ಓಬಿಸಿ ಮೀಸಲಾತಿ ಕೈಬಿಟ್ಟು ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸುವುದಿಲ್ಲ: ಈಶ್ವರಪ್ಪ

Public TV
2 Min Read

ಬೆಂಗಳೂರು: ಹಿಂದುಳಿದ ವರ್ಗಗಳ ಮೀಸಲಾತಿ ಬಿಟ್ಟು ಯಾವುದೇ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ‌ಮಾಡೋದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌ ಈಶ್ವರಪ್ಪ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಮೀಸಲಾತಿ‌ ಬಿಟ್ಟು ಚುನಾವಣೆ ಮಾಡೋದಿಲ್ಲ ಎಂದು ಭರವಸೆ ಕೊಟ್ಟಿದ್ದಾರೆ.

ಜಿಲ್ಲಾ ಪಂಚಾಯಿತಿ ಚುನಾವಣೆ ಯಾಕೆ ಮಾಡುತ್ತಿಲ್ಲ.‌ ಯಾವಾಗ ಜಿಲ್ಲಾ ಪಂಚಾಯಿತ ಚುನಾವಣೆ ನಡೆಸುತ್ತೀರಾ? ಈಗಾಗಲೇ 11 ತಿಂಗಳಿಂದ ಆಡಳಿತ ಅಧಿಕಾರಿಗಳು ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ನಡೆಸುತ್ತಿದ್ದಾರೆ.  ಎಷ್ಟು ದಿನಗಳಲ್ಲಿ ಚುನಾವಣೆ ಮಾಡ್ತೀರಾ.?ವಿಧಾನಸಭೆ ಮಾತ್ರ ಇಟ್ಟುಕೊಂಡು ಎಲ್ಲಾ ಇಲಾಖೆ ಮುಚ್ಚಿ ಬಿಡಿ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಅತಂತ್ರ ಫಲಿತಾಂಶ – ಕುದುರೆ ವ್ಯಾಪಾರಕ್ಕೆ ವೇದಿಕೆ ಸಜ್ಜು

ಚುನಾವಣೆ ಆಯೋಗಕ್ಕೆ ಚುನಾವಣೆ ಮಾಡಲು ನಾವು ಪತ್ರ ಬರೆದೇವು. ಆಗ ಚುನಾವಣೆ ಆಯೋಗ ಚುನಾವಣೆ ಕ್ಷೇತ್ರಗಳ ಸೀಮಾ ನಿರ್ಣಯ ಮಾಡಿತು.‌ ಇದರ ವಿರುದ್ದ 888 ಆಕ್ಷೆಪಣೆ ಬಂದವು.‌ ಹೀಗಾಗಿ ಸೀಮಾ ನಿರ್ಣಯ ಮಾಡಲು ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಸಮಿತಿ ವರದಿ ಬಂದ ಕೂಡಲೇ ಚುನಾವಣೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್ ಸೋಲಿನ ಅಸಲಿಯತ್ತು ಬಹಿರಂಗ

ಆತಂಕ ವಿಚಾರ ಅಂದರೆ ಓಬಿಸಿ ವಿಚಾರವಾಗಿ ಸುಪ್ರೀಂಕೋರ್ಟ್ ಒಂದು ತೀರ್ಪು ನೀಡಿದೆ. ಓಬಿಸಿ ಮೀಸಲಾತಿ ಬಿಟ್ಟು ಚುನಾವಣೆ ನಡೆಸುವಂತೆ ಹೇಳಿದೆ. ಇದು ನಮಗೆ ಸಮಸ್ಯೆ ಆಗ್ತಿದೆ. ಹೀಗಾಗಿ ಓಬಿಸಿ ಮೀಸಲಾತಿ ಇಟ್ಟುಕೊಂಡು ಚುನಾವಣೆ ಮಾಡಲು ಸರ್ಕಾರ ಚರ್ಚೆ ಮಾಡುತ್ತೇವೆ. ಈಗಾಗಲೇ ಸಿಎಂ ಜೊತೆ ಸಭೆ ಮಾಡಲಾಗಿದೆ. ಓಬಿಸಿ ಮೀಸಲಾತಿ ಸೇರಿಸಿಕೊಂಡು ಚುನಾವಣೆ ಮಾಡಲು ಕಾನೂನು ತಜ್ಞರ ಜೊತೆ ಚರ್ಚೆ ಆಗ್ತಿದೆ. ಈ ಬಗ್ಗೆ ಚರ್ಚೆ ಮಾಡಿ ಶೀಘ್ರವೇ ನಿರ್ಧಾರ ಮಾಡುತ್ತೇವೆ. ಓಬಿಸಿ ಮೀಸಲಾತಿ ಬಿಟ್ಟು ಸರ್ಕಾರ ಯಾವುದೇ ಕಾರಣಕ್ಕೂ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಸೊಲ್ಲ ಅಂತ ಭರವಸೆ ಕೊಟ್ಟರು.

ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸಿದ್ದರಾಮಯ್ಯರಿಂದ ಮೋಸ: ಚರ್ಚೆ ವೇಳೆ‌ ವಿಪಕ್ಷ ನಾಯಕ ಹರಿಪ್ರಸಾದ್,‌ ಸಿದ್ದರಾಮಯ್ಯ ಅವಧಿಯಲ್ಲಿ ಜಾತಿ ಗಣತಿ ಆಗಿದೆ. ಕಾಂತರಾಜು ಆಯೋಗದ ಗಣತಿ ಅಂಕಿಅಂಶಗಳನ್ನ ಸುಪ್ರೀಂಕೋರ್ಟ್‌ಗೆ ನೀಡಿ‌ ಮೀಸಲಾತಿ ಬಗ್ಗೆ ತೀರ್ಮಾನ ಮಾಡಿ ಅಂತ ಸಲಹೆ ನೀಡಿದರು. ಅಲ್ಲದೆ ನೀವು ಅಧಿಕಾರದಿಂದ ಇಳಿಯೋ ಮುನ್ನ ಓಬಿಸಿಗೆ ಒಳ್ಳೆ ಕೆಲಸ ಮಾಡಿ ಎಂದರು.‌ ಇದಕ್ಕೆ ತಿರುಗೇಟು ಕೊಟ್ಟ ಸಚಿವ ಈಶ್ವರಪ್ಪ, ನಿಮ್ಮ ಬಾಯಿಗೆ ಸಕ್ಕರೆ ಹಾಕಲಾ? ಚಿಕನ್ ಹಾಕಲಾ? ಮೀನು ಹಾಕಲಾ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂತೀರಾ ನೀವು. ಹಿಂದುಳಿದ ವರ್ಗಗಳಿಗೆ ರಾಜ್ಯದಲ್ಲಿ ಯಾರಾದ್ರು ಮೋಸ ಮಾಡಿದ್ರೆ ಅದು ಸಿದ್ದರಾಮಯ್ಯ ಮಾತ್ರ . ಓಬಿಸಿ ಜನಾಂಗಕ್ಕೆ‌ ಸಿದ್ದರಾಮಯ್ಯ ಏನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಮಧ್ಯೆ ಪ್ರವೇಶ ಮಾಡಿದ ಹರಿಪ್ರಸಾದ್, ನಿಮ್ಮ ಮತ್ತು ಸಿದ್ದರಾಮಯ್ಯ ನಡುವೆ ಇರೋ ಮ್ಯಾಚ್ ಫಿಕ್ಸಿಂಗ್ ನಮಗೆ ಗೊತ್ತಿಲ್ಲ. ಅದಕ್ಕೆ ಸಚಿವ ಈಶ್ವರಪ್ಪ, ನನ್ನ ಸಿದ್ದರಾಮಯ್ಯ ಸಂಬಂಧ ಈ ಜನ್ಮದಲ್ಲಿ ಯಾರಿಗೂ ಗೊತ್ತಾಗೊಲ್ಲ ಎಂದು ಟಾಂಗ್ ಕೊಟ್ಟರು. ಅಲ್ಲದೆ ಕಾಂತರಾಜು ವರದಿ ಆಯೋಗದ ಅಂಕಿಅಂಶಗಳನ್ನ ಬಳಕೆ ಮಾಡಲು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *