IND Vs SA T20 – ರದ್ದಾದ ಪಂದ್ಯದ ಶೇ.50 ರಷ್ಟು ಟಿಕೆಟ್ ಹಣ ಜುಲೈ 1ರಿಂದ ವಾಪಸ್

Public TV
1 Min Read

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 19ರಂದು ನಿಗದಿಯಾಗಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ 5ನೇ ಟಿ20 ಕ್ರಿಕೆಟ್ ಪಂದ್ಯವು ಮಳೆಯಿಂದಾಗಿ ರದ್ದಾದ ಹಿನ್ನೆಲೆಯಲ್ಲಿ ಎಲ್ಲ ಮಾದರಿಯ (ಕಾಂಪ್ಲಿಮೆಂಟ್ರಿ ಪಾಸ್ ಹೊರತುಪಡಿಸಿ) ಟಿಕೆಟ್‌ಗಳ ಶೇ.50ರಷ್ಟು ಹಣವನ್ನು ಹಿಂತಿರುಗಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ – ಸಂಸ್ಥೆ (ಕೆಎಸ್‌ಸಿಎ) ನಿರ್ಧರಿಸಿದೆ.

ಆನ್‌ಲೈನ್ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಖರೀದಿಸಲಾಗಿದ್ದ ವಿವಿಧ ಮೊತ್ತದ ಟಿಕೆಟ್‌ಗಳ ಅರ್ಧದಷ್ಟು ಹಣವನ್ನು ಜುಲೈ 1, 2 ಹಾಗೂ 3ರಂದು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆ ಒಳಗೆ ಮರುಪಾವತಿ ಮಾಡಲಾಗುವುದು ಕೆಎಸ್‌ಸಿಎ ತಿಳಿಸಿದೆ. ಇದನ್ನೂ ಓದಿ: ಕನ್ನಡಿಗ ಮಯಾಂಕ್‌ಗೆ ದಿಢೀರ್‌ ಬುಲಾವ್ – ಟೀಂ ಇಂಡಿಯಾಗೆ ಬನ್ನಿ

ಷರತ್ತುಗಳು ಅನ್ವಯ: ಟಿಕೆಟ್ ಅಸಲಿ, ನಕಲಿ ಬಗ್ಗೆ ಪರಿಶೀಲನೆ, ಟಿಕೆಟ್ ಮೇಲೆ ಬರೆದಿರುವುದಾಗಲಿ, ಮಡಚಿರುವುದಾಗಲಿ ಮಾಡಿರಬಾರದು ಮತ್ತು ಟಿಕೆಟ್ ಸಮವಾಗಿ ಗೋಚರಿಸುವಂತಿರಬೇಕು. ಒಬ್ಬ ವ್ಯಕ್ತಿ ಗರಿಷ್ಠ 5 ಟಿಕೆಟ್‌ಗಳ ಹಣವನ್ನು ಮಾತ್ರ ಹಿಂಪಡೆಯಬಹುದು. ಇದನ್ನೂ ಓದಿ: ಐರ್ಲೆಂಡ್ ವಿರುದ್ಧ ಶುಭಾರಂಭ ಕಂಡ ಭಾರತ – ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ ದೀಪಕ್ ಹೂಡಾ

ಒಂದು ವೇಳೆ ಕೌಂಟರ್‌ನಲ್ಲಿ ವಿವಿಧ ಕಾರಣಗಳಿಗಾಗಿ ಕೊಡುವುದು ನಿರಾಕರಿಸಿದರೆ ಅದು ಕೆಎಸ್‌ಸಿಎ ಅಂತಿಮ ನಿರ್ಧಾರವಾಗಿರುತ್ತದೆ ಅಥವಾ ಷರತ್ತುಗಳಿಂದ ನಿರಾರಿಸಲಾಗಿರುತ್ತದೆ ಅಷ್ಟೇ ಎಂದು ಸೂಚಿಸಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *