ಜನರ ದುಡ್ಡಲ್ಲಿ ಕಾಂಗ್ರೆಸ್ ದೆಹಲಿಯಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಆರಂಭಿಸಿದೆ: ಈಶ್ವರಪ್ಪ ವ್ಯಂಗ್ಯ

Public TV
1 Min Read

ಶಿವಮೊಗ್ಗ: ಜನರ ದುಡ್ಡಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಲೋಕಸಭಾ ಚುನಾವಣೆಯ ಮೊದಲ ಪ್ರಚಾರವನ್ನು ಕಾಂಗ್ರೆಸ್ (Congress) ಆರಂಭ ಮಾಡಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ರಾಜ್ಯ ಸರ್ಕಾರದ ಪ್ರತಿಭಟನೆಯನ್ನು ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ದುಡ್ಡಲ್ಲಿ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ ಎಂದು ತೋರಿಸಿದ್ದಾರೆ. ಏರ್ ಟಿಕೆಟ್, ಊಟ ತಿಂಡಿ, ರೂಮ್ ಬಾಡಿಗೆಗೆ ಜನರ ತೆರಿಗೆ ದುಡ್ಡು ಬಳಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅಮ್ಮಾ ನಿರ್ಮಲಾ, ನಮ್ಮ ದುಡ್ಡು ನೀಡಮ್ಮ: ಸಿದ್ದರಾಮಯ್ಯ

ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ವಿನಯ್ ಕುಲಕರ್ಣಿ ವಾದ ಮಂಡಿಸಿದ್ದಾರೆ. ಇದರ ಪೀಠಿಕೆಯನ್ನು ಡಿ.ಕೆ ಸುರೇಶ್ ಹಾಕಿದ್ದರು. ಅಧಿಕಾರಕ್ಕಾಗಿ ದೇಶವನ್ನು ಹಿಂದೂಸ್ತಾನ ಹಾಗೂ ಪಾಕಿಸ್ತಾನ ಎಂದು ಒಡೆದಿದ್ದೀರಿ. ಈ ಬಗ್ಗೆ ನಾನು ಖರ್ಗೆ ಅವರನ್ನು ಪ್ರಶ್ನೆ ಮಾಡುತ್ತೇನೆ. ರಾಜ್ಯಸಭೆಯಲ್ಲಿ ಅಖಂಡ ಭಾರತವನ್ನು ಒಡೆಯಲು ಬಿಡಲ್ಲ ಎಂದು ನೀವು ಹೇಳಿದ್ದೀರಿ. ನಿಮ್ಮ ಮಾತಿಗೆ ಸ್ವಲ್ಪವೂ ಕಿಮ್ಮತ್ತಿಲ್ಲ. ನೀವು ಹೇಳಿದರೂ ನಿಮ್ಮ ಆ ರಾಷ್ಟ್ರ ದ್ರೋಹಿಗಳು ಮಾತನಾಡ್ತಾರೆ. ಡಿ.ಕೆ ಸುರೇಶ್ ಹಾಗೂ ವಿನಯ್ ಕುಲಕರ್ಣಿಯವರನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಖರ್ಗೆಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಅವರು ಕಿಡಿಕಾರಿದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮುಖಕ್ಕೆ ಹೊಡೆದಂತೆ ಕಾಂಗ್ರೆಸ್ಸಿಗರಿಗೆ ಉತ್ತರ ಕೊಟ್ಟಿದ್ದಾರೆ. ಡಿಕೆಶಿ ದೆಹಲಿಗೆ ಬಂದಾಗ ತುಂಬ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದೇನೆ. ಅನುದಾನ ನಿಗದಿ ಮಾಡುವುದು ಕೇಂದ್ರ ಹಣಕಾಸು ಆಯೋಗ. ಇದರಲ್ಲಿ ನಮಗೆ ಅಧಿಕಾರ ಇಲ್ಲ ಎಂದು ಅವರು ತಿಳಿಸಿದ್ದರು. ಕಾಂಗ್ರೆಸ್‍ನ ನಿಯೋಗ ಹೋಗಿರುವುದು ಪ್ರಧಾನಿ ಬಳಿಗಲ್ಲ, ಜಂತರ್ ಮಂತರ್‍ನಲ್ಲಿ ಪ್ರದರ್ಶನಕ್ಕೆ ಎಂದು ಅವರು ವ್ಯಂಗ್ಯವಾಡಿದರು. ಇದನ್ನೂ ಓದಿ: ಗ್ಯಾರಂಟಿಯನ್ನು ಪೂರ್ಣ ಜಾರಿ ಮಾಡದೇ ಕೇಂದ್ರದ ಮೇಲೆ ಗೂಬೆ: ವಿಜಯೇಂದ್ರ ಕಿಡಿ

Share This Article