್ಮ ನೇಮಕಾತಿ ಆಗಿರುವ ವಲಯಗಳ ಆಗು ಹೋಗು- ಕುಂದು ಕೊರತೆ ನಿತ್ಯ ವಿಸಿಟ್ ಮಾಡಬೇಕು. ಬೆಳಗ್ಗೆ 8 ರಿಂದಲೇ ರೌಂಡ್ಸ್ ಮಾಡಬೇಕು. 10 ಗಂಟೆಯಿಂದ 5 ಗಂಟೆವರೆಗೂ ವಲಯ ಕಚೇರಿ ಹಾಗೂ ಕೇಂದ್ರ ಕಚೇರಿಗಳಲ್ಲಿ ಲಭ್ಯ ಇರಬೇಕು ಎಂದರು. ಇದನ್ನೂ ಓದಿ: ಸುಪ್ರಭಾತ ಅಭಿಯಾನ ಆರಂಭಿಸುತ್ತಿರುವವರು ಉಗ್ರರು : ಹರಿಪ್ರಸಾದ್‌

ಬಿಬಿಎಂಪಿ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರೊಂದಿಗೆ ಚರ್ಚೆ ನಡೆಸಿ ವಿಶೇಷ ಆಯುಕ್ತರು ನೀಡಿದ್ದ ಆದೇಶ ಸೂಚನೆ, ಜಂಟಿ ಆಯುಕ್ತರು ಮುಖ್ಯ ಅಭಿಯಂತರರಿಗೆ ಮಾಹಿತಿ ಕೊಡಬೇಕು. ಕಮೀಷನರ್ ಆಡಳಿತ ನಿರ್ಧಾರಕ್ಕೆ ಮಾತ್ರ ಸೀಮಿತ. ಎಲ್ಲ ಕಮೀಷನರ್ ವಾರದ ಪ್ರತಿ ದಿನ ಒಬ್ಬೊರಂತೆ ಮಾಧ್ಯಮದ ಜತೆ ಮಾತನಾಡಬೇಕು. ಕಮೀಷನರ್ ಬುಧವಾರ 11 ಗಂಟೆಗೆ ಮಾತ್ರ ಮಾತನಾಡ್ತಾರೆ. ಕೆಲಸ ಜಾಸ್ತಿ, ಮಾತು ಕಡಿಮೆ. 10 ಗಂಟೆಗೆ ಎಲ್ಲರೂ ಟೇಬಲ್ ಮೇಲೆ ಇರಬೇಕು ಎಂದು ತುಷಾರ್ ಗಿರಿನಾಥ್ ಹೊಸ ರೂಲ್ಸ್ ಹೊರಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *