ಶೂ ಧರಿಸಿಯೇ ಕೆರೆಗೆ ಬಾಗಿನ ಸಲ್ಲಿಸಿ, ಗಂಗಾಮಾತೆಗೆ ಆರತಿ ಬೆಳಗಿದ ಕೆ.ಎಸ್.ಈಶ್ವರಪ್ಪ

Public TV
2 Min Read

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಕಳಸಕೊಪ್ಪ ಗ್ರಾಮದಲ್ಲಿ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತುಂಬಿದ ಕೆರೆಗೆ ಶೂ ಹಾಕಿಕೊಂಡೇ ಪೂಜೆ ಸಲ್ಲಿಸಿದ್ದಾರೆ. ಇತ್ತ ಈಶ್ವರಪ್ಪ ಅವರ ಪಕ್ಕದಲ್ಲಿ ನಿಂತಿದ್ದ ಶಾಸಕ ಮುರುಗೇಶ್ ನಿರಾಣಿ ಶೂ ಬಿಚ್ಚುವಂತೆ ಕಿವಿಯಲ್ಲಿ ಪಿಸುಗುಟ್ಟಿದ್ದರೂ ಶೂ ಬಿಚ್ಚಲು ಮುಂದಾಗಲಿಲ್ಲ.

ಕಲಾದಗಿ ಏತನೀರಾವರಿ ಯೋಜನೆಯ ಮೂಲಕ ಕಳಸಕೊಪ್ಪ ಕೆರೆಗೆ ನೀರು ತುಂಬಿಸಿದ ಬಳಿಕ ಮಾತನಾಡಿದ ಈಶ್ವರಪ್ಪನವರು, ನಮ್ಮಲ್ಲಿ ಟಿಪ್ಪು ರಕ್ತ ಹರಿಯುತ್ತಿಲ್ಲ. ಸ್ವಾತಂತ್ರ್ಯ ಯೋಧರ ರಕ್ತ ಹರಿಯುತ್ತಿದೆ. ಟಿಪ್ಪು ಜಯಂತಿ ಮಾಡು ಅಂತಾ ಯಾರೂ ಹೇಳಿಯೇ ಇಲ್ಲ. ಜಯಂತಿ ಆಚರಣೆಯಿಂದ ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಲಾಗುತ್ತಿದೆ. ಕಳೆದ ಟಿಪ್ಪು ಜಯಂತಿ ವೇಳೆ ನಡೆದ ಗಲಾಟೆ ವೇಳೆ ಮೃತಪಟ್ಟಿದ್ದ ವ್ಯಕ್ತಿ ಕುಟ್ಟಪ್ಪ ಮನೆಗೆ ಸಾಂತ್ವಾನ ಹೇಳಲು ಸಿಎಂ ಕುಮಾರಸ್ವಾಮಿ ಹೋಗಿದ್ದರು. ಈ ವೇಳೆ ನಾನು ಮುಖ್ಯಮಂತ್ರಿ ಅದ್ರೆ ಟಿಪ್ಪು ಜಯಂತಿ ಆಚರಣೆ ಮಾಡಲ್ಲ ಅಂತಾ ಕುಟ್ಟಪ್ಪ ಮಗನಿಗೆ ಆಶ್ವಾಸನೆ ನೀಡಿದ್ದರು. ಆದರೆ ಇಂದು ಅವರೇ ಜಯಂತಿ ಆಚರಣೆಗೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಟಿಪ್ಪು ಜಯಂತಿ ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಅದೃಷ್ಟವೋ, ದುರಾದೃಷ್ಟವೋ ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆಯುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಒಳ್ಳೆಯದಾಗಿದೆ. ಹೀಗೆ ಕುಮಾರಸ್ವಾಮಿ ಅವರು ಒಂದಿಲ್ಲೊಂದು ಕಾರಣಗಳಿಂದ ಸಿಎಂ ಆಗಿ ಮುಂದುವರಿಯುವ ಅವಕಾಶಗಳು ಲಭಿಸುತ್ತಿವೆ. ಟಿಪ್ಪು ಜಯಂತಿ ಆಚರಣೆಗೂ ಮುನ್ನ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಜನರು ಅನೋನ್ಯವಾಗಿದ್ದರು. ಕಾಂಗ್ರೆಸ್ ಸರ್ಕಾರ ಹಿಂದೂ-ಮುಸ್ಲಿಂ ಜನರ ಮಧ್ಯೆ ಜಗಳ ಹಚ್ಚಿ ನಾಟಕ ನೋಡುತ್ತಿದ್ದಾರೆ. ಇದೇ ವೇಳೆ ಪತ್ರಕರ್ತರೊಬ್ಬರ ಜನಾರ್ದನ ರೆಡ್ಡಿ ವಿಚಾರವಾಗಿ ಪ್ರಶ್ನೆ ಕೇಳುತ್ತಿದ್ದಂತೆ ಗರಂ ಆದ ಈಶ್ವರಪ್ಪ ಅದಕ್ಕೂ ನಮಗೂ ಸಂಬಂಧವಿಲ್ಲ. ಆ ವಿಚಾರವಾಗಿ ಏನನ್ನು ಕೇಳಬೇಡಿ ಎಂದು ಕೈ ಮುಗಿದು ಹೊರಟರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *