ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟು (KRS Dam) ಅಂದರೆ ಈ ಭಾಗದ ರೈತರ ಜೀವಾಳ ಹಾಗೂ ಮಹಾನಗರಗಳಿಗೆ ದಣಿವು ಉಣಿಸುವ ಜೀವನಾಡಿ. ಸದ್ಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ (Rain) ಬೀಳುತ್ತಿರುವ ಹಿನ್ನೆಲೆ ಈ ಜಲಾನಯನ ಭರ್ತಿಯ ಅಂಚಿಗೆ ತಲುಪುತ್ತಿದೆ. ಈ ಸಂದರ್ಭದಲ್ಲಿ ಕನ್ನಂಬಾಡಿ (Kannambadi) ಕಟ್ಟೆ 45 ವರ್ಷಗಳ ಇತಿಹಾಸದಲ್ಲಿ ವಿಶೇಷ ದಾಖಲೆಯನ್ನು ಬರೆಯಲು ಕಾತುರದಲ್ಲಿದೆ.
ಪ್ರತಿವರ್ಷ ಕೆಆರ್‌ಎಸ್ ಡ್ಯಾಂ ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಭರ್ತಿಯಾಗುತ್ತಿತ್ತು. ಆಗೊಮ್ಮೆ ಈಗೋಮ್ಮೆ ಜುಲೈ ತಿಂಗಳಿನಲ್ಲಿ ಭರ್ತಿಯಾಗಿರುವ ಒಂದೆರಡು ಉದಾಹರಣೆ ಇದೆ. ಆದರೆ ಈ ಬಾರಿ ಜೂನ್ ತಿಂಗಳಿನಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಕೆಆರ್‌ಎಸ್ ಡ್ಯಾಂ ಭರ್ತಿಗೆ 9 ಅಡಿ ಅಂದ್ರೆ 12 ಟಿಎಂಸಿ ನೀರು ಅಷ್ಟೇ ಬೇಕಿರೋದು. ಹೀಗೆ ಮಳೆ ಬಿದ್ದರೆ ಕೆಆರ್‌ಎಸ್ ಡ್ಯಾಂ ಕೆಲ ದಿನಗಳಲ್ಲಿ ಭರ್ತಿಯಾಗಲಿದೆ. 1980 ರಿಂದ ಇಲ್ಲಿಯವರೆಗೆ ಜೂನ್ ತಿಂಗಳಿನಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗಿರುವ ಉದಾಹರಣೆಯೇ ಇಲ್ಲ. ಇದೇ ತಿಂಗಳು ಕೆಆರ್‌ಎಸ್ ಭರ್ತಿಯಾದ್ರೆ ದಾಖಲೆಯ ಪುಟಕ್ಕೆ ಕನ್ನಂಬಾಡಿ ಕಟ್ಟೆ ಸೇರಲಿದೆ. ಇದನ್ನೂ ಓದಿ: ವಿದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿಗೆ ವಾಪಸ್ – ಬರ್ತಿದ್ದಂತೆ ಕೇಂದ್ರದ ವಿರುದ್ಧ ವಾಗ್ದಾಳಿ
ಒಟ್ಟಾರೆ ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂ ಜೂನ್ ತಿಂಗಳಿನಲ್ಲಿ ಭರ್ತಿಯತ್ತ ಸಾಗುತ್ತಿರೋದು ಈ ಭಾಗದ ಜನರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇದನ್ನೂ ಓದಿ: ಕಾಲ್ತುಳಿತ ತನಿಖೆಗೆ ಇನ್ನೊಂದು ವಾರ ಗಡುವು ಕೇಳಲು ಚಿಂತನೆ – ಸಿಸಿಟಿವಿ ಫೂಟೇಜ್ ನೀಡುವಂತೆ ಡಿಸಿ ಪತ್ರ